Advertisement

ದ್ವಿಚಕ್ರ ವಾಹನಗಳಿಂದ ಆಸ್ಪತ್ರೆ ರೋಗಿಗಳಿಗೆ ಕಿರಿಕಿರಿ

12:26 PM May 12, 2017 | |

ಪಿರಿಯಾಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದ ವಾಹನಗಳ ನಿಷೇಧಿತ ಪ್ರದೇಶದಲ್ಲಿ ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳು ಹಾಗೂ ಮತ್ತಿತರೆ ವಾಹನ ಗಳನ್ನು ನಿಲ್ಲಿಸುವುದರಿಂದ ತುರ್ತು ಚಿಕಿತ್ಸೆಗೆ ಆಸ್ಪತೆಗೆ ಬರುವ ರೋಗಿಗಳಿಗೆ ತೀವ್ರ ತೊಂದರೆಯುಂಟಾಗಿದೆ.

Advertisement

ಆಸ್ಪತ್ರೆಯಲ್ಲಿ ಯಾವುದೇ 4ನೇ ದರ್ಜೆ ನೌಕರರು ವಾಹನ ಸಂಚಾರವನ್ನು ನಿಯಂತ್ರಿಸದೆ ಸಾಮಾನ್ಯ ಜನರು ತಮ್ಮ ವಾಹನ ಗಳನ್ನು ಒಳಾಂಗಣದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಈ ಪರಿಸ್ಥಿತಿ ಉಂಟಾಗಿದೆ. ಅಲ್ಲದೆ ಪೊಲೀಸ್‌ ಇಲಾಖೆ ವತಿಯಿಂದ ವಾಹನಗಳನ್ನು ನಿಲ್ಲಿಸುವಂತಿಲ್ಲವೆಂದು ಇಲ್ಲಿ ಬೋರ್ಡ್‌ ಹಾಕಿದ್ದರೂ ಇದಕ್ಕೆ ಕವಡೆಕಾಸಿನ ಕಿಮ್ಮತ್ತಿಲ್ಲದಂತಾಗಿದೆ.

ಅದರಲ್ಲೂ ತುರ್ತಾಗಿ 108 ಅಥವಾ ಖಾಸಗಿ ವಾಹನಗಳಲ್ಲಿ ತುರ್ತು ನಿಗಾ ಘಟಕಕ್ಕೆ ರೋಗಿಗಳನ್ನು ಕರೆತರಲು ಈ ದ್ವಿಚಕ್ರ ವಾಹನಗಳ ಹಾವಳಿಯಿಂದ ಚಿಕಿತ್ಸೆಗೂ ನಿಧಾನ ಪಡುವಂತಾಗಿದೆ. ಇದರಿಂದಾಗಿ ಇಲ್ಲಿ ತುರ್ತು ಚಿಕಿತ್ಸೆ ಪಡೆದು ಮೈಸೂರಿಗೆ ರೋಗಿಗಳನ್ನು ಕರೆದೊಯ್ಯ ಬೇಕಾ ದವರು ಸಾರ್ವಜನಿಕರಿಗೆ ಹಿಡಿಶಾಪ ಹಾಕುವಂತಾಗಿದೆ.

ಈ ಬಗ್ಗೆ ಆಡಳಿತ ವೈದ್ಯಾಧಿಕಾರಿ ರವಿಕುಮಾರ್‌ ಉದಯವಾಣಿ ಮಾತನಾಡಿಸಿ ದಾಗ, ಆಸ್ಪತ್ರೆಗೆ 3 ದ್ವಾರಗಳಿದ್ದು ಕನಿಷ್ಠ 6 ಮಂದಿ ಗಾರ್ಡ್‌ಗಳು ಇಲ್ಲಿ ಕೆಲಸ ನಿರ್ವಹಿಸ ಬೇಕೆಂದು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿ ಹಲವು ದಿನಗಳೆ ಕಳೆದರೂ ಇದು ವರೆಗೂ ಯಾರನ್ನೂ ಕೂಡ ನೇಮಿಸಿಲ್ಲ. ಅಲ್ಲದೆ ಪೊಲೀಸ್‌ ಇಲಾಖೆಯವರಿಗೆ ಮನವಿ ಸಲ್ಲಿಸಿದಾಗಲೂ ಅವರೂ ಕೂಡ ಕೆಲಸದ ಒತ್ತಡದಿಂದ ಯಾರನ್ನು ನೇಮಿಸಿಲ್ಲ.

ಇದರಿಂದ ಈ ಪರಿಸ್ಥಿತಿ ಉಂಟಾಗಿದ ಎಂದು ಅಸಾಹಾಯಕತೆ ವ್ಯಕ್ತಪಡಿಸಿದರು. ಈ ಬಗ್ಗೆ ಆಡಳಿತ ವೈದ್ಯಾಧಿಕಾರಿಗಳು, ಪೊಲೀಸರು ಅಥವಾ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಾಗಲೀ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡುವವರೆ ಕಾದು ನೋಡಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next