ಮಲ್ಪೆ: ಯಕ್ಷಗಾನದಲ್ಲಿ ಕಲಾವಿದರು ಒಂದೊಂದು ತುಣುಕನ್ನು ಹಲವು ಬಾರಿ ಉಚ್ಚರಿಸುವುದು. ವಿವಿಧ ವಿನ್ಯಾಸದ ನೃತ್ಯವನ್ನು ಒಂದೇ ಪದ್ಯದಲ್ಲಿ ಕುಣಿಯುವುದು. ಇತೀ¤ಚೆಗೆ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುವ ಮಟ್ಟಕ್ಕೆ ತಲುಪಿದೆ ಎಂಬ ಮಾತು ಕೇಳಿ ಬರುತ್ತಿದೆ. ಅದನ್ನು ತಡೆಗಟ್ಟುವ ಸಾಮರ್ಥ್ಯ ಇರುವುದು ಕೇವಲ ಭಾಗವತರಿಗೆ ಮಾತ್ರ ಸಾಧ್ಯ ಎಂದು ಜಾನಪದ ವಿದ್ವಾಂಸ, ಯಕ್ಷಗಾನ ಕಲಾವಿದ ಕೆ.ಎಲ್. ಕುಂಡಂತಾಯ ಹೇಳಿದರು.
ಬಡಾನಿಡಿಯೂರು ಸನ್ಯಾಸಿಮಠ ಮಕ್ಕಳ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ನಡೆದ 28ನೇ ವಾರ್ಷಿಕೋತ್ಸವದಲ್ಲಿ ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು ಯಕ್ಷಗಾನ ಕಲೆ ಒಡವೆ ಇದ್ದೂ, ಬಡವೆಯಂತಾಗಿದೆ. ಸಮೃದ್ಧವಾದ ಕಲೆಯ ಒಂದೊಂದು ಅಂಗಗಳಾಗಿ ವಿರೂಪ ಹೊಂದುತ್ತಿದೆ. ತನ್ಮದ್ಯೆ ಎಳೆಯ ಮಕ್ಕಳಿಗೆ ಇಪ್ಪತ್ತೆಂಟು ವರ್ಷಗಳಿಂದ ವಿದ್ಯಾದಾನ ಮಾಡುತ್ತಾ ಬಂದಿರುವ ಸಂಸ್ಥೆಯ ಸಾಧನೆ ಶ್ಲಾಘನೀಯ ಎಂದರು.
ಬಡಾನಿಡಿಯೂರು ಗ್ರಾ. ಪಂ. ಅಧ್ಯಕ್ಷ ಬಿ. ಉಮೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮತೊÕéàದ್ಯಮಿ ಎನ್.ಟಿ. ಅಮೀನ್, ಉಡುಪಿ ಕಾಂಚನ ಹುಂಡೈ ಆಡಳಿತ ನಿರ್ದೇಶಕ ಪ್ರಸಾದ್‌ರಾಜ್ ಕಾಂಚನ್, ಸನ್ಯಾಸಿಮಠದ ಅರ್ಚಕ ಬಿ. ಪಾಂಡುರಂಗ ರಾವ್, ಕರ್ನಾಟಕ ಮೀನುಗಾರಿಕೆ ನಿಗಮದ ನಿರ್ದೇಶಕ ಬಿ.ಪಿ. ರಮೇಶ್ ಪೂಜಾರಿ ಉಪಸ್ಥಿತರಿದ್ದರು.
ತೋನ್ಸೆ ಜಯಂತ್‌ಕುಮಾರ್ ಹಾಗೂ ನಿರ್ದೇಶಕ, ಶಿಕ್ಷಕ ಬಡಾನಿಡಿಯೂರು ಕೇಶವ ರಾವ್ ಅವರನ್ನು ಸಮ್ಮಾನಿಸಲಾಯಿತು. ಪುಲ್ವಾಮಾದಲ್ಲಿ ಮೃತಪಟ್ಟ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕೇಶವ ರಾವ್ ಸ್ವಾಗತಿಸಿದರು. ಲತಾ ಚೇತನ್ ವರದಿ, ಅಕ್ಷತಾ ತಂತ್ರಿ ಸಮ್ಮಾನ ಪತ್ರ ವಾಚಿಸಿದರು. ಗಣಪತಿ ವ್ಯ.ಸೇ. ಸ. ಬ್ಯಾಂಕಿನ ನಿರ್ದೇಶಕ ಬಿ. ಸುರೇಶ್ ಶೆಟ್ಟಿ ವಿದ್ಯಾರ್ಥಿಗಳಿಗೆ ಪಾರಿತೋಷಕ ನೀಡಿ ಗೌರವಿಸಿದರು. ರಾಮಕೃಷ್ಣ ಭಟ್ ನಿರೂಪಿಸಿದರು. ವಿಶಾಲಾ ಆರ್. ಮೆಂಡನ್ ವಂದಿಸಿದರು. ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.