Advertisement

ಕ್ಷೇತ್ರಕ್ಕೆ ಪರ್ಯಾಯ ಅಭ್ಯರ್ಥಿ ಘೋಷಿಸಿ

04:40 PM Dec 31, 2022 | Team Udayavani |

ಹಾಸನ: ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಅಭ್ಯರ್ಥಿ ಗೊಂದಲ ನಿವಾರಿಸಬೇಕು ಎಂದು ಅರಸೀಕೆರೆ ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತರು ಪಕ್ಷದ ನಾಯಕ ರೇವಣ್ಣ ಅವರನ್ನು ಒತ್ತಾಯಿಸಿದರು.

Advertisement

ನಗರದ ಆರ್‌.ಸಿ.ರಸ್ತೆಯಲ್ಲಿರುವ ಸಂಸದರ ವಸತಿ ಗೃಹದಲ್ಲಿದ್ದ ರೇವಣ್ಣ ಅವರನ್ನು ಅರಸೀಕೆರೆ ತಾಲೂಕು ಜೆಡಿಎಸ್‌ ಮುಖಂಡರಾದ ಗಂಗಾಧರ್‌, ಕೆ.ಬಿ.ಕೇಶವಮೂರ್ತಿ ಅವರ ನೇತೃತ್ವದಲ್ಲಿ ಭೇಟಿಯಾದ ಅರಸೀಕೆರೆ ತಾಲೂಕಿನ ನೂರಾರು ಜೆಡಿಎಸ್‌ ಕಾರ್ಯಕರ್ತರು ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಜೆಡಿಎಸ್‌ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಸೇರುತ್ತಾರೆ ಎಂಬ ಊಹಾಪೋಹ ಕ್ಷೇತ್ರದಾದ್ಯಂತ ಹರದಾಡುತ್ತಿದೆ. ಶಾಸಕರ ನಡೆಯೂ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅವರು ಪಕ್ಷದಲ್ಲಿಯೇ ಇರುವರೇ ಅಥವಾ ಕಾಂಗ್ರೆಸ್‌ ಸೇರುವರೇ ಎಂಬ ಬಗ್ಗೆ ಸ್ಪಷ್ಟಪಡಿಸಿ. ಶಿವಲಿಂಗೇಗೌಡ ಅವರೇ ಸ್ಪರ್ಧಿಸು ವುದಾದರೆ ಅವರೇ ಜೆಡಿಎಸ್‌ ಅಭ್ಯರ್ಥಿ ಎಂದು ಘೋಷಣೆ ಮಾಡಿ. ಪಕ್ಷ ಸಂಘಟ ನೆಗೆ ಒತ್ತು ನೀಡಿ. ಇಲ್ಲವೇ ಪರ್ಯಾಯ ಅಭ್ಯರ್ಥಿ ಯನ್ನು ಘೋಷಣೆ ಮಾಡಿ ಗೊಂದಲ ನಿವಾರಣೆ ಮಾಡಬೇಕು ಎಂದರು.

ದಳ ಕಾರ್ಯಕರ್ತರ ಕಡೆಗಣನೆ: ಜೆಡಿಎಸ್‌ ಕಾರ್ಯಕರ್ತರಿಗಿಂತ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರಿಗೆ ಹೆಚ್ಚು ಸ್ಪಂದಿಸುತ್ತಿದ್ದಾರೆ. ಯಾವುದೇ ಕಾರ್ಯಕ್ರಮಗಳಿಗೂ ಜೆಡಿಎಸ್‌ ಮುಖಂಡರು ಕಾರ್ಯಕರ್ತರನ್ನು ಆಹ್ವಾನಿಸು ತ್ತಿಲ್ಲ. ಕಾಂಗ್ರೆಸ್‌ ಕಾರ್ಯಕರ್ತರಿಗೇ ಮಣೆ ಹಾಕುತ್ತಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರಿಗೆ ಹೆಚ್ಚು ಕೆಲಸ ಮಾಡಿಕೊಡುತ್ತಿದ್ದಾರೆ ಎಂದು ಕಾರ್ಯಕರ್ತರು ತಮ್ಮ ಆಕ್ರೋಶ ಹೊರ ಹಾಕಿ ರೇವಣ್ಣನವರ ಎದುರೇ ಕಾರ್ಯಕರ್ತರು ಕೂಗಾಡಿದರು. ಕಾರ್ಯಕರ್ತರನ್ನು ಸಮಾಧಾನ ಪಡಿಸಿಲು ರೇವಣ್ಣ ಅವರು ಪರದಾಡಿದರು.

