Advertisement
ರೈತರು ಸಾಲದ ವಿಷಯವಾಗಿ ಆತ್ಮಹತ್ಯೆ ಮಾಡಿಕೊಂಡಾಕ್ಷಣ ಆ ಸಮಸ್ಯೆ ಬಗೆಹರಿಯದು. ಆದರೆ, ಕುಟುಂಬ ಸದಸ್ಯರು ಸಾಲದ ಸಮಸ್ಯೆ ಎದುರಿಸಬೇಕಾಗುತ್ತದೆ. ಎಲ್ಲದಕ್ಕೂ ಆತ್ಮಹತ್ಯೆಯೇ ಪರಿಹಾರ ಅಲ್ಲವೇ ಅಲ್ಲ. ಹಾಗಾಗಿ ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯ ಹಾದಿ ಹಿಡಿಯಬಾರದು ಎಂದು ಕೋರಿದರು. ಯಾವುದೇ ಬ್ಯಾಂಕ್, ಫೈನಾನ್ಸ್, ಲೇವಾದೇವಿಯವರಿಂದ ನೋಟಿಸ್ ಜಾರಿ, ಕಿರುಕುಳ ನೀಡಿದಲ್ಲಿ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು.
Related Articles
Advertisement
ಅಡವಿಟ್ಟಂತಹ ಚಿನ್ನವನ್ನು ಹರಾಜು, ಟ್ರಾÂಕ್ಟರ್ ಮತ್ತಿತರ ವಸ್ತುಗಳನ್ನು ಜμ¤ ಮಾಡುವಂತೆಯೇ ಇಲ್ಲ. ಅಲ್ಪಾವಧಿ ಬೆಳೆ ಸಾಲವನ್ನು ಮಧ್ಯಮಾವಧಿ, ಮಧ್ಯಮಾವಧಿ ಸಾಲವನ್ನು ಧೀರ್ಘಾವಧಿ ಸಾಲವನ್ನಾಗಿ ಪರಿವರ್ತಿಸಲಾಗುವುದು. ಬರಗಾಲದ ಸಂದರ್ಭದಲ್ಲಿ ರೈತರ ಅನುಕೂಲಕ್ಕೆ ಇರುವ ಹಲವಾರು ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು.
ನಾವು ರೈತ ಕುಟುಂಬದಿಂಲೇ ಬಂದವರು. ಸದಾ ನಿಮ್ಮೊಂದಿಗೆ ಇರುತ್ತೇವೆ ಎಂದರು. ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ಬಸವಾಪಟ್ಟಣ ಕೆನರಾ ಬ್ಯಾಂಕ್, ಕತ್ತಲಗೆರೆ ವಿಜಯಾಬ್ಯಾಂಕ್‌ನಿಂದ ಸಾಲ ತೀರುವಳಿ ಸಂಬಂಧ ರೈತರಿಗೆ ನೋಟಿಸ್ ಬಂದಿದೆ. ಈ ಬಗ್ಗೆ ಸಂಬಂಧಿತರು ಗಮನ ನೀಡಿ, ಕ್ರಮ ತೆಗೆದುಕೊಳ್ಳಬೇಕು. ಬರದ ಹಿನ್ನೆಲೆಯಲ್ಲಿ ಸಾಲ ಪಾವತಿಗೆ ಸಮಯದ ಅವಕಾಶ ಮಾಡಿಕೊಟ್ಟಾಕ್ಷಣಕ್ಕೆ ರೈತರ ಸಾಲ ಕಟ್ಟುವ ಸಾಮರ್ಥ್ಯ ಹೆಚ್ಚಾಗುತ್ತದೆಯೇ ಎಂಬುದನ್ನು ಸಂಬಂಧಿತರು ಗಮನಿಸಬೇಕು.
ಈ ಬಗ್ಗೆ ಸರ್ಕಾರಗಳಿಗೆ ಸವಿವರವಾದ ಪತ್ರ ಬರೆದು, ರೈತರ ವಾಸ್ತವ ಸ್ಥಿತಿ ತಿಳಿಸಬೇಕು. ಸಾಧ್ಯವಾದರೆ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಮುಖಂಡರಾದ ಬಲ್ಲೂರು ರವಿಕುಮಾರ್, ಅರುಣ್‌ಕುಮಾರ್ ಕುರುಡಿ, ಹೊನ್ನೂರು ಮುನಿಯಪ್ಪ, ಬಿ. ನಾಗೇಶ್ವರರಾವ್, ಎಂ.ಎಸ್.ಕೆ. ಶಾಸ್ತ್ರಿ. ಮಲ್ಲಾಪುರದ ದೇವರಾಜ್, ಪೂಜಾರ್ ಅಂಜಿನಪ್ಪ, ವಾಸನದ ಓಂಕಾರಪ್ಪ, ಸುರೇಂದ್ರಪ್ಪ, ಹಾಳೂರು ನಾಗರಾಜಪ್ಪ ಇತರರು ಮಾತನಾಡಿದರು. ನಗರ ಉಪಾಧೀಕ್ಷಕ ಕೆ. ಅಶೋಕ್‌ಕುಮಾರ್, ವೃತ್ತ ನಿರೀಕ್ಷಕ ಬಿ.ಎಸ್. ಸಂಗನಾಥ್, ಪಿಎಸ್‌ಐಗಳಾದ ಟಿ. ರಾಜಣ್ಣ, ಭವ್ಯಾ, ಪಿ.ವೈ. ಶಿಲ್ಪಾ, ಸಿದ್ದಪ್ಪ ಮೇಟಿ ಇತರರು ಇದ್ದರು.