ಮುಂಬಯಿ: ದಹಿಸರ್ ಪೂರ್ವ ರಾವಲ್ಪಾಡಾದ ಶ್ರೀ ದುರ್ಗಾ ಪರಮೇಶ್ವರಿ ಮತ್ತು ಶ್ರೀ ಶನೀಶ್ವರ ದೇವಸ್ಥಾನದ ವಾರ್ಷಿಕ ಮಹೋತ್ಸವ ಹಾಗೂ ಸಾಂಸ್ಕೃತಿಕ, ಸಮ್ಮಾನ ಕಾರ್ಯಕ್ರಮವು ಫೆ. 9ರಿಂದ ದೇವಸ್ಥಾನದ ಆವರಣದಲ್ಲಿ ಎರಡು ದಿನಗಳ ಕಾಲ ನಡೆಯಿತು.
ಡೊಂಬಿವಲಿಯ ಬ್ರಹ್ಮಶ್ರೀ ಶಂಕರ ನಾರಾಯಣ ತಂತ್ರಿಯವರ ಪೌರೋಹಿತ್ಯದಲ್ಲಿ ಮಂದಿರದ ಪ್ರಧಾನ ಅರ್ಚಕರಾದ ಶಂಕರ ಗುರು ಭಟ್ ಮತ್ತು ಗುರುಶಂಕರ ಭಟ್ ಅವರ ನೇತೃತ್ವದಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಗಣಪತಿ ಹಾಗೂ ಶ್ರೀ ಶನಿದೇವರಿಗೆ ನವಕಲಶ, ಪ್ರಧಾನ ಹೋಮ, ಶನಿಶಾಂತಿ, ನಾಗದೇವರ ಸನ್ನಿಧಾನದಲ್ಲಿ ಪವಮಾನ ಕಲಶಾಭಿಷೇಕ, ಗುಳಿಗ ದೈವಕ್ಕೆ ಪಂಚ ಕಲಶಾಭಿಷೇಕ, ಶ್ರೀ ದೇವಿಯ ಸನ್ನಿಧಾನದಲ್ಲಿ 25 ಕಲಶಾರಾಧನೆ, ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಸ್ವರ್ಣಾಲಂಕಾರ, ಸೇವೆ ಪಲ್ಲಪೂಜೆ ಜರಗಿತು.
ಮಧ್ಯಾಹ್ನ ಅನ್ನಸಂತರ್ಪಣೆ, ಅಪರಾಹ್ನ ಭಜನೆ, ಶ್ರೀ ಶನಿಗ್ರಂಥ ಪಾರಾಯಣ, ಸಿ. ಎನ್. ಪೂಜಾರಿ ಅವರಿಂದ ಶ್ರೀ ದೇವಿ ಆವೇಶ, ಬಲಿ ಉತ್ಸವ, ಕಟ್ಟೆಪೂಜೆ ನೆರವೇರಿತು. ವಿವಿಧ ಪೂಜಾ ಕೈಂಕರ್ಯದಲ್ಲಿ ಕೆ. ಗೋವಿಂದ ಮೂರ್ತಿ ಭಟ್, ಗೋಪಾಲಕೃಷ್ಣ ಸಾಮಗ, ಶ್ರೀನಿವಾಸ ಭಟ್, ರಾಮ ಭಟ್, ನಟೇಶ್ ಅಮ್ಮಣ್ಣಾಯ, ರಜನೀಶ್ ಸಾಮಗ, ಯತಿರಾಜ್ ಉಪಾಧ್ಯಾಯ, ಸ್ವಸ್ತಿಕ್ ಭಟ್, ಬಾಲಕೃಷ್ಣ ಭಟ್, ಉದಯ ಶಂಕರ ಸಹಕರಿಸಿದರು.
ರಾತ್ರಿ ಜರಗಿದ ಧಾರ್ಮಿಕ ಸಭೆಯಲ್ಲಿ ಪೊವಾಯಿ ಶ್ರೀ ರುಂಡ ಮಾಲಿನಿ ದೇವಸ್ಥಾನದ ಧರ್ಮದರ್ಶಿ ಸುವರ್ಣ ಬಾಬಾ ಅವರು ಆಶೀರ್ವಚನ ನೀಡಿ, ಶ್ರೀ ದುರ್ಗಾಪರಮೇಶ್ವರಿ ಮತ್ತುಶ್ರೀ ಶನೀಶ್ವರ ದೇವಸ್ಥಾನ ಗಳಿರುವ ದಹಿಸರ್ ರಾವಲ್ಪಾಡವು ಪವಿತ್ರ ಸ್ಥಳವಾಗಿ ಅಭಿವೃದ್ಧಿ ಹೊಂದಲಿ.ಭಕ್ತರಜನರ ಇಷ್ಟಾರ್ಥದೊಂದಿಗೆ ಅವರ ಮೂಲಭೂತ ಸೌಕರ್ಯಗಳು ದೇವಸ್ಥಾನದಿಂದ ಸಿಗುವಂತಾಗಬೇಕು. ಧಾರ್ಮಿಕ ಮಹೋತ್ಸವದೊಂದಿಗೆ, ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಶ್ರೇಯೋಭಿವೃದ್ಧಿಗೆ ಸರ್ವ ಸೇವಾ ಕಾರ್ಯಕರ್ತರು ಮುಂದಾಗಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಸಹಕರಿಸಿದ ಭಾಸ್ಕರ ನಾಯ್ಡು, ಕರುಣಾಕರ ಅಮೀನ್, ಚಂದ್ರಶೇಖರ ಪೂಜಾರಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಉದ್ಯಮಿ ದಾಮೋದರ ಕುಂದರ್, ಬ್ರಹ್ಮಶ್ರೀಶಂಕರ ನಾರಾಯಣ ತಂತ್ರಿ, ದೇವಸ್ಥಾನದ ಅಧ್ಯಕ್ಷ ಸಿ. ಎನ್.ಪೂಜಾರಿ ಮಾತನಾಡಿದರು. ಸಮ್ಮಾನ ಪತ್ರವನ್ನು ನ್ಯಾಯವಾದಿ ಸೌಮ್ಯಾ ಸಿ. ಪೂಜಾರಿ ವಾಚಿಸಿದರು.
ಕಾರ್ಯದರ್ಶಿ ಜಯರಾಮ ಮೆಂಡನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಧ್ಯೇಯೋದ್ದೇಶ
ಗಳನ್ನು ವಿವರಿಸಿದರು. ಮಾಜಿ ಅಧ್ಯಕ್ಷ ಲಕ್ಷ್ಮಣ್ ಪೂಜಾರಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ದೀಪಕ್ ಕೆ. ಪೂಜಾರಿ ಅವರು ಗಣ್ಯರನ್ನು ಗೌರವಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉದ್ಯಮಿ ಚಂದ್ರಶೇಖರ ಎ. ಪೂಜಾರಿ ಅವರ ಪ್ರಾಯೋಜಕತ್ವದಲ್ಲಿಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ಸಾಂತಾಕ್ರೂಜ್‌ಕಲಾವಿದರಿಂದ ಶ್ರೀದೇವಿ ಮಹಾತೆ¾ ಯಕ್ಷಗಾನ ಪ್ರದ
ರ್ಶನಗೊಂಡಿತು. ಫೆ.10 ರಂದು ಸಂಪ್ರೋಕ್ಷಣೆ, ಮಹಾ ಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಿತು.
ಚಿತ್ರ-ವರದಿ: ರಮೇಶ್ ಅಮೀನ್