Advertisement

ಅಂಕೋಲಾ ಸಂಜೀವ ಕೊಲೆ ಕೇಸ್‌:ಅಪ್ರಾಪ್ತ ವಯಸ್ಕ ಸೇರಿ ಇಬ್ಬರ ಬಂಧನ

12:14 PM Mar 23, 2018 | |

ಅಂಕೋಲಾ: ತಾಲೂಕಿನಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕೊಲೆ ಪ್ರಕರಣವೊಂದನ್ನು ಸ್ಥಳೀಯ ಪೊಲೀಸರು ಬೇಧಿಸಿದ್ದು ಅಪ್ರಾಪ್ತ ಬಾಲಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

Advertisement

ಮಾ.16 ರಂದು ಸಂಜೀವ ದತ್ತಾ ಬಾನಾವಳಿಕರ (23) ಕೊಲೆಗೀಡಾದ ಯುವಕ. ಈತನನ್ನು ಹಾರವಾಡ ಗ್ರಾಮದ ವಿವೇಕ ದುರ್ಗಯ್ಯ ಖಾರ್ವಿ (23) ಹಾಗೂ ಬೇಲೆಕೇರಿಯ 17 ವರ್ಷದ ಯುವಕ ಕೊಲೆ ಆರೋಪಿಗಳು.

ಮಾ.15 ರಂದು ಬೇಲೆಕೇರಿ ನಿವಾಸಿ ಸಂಜೀವ ಬಾನಾವಳಿಕರ ಮನೆಯಿಂದ ಹೊದವನು ಮತ್ತೆ ಮರಳಿ ಬಂದಿರಲಿಲ್ಲ. ಆ ದಿನ ಪೂರ್ತಿ ಮನೆಯವರೆಲ್ಲ ಹುಡುಕಾಟ ನಡೆಸಿದ್ದಾರೆ. ಮಾ.16 ರಂದು ಸಂಜೆ ಸಂಜೀವನ ಮೃತದೇಹ ಹಾರವಾಡ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ಆಗ ಸಂಜೀವನ ಕುತ್ತಿಗೆ ಭಾಗದಲ್ಲಿ ಗಾಯದ ಕಲೆಗಳಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಆರೊಪಿಗಳ ಪತ್ತೆಗೆ ತಂಡ ರಚಿಸಿದ್ದರು.

ಅಣ್ಣನ ಸಾವಿನ ಸೇಡು
 ಡಿಸೆಂಬರ 14, 2016 ರಂದು ಬೇಲೆಕೇರಿಯಲ್ಲಿ ಗೌರೀಶ ಕುಡ್ತಲಕರ ಎನ್ನುವವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಈ ಸಾವು ಕೇವಲ ಸ್ವಾಭಾವಿಕವಾಗಿರದೇ ಐವರು ಸೇರಿ ಕೊಲೆ ಮಾಡಿದ್ದಾರೆ ಎಂದು ಗೌರೀಶ ಕುಡ್ತಲಕರ ಅವರ ಅಪ್ರಾಪ್ತ ವಯಸ್ಸಿನ ಸಹೋದರ ತಿಳಿದು, ಈ ಐವರನ್ನು ಸಹ ಹಂತ ಹಂತವಾಗಿ ಕೊಲೆ ಮಾಡಲು ತನ್ನ ಸ್ನೇಹಿತ ವಿವೇಕ ದುರ್ಗಯ್ಯ ಖಾರ್ವಿಗೆ ಸಹಾಯ ಪಡೆಯಲು ಮುಂದಾಗಿದ್ದ. ವಿವೇಕನಿಗೆ 5 ಸಾವಿರ ರೂ. ಹಣ ಹಾಗೂ 1 ಮೊಬೈಲ್‌ಗೆ ಸುಪಾರಿ ನೀಡಿ ಅಣ್ಣನ ಹತ್ಯೆಯ ಮೊದಲ ಪ್ರತೀಕಾರ ತೆಗೆದುಕೊಳ್ಳಲು ಸಂಚು ರೂಪಿಸಿ ಕೊಲೆ ಮಾಡಿದ ಆರೋಪವನ್ನು ಪೊಲೀಸರು ದಾಖಲಿಸಿದ್ದಾರೆ.

