Advertisement

Ankola; ಸಿನಿಮಾ ನೋಡಲು ತೆರಳಿದ್ದ ಯುವಕನ ಬೈಕ್ ಕಳ್ಳತನ

08:01 PM Aug 07, 2023 | |

ಅಂಕೋಲಾ : ಕಳೆದ ಕೆಲ ದಿನಗಳ ಹಿಂದಷ್ಟೇ ತಾಲೂಕಿನಲ್ಲಿ ಎರಡು ಬೈಕ್ ಕಳ್ಳತನ ನಡೆದಿರುವ ಸುದ್ದಿ ಮಾಸುವ ಮುನ್ನವೇ ಪಟ್ಟಣದಲ್ಲಿನ ಸಮರ್ಥ ಚಿತ್ರಮಂದಿರದ ವಾಹನ ಪಾರ್ಕಿಂಗ್ ಸ್ಥಳದಲ್ಲಿದ್ದ ಬೈಕೊಂದನ್ನು ಕಳ್ಳರು ಕದ್ದೊಯ್ದ ಘಟನೆ ನಡೆದಿದೆ.

Advertisement

ಇಲ್ಲಿನ ಹನುಮಟ್ಟಾ ನಿವಾಸಿ ಕಿರಣ ದೇವಿದಾಸ ನಾಯ್ಕ ಅವರ ಬೈಕ್ ಕಳ್ಳತನವಾಗಿದೆ. ಕಿರಣ ರವಿವಾರ ಸಂಜೆ ತಮ್ಮ ಪಲ್ಸರ್ 220 ಬೈಕನ್ನು ಸಮರ್ಥ ಚಿತ್ರಮಂದಿರದ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ ಸಿನಿಮಾ ನೋಡಲು ತೆರಳಿದ್ದರು. ಈ ವೇಳೆ ಕಳ್ಳರು ಅಲ್ಲಿಂದ ಬೈಕ್ ಎಗರಿಸಿದ್ದಾರೆ. ಈ ಕುರಿತು ಕಿರಣ್ ಅವರು ಅಂಕೋಲಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೆಲ ದಿನಗಳ ಹಿಂದೆ ವಾರಂತ್ಯದಲ್ಲಿಯೆ ಪಟ್ಟಣ ವ್ಯಾಪ್ತಿಯಲ್ಲಿ ಎರಡು ಬೈಕ್ ಗಳು ಕಳ್ಳತನವಾಗಿದ್ದವು. ಇದೀಗ ಮತ್ತೊಂದು ಬೈಕ್ ಕಳ್ಳತನವಾಗುವ ಮೂಲಕ ಬೈಕ್ ಕಳ್ಳತನದ ಸರಣಿ ಮುಂದುವರೆದಿದೆ. ಕಳೆದ ಎರಡು ದಿನದ ಹಿಂದೆ ಬೈಕ್ ಕಳ್ಳತನವಾದ ನಂತರ ಪೊಲೀಸರು ಎಲ್ಲೆಡೆ ತನಿಖೆ ಕೈಗೊಂಡಿದ್ದಾರೆ. ಇದರ ಮದ್ಯೆಯು ಕಳ್ಳರು ತಮ್ಮ ಕೈಚಳಕ ಮುಂದುವರೆಸಿದ್ದಾರೆ.

ಚಿತ್ರಮಂದಿರದಲ್ಲಿ ವಾಹನ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತದೆಯಾದರೂ ಸೂಕ್ತ ಭದ್ರತೆ ನೀಡಬೇಕಿದೆ. ಹಾಗೆಯೇ ಪಟ್ಟಣ ವ್ಯಾಪ್ತಿಯಲ್ಲಿಯೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ಸಂಬಂಧಿಸಿದವರು ಪಟ್ಟಣದಲ್ಲಿ ಸಿಸಿಟಿವಿ ಸಮರ್ಪಕವಾಗಿ ಅಳವಡಿಸುವ ಕುರಿತು ಕ್ರಮ ಕೈಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next