Advertisement

ಕತಾರ್‌ ಕರ್ನಾಟಕ ಸಂಘದಿಂದ ವಾರ್ಷಿಕ ರಕ್ತದಾನ ಶಿಬಿರ

07:46 PM Apr 21, 2021 | Team Udayavani |

ಕತಾರ್‌ ಕರ್ನಾಟಕ ಸಂಘದಿಂದ ಎ. 9ರಂದು ವಾರ್ಷಿಕ ರಕ್ತದಾನ ಶಿಬಿರ ಹಮಾದ್‌ ವೈದ್ಯಕೀಯ ಕೇಂದ್ರದ ಹಮಾದ್‌ ರಕ್ತದಾನ ಕೇಂದ್ರದಲ್ಲಿ ನಡೆಯಿತು.

Advertisement

ಭಾರತೀಯ ಸಾಂಸ್ಕೃತಿಕ ಕೇಂದ್ರದಡಿಯಲ್ಲಿ ಭಾರತದ ಸ್ವಾತಂತ್ರೊéàತ್ಸವ ಅಮೃತ ಮಹೋತ್ಸವದ ಅಂಗವಾಗಿ ನಡೆದ ಪ್ರಥಮ ಕಾರ್ಯಕ್ರಮ ಇದಾಗಿದ್ದು, ಕೊರೊನಾ ಮಹಾಮಾರಿ ಪ್ರಸಾರವನ್ನು ತಡೆಯಲು ಎಲ್ಲರೂ ಸುರûಾ ಕ್ರಮಗಳನ್ನು ಕೈಗೊಂಡಿದ್ದು, ಅನೇಕ ಮಂದಿ ಇದರಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು.

ಕೊರೊನಾ ಎರಡನೇ ಅಲೆಯು ತೀವ್ರಗತಿಯಲ್ಲಿ ಹರಡುತ್ತಿರುವ ಸಂದರ್ಭದಲ್ಲಿಯೂ ಸಂಘವು ಸಮಾಜ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಕ್ಕೆ ಅಪಾರ ಶ್ಲಾಘನೆ ವ್ಯಕ್ತವಾಗಿದೆ.

ಸಂಘದ ಸಾಂಸ್ಕೃತಿಕ ಕಾರ್ಯದರ್ಶಿಯಾದ ಅಕ್ಷಯ ಶೆಟ್ಟಿ ಅವರು ಸ್ವಾಗತ ಭಾಷಣದ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು. ಸಂಘದ ಅಧ್ಯಕ್ಷರಾದ ನಾಗೇಶ್‌ ರಾವ್‌ ಗಣ್ಯರನ್ನು ಸ್ವಾಗತಿಸಿದರು. ಐ.ಸಿ.ಸಿ. ಅಧ್ಯಕ್ಷರಾದ ಬಾಬು ರಾಜನ್‌ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಐ.ಸಿ.ಸಿ. ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಟಾಗಿಲು ಕಾರ್ಯಕ್ರಮದ ಸಂಚಾಲಕರಾಗಿ ಸಕಲ ಸಿದ್ಧತೆಗಳನ್ನು ನೆರವೇರಿಸಿದರು.

ಐ.ಸಿ.ಬಿ.ಎಫ್.ಐ. ಅಧ್ಯಕ್ಷರಾದ  ಜಯೀದ್‌ ಉಸ್ಮಾನ್‌, ಕರ್ನಾಟಕ ಸಂಘದ ಪೂರ್ವಾಧ್ಯಕ್ಷರಾದ ವೇಂಕಟ ರಾವ್‌, ದೀಪಕ್‌ ಶೆಟ್ಟಿ, ವೀರಭದ್ರಪ್ಪ ಮನ್ನಂಗಿ, ಅರುಣ್‌ ಕುಮಾರ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಮೂಲದ ಇತರ ಸಹೋದರ ಸಂಸ್ಥೆಗಳಾದ ತುಳುಕೂಟ, ಬಂಟ್ಸ್‌ ಕತಾರ್‌, ಎಂ.ಸಿ.ಎ., ಕೆ.ಎಂ.ಸಿ.ಎ., ಎಂ.ಸಿ.ಸಿ. ಹಾಗೂ ಎಸ್‌.ಕೆ.ಎಂ.ಡಬ್ಲ್ಯು.ಎ. ಅಧ್ಯಕ್ಷರು ಉಪಸ್ಥಿತರಿದ್ದರು.

Advertisement

ಹಮಾದ್‌ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ| ಗಿರೀಶ್‌ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಿ, ಸಭಿಕರಿಗೆ ರಕ್ತದಾನದ ಹಿನ್ನೆಲೆ, ಉಗಮ, ಪ್ರಯೋಜನ ಮತ್ತು ಇತರ ಉಪಯುಕ್ತ ಮಾಹಿತಿಗಳನ್ನು ನೀಡಿ, ಜನ ಸಾಮಾನ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ಇದೇ ಸಂದರ್ಭದಲ್ಲಿ ಅವರು ಕರೋನಾ ಲಸಿಕೆ ಬಗ್ಗೆ ವಿವರಿಸುತ್ತ, ಪೀಡಿತರು ತೆಗೆದುಕೊಳ್ಳಬೇಕಾದ ಮುನ್ನೆಚರಿಕೆ ಕ್ರಮಗಳ ಕುರಿತು ತಿಳಿಸಿದರು. ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್‌ ಅವರು ಪಾಲ್ಗೊಂಡಿದ್ದ ಎಲ್ಲರಿಗೂ ಧನ್ಯವಾದ ಹೇಳಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next