ಕೆಎಂಶಿ ಜೆಡಿಎಸ್‌ ಬಿಡಲ್ಲ: ರೇವಣ್ಣ ವಿಶ್ವಾಸ – ಕಾರ್ಯಕರ್ತರ ಅಹವಾಲು ಆಲಿಸಿದ ನಂತರ ಮಾತ ನಾಡಿದ ಎಚ್‌.ಡಿ.ರೇವಣ್ಣ ಅವರು, ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಯಾ ವುದೇ ಕಾರಣಕ್ಕೂ ಜೆಡಿಎಸ್‌ ಬಿಡಲ್ಲ ಎಂದಿದ್ದಾರೆ. ಈ ಬಗ್ಗೆ ಸಾ.ರಾ. ಮಹೇಶ್‌ ಮ ತ್ತು ನಾನು ಕೂಡ ಅವರೊಂದಿಗೆ ಮತನಾಡಿದ್ದೇವೆ. ಅರಸೀಕೆರೆಯಲ್ಲಿ ಕೆಲವು ಗೊಂ ದಲಗಳಿದ್ದು, ಶೀಘ್ರದಲ್ಲಿಯೇ ಅದನ್ನು ಸರಿಮಾಡಿಕೊಳ್ಳುತ್ತೇವೆ. ಜ.15ರವರೆಗೆ ಸಮ ಯ ಕೊಡಿ ನಿರ್ಧಾರ ಪ್ರಕಟಿಸುವೆ ಎಂದು ಶಿವಲಿಂಗೇಗೌಡ ಅವರು ಕೇಳಿದ್ದಾರೆ. ಅಲ್ಲಿಯವರೆಗೂ ಕಾಯೋಣ ಎಂದರು.

ಜೆಡಿಎಸ್‌ನಿಂದಲೇ ಶಿವಲಿಂಗೇಗೌಡ ಅವರು ಜಿಪಂ ಸದಸ್ಯರಾಗಿ ರಾಜಕಾ ರಣ ಅರಂಭಿಸಿದವರು. ಪಕ್ಷದಿಂದ ವಿಧಾನಸಭೆಗೆ ನಾಲ್ಕು ಬಾರಿ ಟಿಕೆಟ್‌ ಪಡೆದು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಲು ನಾನೂ ಕೂಡ ಅವರಿಗೆ ಕೈಲಾದ ಸಹಾಯ ಮಾಡಿದ್ದೇನೆ. ಇಂದು ಬೆಳಿಗ್ಗೆಯೂ ಎರಡು ಬಾರಿ ನನಗೆ ಶಿವಲಿಂಗೇಗೌಡ ರೇ ಫೋನ್‌ ಮಾಡಿ ಮಾತನಾಡಿದ್ದಾರೆ. ಕೆ.ಎಂ. ಶಿವಲಿಂಗೇಗೌಡರೇ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ. ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂಬ ವಿಶಾಸ್ವ ನನಗಿದೆ ಎಂದು ರೇವಣ್ಣ ಅವರು ಹೇಳಿದರು.

Advertisement

ಕೆಎಂಶಿ ಬಗ್ಗೆ ಮೃದು ಧೋರಣೆ ಏಕೆ?: ಹಲವು ತಿಂಗಳುಗಳಿಂದ ಜೆಡಿಎಸ್‌ ಪಕ್ಷದ ಕಾರ್ಯಕ್ರಮದಲ್ಲಿ ಶಾಸಕ ಶಿವ ಲಿಂಗೇಗೌಡ ಅವರು ಪಾಲ್ಗೊಳ್ಳದೆ ಪಕ್ಷದ ಹಾಗೂ ಪಕ್ಷದ ಕಾರ್ಯಕರ್ತರಿಂದ ಅಂತರ ಕಾಯ್ದುಕೊಂಡಿದ್ದಾರೆ. ಶಿವಲಿಂಗೇಗೌಡ ಅವರು ಯಾವುದೇ ಕಾರ್ಯಕ್ರಮ ಮಾಡಿದರೂ, ಅದರಲ್ಲಿ ಜೆಡಿಎಸ್‌ ಬಾವುಟ ಬಳಸುತ್ತಿಲ್ಲ. ಹೀಗಿದ್ದರೂ ಅವರ ಬಗ್ಗೆ ಮೃದು ಧೋರಣೆ ಏಕೆ ಎಂದು ಕೆಲ ಜೆಡಿಎಸ್‌ ಕಾರ್ಯಕರ್ತರು ಏರು ದನಿಯಲ್ಲಿಯೇ ರೇವಣ್ಣ ಅವರನ್ನು ಪ್ರಶ್ನೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next