Advertisement

‘Own deeds’; ಅರವಿಂದ್ ಕೇಜ್ರಿವಾಲ್ ಬಂಧನದ ಕುರಿತು ಪ್ರತಿಕ್ರಿಯೆ ನೀಡಿದ ಅಣ್ಣಾ ಹಜಾರೆ

02:56 PM Mar 22, 2024 | Team Udayavani |

ಮುಂಬಯಿ: ಭ್ರಷ್ಟಾಚಾರ ವಿರೋಧಿ ಆಂದೋಲನದ ರೂವಾರಿಯಾಗಿದ್ದ ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಕೇಜ್ರಿವಾಲ್ ಅವರನ್ನು ಇ.ಡಿ. ಬಂಧಿಸಿದ ಬಳಿಕ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅಣ್ಣಾ ಹಜಾರೆ, ‘ಕೇಜ್ರಿವಾಲ್ ಅವರ ಸ್ವಂತ ಕಾರ್ಯಗಳಿಂದಾಗಿ” ಜಾರಿ ನಿರ್ದೇಶನಾಲಯವು ಅವರನ್ನು ಬಂಧಿಸಿದೆ. ಅವರು ಮದ್ಯದ ವಿರುದ್ಧ ಕೆಲಸ ಮಾಡುತ್ತಿದ್ದರು ಮತ್ತು ಈಗ ಅದಕ್ಕಾಗಿ ನೀತಿಯನ್ನು ರೂಪಿಸುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

2010 ರಿಂದ ನಡೆದ ಭ್ರಷ್ಟಾಚಾರ ವಿರೋಧಿ ಬೃಹತ್ ಹೋರಾಟದಲ್ಲಿ ಅಣ್ಣಾ ಹಜಾರೆ ಅವರು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಲೋಕಪಾಲ್ ಚಳವಳಿಯನ್ನು ಮುನ್ನಡೆಸಿದ್ದರು.

ನನ್ನೊಂದಿಗೆ ಕೆಲಸ ಮಾಡುತ್ತಿದ್ದ, ಮದ್ಯದ ವಿರುದ್ಧ ದನಿ ಎತ್ತುತ್ತಿದ್ದ ಅರವಿಂದ್ ಕೇಜ್ರಿವಾಲ್ ಈಗ ಮದ್ಯ ನೀತಿಗಳನ್ನು ಮಾಡುತ್ತಿರುವುದಕ್ಕೆ ನನಗೆ ತುಂಬಾ ಬೇಸರವಾಗಿದೆ, ಅವರ ಸ್ವಂತ ತಪ್ಪುಗಳಿಂದ ಅವರ ಬಂಧನವಾಗಿದೆ ಎಂದು ಹೇಳಿದರು.

ಹಜಾರೆ ಮತ್ತು ಕೇಜ್ರಿವಾಲ್ ಅವರು ಆಂದೋಲನದ ಸಮಯದಲ್ಲಿ ಅನೇಕ ಆಮರಣಾಂತ ಉಪವಾಸಗಳನ್ನು ನಡೆಸಿದ್ದರು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಹೋರಾಟ ನಡೆಸಿ ರಾಷ್ಟ್ರದ ಗಮನಸೆಳೆದು ಅತೀ ದೊಡ್ಡ ಚಳವಳಿಯ ಮೂಲಕ ಲೋಕಪಾಲ್‌ ಜಾರಿಗೆ ಒತ್ತಾಯಿಸಿದ್ದರು.

Advertisement

ಲಕ್ಷಾಂತರ ಜನರು ಭಾಗಿಯಾದ ಪ್ರತಿಭಟನೆ ವಿಫಲವಾದ ನಂತರ, ಕೇಜ್ರಿವಾಲ್ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿದ್ದ ಹಲವಾರು ಸದಸ್ಯರು ಸೇರಿ ಆಮ್ ಆದ್ಮಿ ಪಕ್ಷವನ್ನು ಸ್ಥಾಪಿಸಿ ರಾಜಕೀಯ ಯಶಸ್ಸು ಕಂಡು ದೆಹಲಿಯಲ್ಲಿ ಅಧಿಕಾರ ಹಿಡಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next