ಪಿರಿಯಾಪಟ್ಟಣ: ರೈತರು ಗುಣಮಟ್ಟದ ಹಾಲು ಪೂರೈಸುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಮೈಮುಲ್ ವಿಸ್ತರಣಾಧಿಕಾರಿ ವೀಣಾ ತಿಳಿಸಿದರು.
ತಾಲ್ಲೂಕಿನ ಸುಳಗೋಡು ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2020-21 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ತಾಲ್ಲೂಕಿನಲ್ಲಿ 180 ಸಂಘಗಳು ಯಾವುದೇ ರೀತಿಯ ಸಮಸ್ಯೆ ಇಲ್ಲದೆ ಹೆಚ್ಚಿನ ಲಾಭದತ್ತ ಸಾಗುತ್ತಿದ್ದು, ಪ್ರತಿ ತಿಂಗಳು 12 ಕೋಟಿ ಹಣವನ್ನು ರೈತರಿಗೆ ಬಟವಾಡೆ ಮಾಡಲಾಗುತ್ತಿದೆ ಆದ್ದರಿಂದ ರೈತರು ಹೈನುಗಾರಿಕೆಯನ್ನು ಉಪಕಸುಬನ್ನಾಗಿ ಮಾಡಿ ಕೊಂಡಲ್ಲಿ ಕೃಷಿ ಮತ್ತು ಕುಟುಂಬದ ದೈನಂದಿನ ಖರ್ಚು ವೆಚ್ಚ ಸರಿದೂಗಿಸಿ ಕುಟುಂಬದ ನಿರ್ವಹಣೆಗೆ ಸಹಕಾರಿ ಯಾಗಲಿದೆ ತಾಲ್ಲೂಕಿನಾದ್ಯಂತ ಹಾಲು ಉತ್ಪಾದಕರ ಸಹಕಾರ ಸಂಘಗಳು ಲಾಭದತ್ತ ಸಾಗುತ್ತಿದ್ದು ಯಾವುದೇ ಪಕ್ಷಬೇಧ ಮರೆತು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸರ್ಕಾರದಿಂದ ಬರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.
ಹಿಂದೆ ತಾಲ್ಲೂಕಿನಲ್ಲಿ 60 ಸಾವಿರ ಲೀಟರ್ ಹಾಲು ಒಕ್ಕೂಟಕ್ಕೆ ಬರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ರೈತರು ಗುಣಮಟ್ಟದ ಹಾಲನ್ನು ಹಾಕುವ ಮೂಲಕ ದಿನಕ್ಕೆ ದಿನಕ್ಕೆ 1.40 ಲಕ್ಷದ ಲೀಟರ್ ಹಾಲು ಒಕ್ಕೂಟಕ್ಕೆ ರವಾನೆಯಾಗುತ್ತಿದೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಬಿಎಂಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅತಿ ಹೆಚ್ಚು ಮತಗಳನ್ನು ನೀಡಿ ಗೆಲುವಿಗೆ ಸಹಕರಿಸಿದ್ದ ಷೇರುದಾರರ ಋಣ ತೀರಿಸುವ ಸಲುವಾಗಿ ತಾಲ್ಲೂಕಿನ ಸಹಕಾರ ಸಂಘಗಳಿಗೆ ಕಂಪ್ಯೂಟರ್, ಬಿಎಂಸಿ ಕೇಂದ್ರಗಳು, ನೂತನ ಡೇರಿ ಸ್ಥಾಪನೆ ಸೇರಿದಂತೆ ಅತಿ ಹೆಚ್ಚು ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವೀಣಾ, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಹೆಚ್.ಎನ್.ರತ್ನಮ್ಮ, ಉಪಾಧ್ಯಕ್ಷೆ ಶ್ವೇತಾ, ನಿರ್ದೆಶಕರಾದ ಮಲ್ಲಿಗೆ, ರೇಖಾ, ಸಂಗೀತಾ, ರುಕ್ಮೀಣಿ, ರತ್ನ, ಮಂಜುಳ, ಕಮಲಮ್ಮ, ಸುನಂದಮ್ಮ ಮುಖ್ಯ ಕಾರ್ಯನಿರ್ವಣಾಧಿಕಾರಿ ರತ್ನ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.