Advertisement
ಕೋವಿಡ್ ನಿಯಂತ್ರಣಕ್ಕಾಗಿ ಫ್ರಂಟ್ ಲೈನ್ ವಾರಿಯರ್ ಆಗಿರುವ ಆಶಾಗಳ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಹಲ್ಲೆಗೊಳಗಾದ ಆಶಾಗಳಿಗೆ ಪರಿಹಾರ ನೀಡಬೇಕು.ಮಾರ್ಚ್ ತಿಂಗಳಿಂದ ಕೋವಿಡ್-19 ಕಾರ್ಯ ನಿರ್ವಹಣೆ ಅವಧಿಗೆ ಮಾಸಿಕ 10 ಸಾವಿರದಂತೆ ವಿಶೇಷ ಪ್ಯಾಕೇಜ್ ನೀಡಬೇಕು, ಆಶಾಗಳಿಗೆ ಅಗತ್ಯ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ವಿತರಿಸಬೇಕು. ಮದ್ಯ ಸೇವಿಸಿ, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದವರಿಗೆ ಉಗ್ರ ಶಿಕ್ಷೆ ನೀಡುವ ಜತೆಗೆ ಮದ್ಯ ಮಾರಾಟ ನಿಷೇಧಿಸಬೇಕು, ಕೋವಿಡ್-19ರಿಂದ ಮೃತಪಟ್ಟ ಆಶಾಗಳ ಕುಟುಂಬಕ್ಕೆ 50 ಲಕ್ಷ ರೂ. ವಿಮೆ ಸೌಲಭ್ಯ ಸೇವೆ ಸಲ್ಲಿಸುವ ವೇಳೆ ಆಶಾಗಳು ಮೃತರಾದರೆ ಅವರ ಕುಟುಂಬಕ್ಕೂ ಈ ವಿಮೆ ವಿಸ್ತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
Advertisement
ಫ್ರಂಟ್ ಲೈನ್ ವಾರಿಯರ್ಸ್ ಗೆ 10 ಸಾವಿರ ಪ್ಯಾಕೇಜ್ ಘೋಷಿಸಿ
10:05 AM May 30, 2020 | Suhan S |
Advertisement
Udayavani is now on Telegram. Click here to join our channel and stay updated with the latest news.