ಗದಗ: ಸಮಾನತೆಯ ಹರಿಕಾರ ವಿಶ್ವಗುರು ಬಸವಣ್ಣನವರು ಮಾನವೀಯ ಮೌಲ್ಯಗಳ ಮೇರು ಪರ್ವತ ಇದ್ದಂತೆ ಎಂದು ದಸಂಸ ರಾಜ್ಯ ಮುಖಂಡ ದಲಿತ ನೌಕರ ಅಧ್ಯಕ್ಷ ಎಸ್.ಎನ್. ಬಳ್ಳಾರಿ ಹೇಳಿದರು.
ಅಣ್ಣ ಬಸವಣ್ಣನ ಆಶಯದಂತೆ ಇವನಾರವ ಇವನಾರವ ಎಂದೆನಿಸದೇ, ಇವನಮ್ಮವ ಎಂದೆನಿಸಯ್ಯ ಎಂಬ ನುಡಿಯಂತೆ ಸರ್ವರೂ ಬಾಳಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಸಮಾಜದಲ್ಲಿ ಶಾಂತಿ, ಸಹೋದರತೆ ಬೆಳೆಯುತ್ತದೆ ಎಂದರು.
ಜೈ ಭೀಮ ಆಟೋ ರಿಕ್ಷಾ ಸಂಘದ ಅಧ್ಯಕ್ಷ ಪರಶುರಾಮ ಪೂಜಾರ ಮಾತನಾಡಿ, 12ನೇ ಶತಮಾನನದಲ್ಲಿ ಬಸವಣ್ಣನವರು ಮೂಢನಂಬಿಕೆ, ಅಸ್ಪೃಶ್ಯತೆ ತೊಲಗಿಸಲು ಸಾಕಷ್ಟು ಪ್ರಯತ್ನಿಸಿದರು. ತಮ್ಮ ವಚನಗಳ ಮೂಲಕ ಬಸವಾದಿ ಶರಣರು ಜನರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಲು ಪ್ರಯತ್ನಿಸಿದರು. 12ನೇ ಶತಮಾನದಲ್ಲಿ ಶರಣರು ಮಾಡಿದ ಸಾಮಾಜಿಕ ಕ್ರಾಂತಿ ಇಂದಿಗೂ ಪ್ರಸ್ತುತವಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ಮಾರುತಿ ಗುಡಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವರಾಜ್ ಬಳ್ಳಾರಿ, ವಿನಾಯಕ ಬಳ್ಳಾರಿ, ರವಿ ಹಾದಿಮನಿ, ಚಂದ್ರಶೇಖರ ಮೇಲಿನಮನಿ, ಚಂದ್ರಶೇಖರ ಹಾದಿಮನಿ, ವೈ.ಡಿ. ಮುಳ್ಳಾಳ, ಮಂಜುನಾಥ ಪೂಜಾರ, ಚಂದ್ರು ಚವ್ಹಾಣ, ಧರ್ಮಣ್ಣ ಹೊಸಮನಿ, ಇಮಾಮ ಕದಡಿ, ಸತೀಶ ಹೂಲಿ, ಶಿವಕುಮಾರ ಹಾದಿಮನಿ, ಶಿವಕುಮಾರ ಕೋಟ್ನೆಕಲ್, ನವೀನ ಭಂಡಾರಿ ಇದ್ದರು.
Advertisement
ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ನಗರದಲ್ಲಿ ಆಯೋಜಿಸಿದ್ದ ಬಸವಣ್ಣನವರ 914ನೇ ಜಯಂತ್ಯುತ್ಸವದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
Related Articles
ಸಂಭ್ರಮದ ಬಸವೇಶ್ವರರ ಮೂರ್ತಿ ಮೆರವಣಿಗೆ
ಗಜೇಂದ್ರಗಡ: ಶ್ರೀ ಬಸವ ಜಯಂತಿ ಪ್ರಯುಕ್ತ ಗಜೇಂದ್ರಗಡ -ಉಣಚಗೇರಿ ವೀರಶೈವ ಲಿಂಗಾಯತ ಸಮಾಜ ವತಿಯಿಂದ ಶ್ರೀ ಜಗಜ್ಯೋತಿ ಬಸವೇಶ್ವರರ ಮೂರ್ತಿ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಮೈಸೂರ ಮಠದಿಂದ ಆರಂಭವಾದ ಮೂರ್ತಿ ಮೆರವಣಿಗೆ ಶ್ರೀ ಬಸವೇಶ್ವರ ವೃತ್ತ, ಕೊಳ್ಳಿಯವರ ಕತ್ರಿ, ಶ್ರೀ ಕಟ್ಟಬಸವೇಶ್ವರ ರಂಗಮಂದಿರ, ಹಿರೇಬಜಾರ, ಗೌಳಿ ಗಲ್ಲಿ, ಶ್ರೀದುರ್ಗಾ ವೃತ್ತ ಮೂಲಕ ಮಠ ತಲುಪಿತು. ಮೆರವಣಿಗೆಯಲ್ಲಿ ನಂದಿ ಕೋಲು, ಡೊಳ್ಳು ಸೇರಿ ವಿವಿಧ ಮಂಗಲ ವಾದ್ಯಗಳು ಮೇಳೈಸಿದವು. ಶೃಂಗಾರಗೊಂಡ ನೂರಾರು ಜೋಡೆತ್ತುಗಳು ಮೆರವಣಿಗೆಗೆ ಮೆರಗು ನೀಡಿದವು. ಮೈಸೂರು ಸಂಸ್ಥಾನ ಮಠದ ವಿಜಯಮಹಾಂತ ಸ್ವಾಮೀಜಿ, ಶಾಸಕ ಕಳಕಪ್ಪ ಬಂಡಿ, ಸಿ.ಎಸ್. ವಾಲಿ, ಐ.ಎ. ರೇವಡಿ, ಮುತ್ತಣ್ಣ ಮೆಣಸಿನಕಾಯಿ, ಶರಣಪ್ಪ ಇದ್ದರು.
Advertisement