ಹತ್ಯೆಗೆ ಸಂಚು

Advertisement

ಮಾ.15 ರಂದು ಬೇಲೆಕೇರಿಯಿಂದ ಸಂಜೀವನನ್ನು ಬೈಕ್‌ ಮೇಲೆ ಕುರಿಸಿಕೊಂಡು ಹಾರವಾಡ ಸೇತುವೆ ಬಳಿಯ ಗದ್ದೆಯಲ್ಲಿ ಕರೆತಂದು ಕಂಠಪೂರ್ತಿ ಸಾರಾಯಿ ಕುಡಿಸಿ ನೈಲಾನ ಹಗ್ಗದಿಂದ ಕುತ್ತಿಗೆಗೆ ಬಿಗಿದು ಸಾಯಿಸಿದ್ದಾರೆ. ನಂತರ ಮೃತದೇಹವನ್ನು ಬೈಕ್‌ ಮೇಲೆ ಒಯ್ದು ಹಾರವಾಡ ಸಮುದ್ರಕ್ಕೆ ಎಸೆದು ಪರಾರಿಯಾಗಿದ್ದಾರೆ. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಕಾಲ್‌ ಡಿಟೇಲ್ಸ್‌ ಪಡೆದು ಕಾರ್ಯಾಚರಣೆಗೆ ಮುಂದಾದಾಗ ಅಪ್ರಾಪ್ತ ವಯಸ್ಸಿನ ಬಾಲಕ ಕೊನೆಯ ಕರೆ ಮಾಡಿರುವುದು ಪತ್ತೆಯಾಗಿದೆ.

ಪೊಲೀಸರು ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಿದಾಗ ವಿವೇಕ ಖಾರ್ವಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ಅನುಮಾನಕ್ಕೆ ಬಂದಿದ್ದರು. ಆದರೆ ವಿವೇಕ ಖಾರ್ವಿ ಊರಿನಲ್ಲಿ ಇರದೇ ಬೆಂಗಳೂರಿನತ್ತ ಹೊಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ಕಾರ್ಯಾಚರಣೆ ನಡೆಸಿದ ಅಂಕೋಲಾ ಪೊಲೀಸರು ಮೊಬೈಲ್‌ ಟವರ ಲೊಕೇಶನ ಮೂಲಕ ಬೆಂಗಳೂರಿನ ಬಿಡದಿ ಬಳಿ ವಿವೇಕ ಖಾರ್ವಿಯನ್ನು ಬಂಧಿಸಿದ್ದಾರೆ.

ಆರೋಪಿಗಳಿಗೆ ಘೇರಾವ್‌
 ಕೊಲೆಗೈದ ಆರೋಗಳನ್ನು ಸ್ಥಳ ಪಂಚನಾಮೆಗಾಗಿ ಬೇಲೇಕೇರಿಗೆ ಪೊಲೀಸರು ಜೀಪನಲ್ಲಿ ಕರೆ ತಂದಾಗ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸ್‌ ವಾಹನ ತಡೆದು ಆರೋಪಿಯನ್ನು ತಮಗೆ ಒಪ್ಪಿಸುವಂತೆ ಹೇಳಿದರು. ಪರಿಸ್ಥಿತಿ ಕೈಮಿರುತ್ತದೆ ಎಂದರಿತ ಸಿಪಿಐ ಪ್ರಮೋದಕುಮಾರ ಬಿ. ವಾಹನ ಚಲಾಯಿಸಿಕೊಂಡು ಬಂದು ಬೇಲೇಕೇರಿ ಕರಾವಳಿ ಕಾವಲು ಪಡೆಯ ಠಾಣೆಯ ಒಳಕ್ಕೆ ಆರೋಪಿಗಳನ್ನು
ಹಾಕಿ ಪರಿಸ್ಥಿತಿಯನ್ನು ತಹಂಬದಿಗೆ ತರುವಲ್ಲಿ ಶ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next