Advertisement
ವಿಮಾನ ಉದ್ಘಾಟನೆಯಂದು ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ 180 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅದರಲ್ಲಿ ಬಹುತೇಕರು ಮಂಗಳೂರಿನವರೇ ಆಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಉದ್ಘಾಟನೆಯ ಉಡುಗೊರೆಯಾಗಿ ತಮ್ಮ ಸ್ಥಳೀಯ ಭಾಷೆಯಲ್ಲಿ ಸ್ವಾಗತ ಕೋರಲಾಯಿತು. ವಿಶೇಷವೆಂದರೆ ಈ ವಿಮಾನದ ಪೈಲಟ್ ಕೂಡ ಮೂಲತಃ ಮಂಗಳೂರಿನವರು.
ಇಂಡಿಗೋ ಪರವಾದ್ ಪುರೆರ್‌ಗಲಾ ಸೊಲ್ಮೆಲು (ಪ್ರಥಮ ಬಾರಿಗೆ ಮಂಗಳೂರಿನಲ್ಲಿ ಹಾರಾಟ ನಡೆಸುತ್ತಿರುವ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಎಲ್ಲರಿಗೂ ಸ್ವಾಗತ) ಎಂದು ತುಳುವಿನಲ್ಲಿ ಹೇಳಿದರು. ಅಂತೆಯೇ ಕೊಂಕಣಿಯಲ್ಲೂ ಸ್ವಾಗತಿಸಿದರು. ವಿಮಾನವು ಬೆಂಗಳೂರು ತಲುಪುತ್ತಿದ್ದಂತೆ ಮತ್ತೆ ತುಳು, ಕೊಂಕಣಿಯಲ್ಲಿ ವಂದನೆ ಹೇಳಲಾಯಿತು. ಇಂಡಿಗೋ ತನ್ನ ಮೊದಲ ದಿನದ ಸಂಚಾರ ಆರಂಭಿಸಿದ ಹಿನ್ನೆಲೆಯಲ್ಲಿ ಈ ರೀತಿ ಸ್ಥಳೀಯ ಭಾಷೆಯನ್ನು ಬಳಸಿಕೊಂಡು ಪ್ರಯಾಣಿಕರಿಗೆ ಖುಷಿ ನೀಡುವ ಪ್ರಯತ್ನ ಮಾಡಿದೆ. ಆದರೆ ಇದು ಉದ್ಘಾಟನೆಯ ದಿನ ಮಾತ್ರವಿತ್ತು. ಸಾಮಾನ್ಯ ವಾಗಿ ಹಿಂದಿ, ಇಂಗೀÉಷ್‌ನಲ್ಲಿ ಮಾತ್ರ ಉದ್ಘೋ ಷಣೆ ಮಾಡಲಾಗುತ್ತದೆ ಎಂದು ಇಂಡಿಗೋ ವಿಮಾನದ ಮಂಗಳೂರು ವಿಭಾಗದ ಮುಖ್ಯಸ್ಥೆ ಅರ್ಚನಾ ಉದಯವಾಣಿಗೆ ತಿಳಿಸಿದ್ದಾರೆ.