ಅಂಕೋಲಾ: ಕಳ್ಳತನವಾದ 24 ಗಂಟೆಯಲ್ಲಿಯೇ ಆರೋಪಿಯನ್ನು ಬಂಧಿಸುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ವಂದಿಗೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಸಂಜಯ ರಮೇಶ ಕುಮಾರ (28) ನನ್ನು ಶಿವಮೊಗ್ಗಾ ಜಿಲ್ಲೆಯ ಭದ್ರಾವತಿಯ ಬಾರಂದೂರು ಸರಕಾರಿ ಶಾಲೆ ಬಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ರಮೇಶ್ ಕುಮಾರ್ ತಾಲೂಕಿನ ವಂದಿಗೆಯ ನರೆಂದ್ರ ಗೋವಿಂದರಾಯ ಹಿತ್ಲಮಕ್ಕಿ ಅವರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಕಳ್ಳತನವಾಗಿದ್ದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಕಾರ್ಯಾಚರಣೆಗಿಳಿದ ಅಂಕೋಲಾ ಪೊಲೀಸರು ಶಿವಮೊಗ್ಗಾದಲ್ಲಿ ಈತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕೃತ್ಯದಲ್ಲಿ ಇನ್ನೂ ಮೂವರು ಆರೋಪಿಗಳಿದ್ದು ಅವರು ತಲೆ ಮರೆಸಿಕೊಂಡಿದ್ದಾರೆ. ಬಂಧಿತನಿಂದ ಬೆಳ್ಳಿಯ ಲೋಟ ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆದು ಕೊಂಡು ತನಿಖೆ ಕೈಗೊಂಡಿದ್ದಾರೆ. ಇವರು ರಾಜ್ಯ ಹೊರರಾಜ್ಯದಲ್ಲಿಯು ಕಳ್ಳತನ ಮಾಡಿರುವ ಕುರಿತು ಮಾಹಿತಿ ಬಂದಿದ್ದು ವಿಚಾರಣೆ ಬಳಿಕವೆ ಹೆಚ್ಚಿನ ಮಾಹಿತಿ ಬಯಲಿಗೆ ಬರಲಿದೆ.
ಕಾರವಾರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ವೆಲೆಂಟೈನ್ ಡಿಸೋಜಾ ಅವರ ನಿರ್ದೇಶನದಲ್ಲಿ ಅಂಕೋಲಾ ಠಾಣೆಯ ಪೊಲೀಸ್ ನಿರೀಕ್ಷಕ ಜಾಕ್ಸನ್ ಡಿಸೋಜಾ ರವರ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ಮಹಾಂತೇಶ ಬಿ.ವಿ. ಪ್ರೇಮನಗೌಡ ಪಾಟೀಲ, ಮತ್ತು ಸಿಬ್ಬಂದಿಗಳಾದ ಪರಮೇಶ ಎಸ್, ಮಂಜುನಾಥ ಲಕ್ಮಾಪುರ, ಶ್ರೀಕಾಂತ ಕಟಬರ, ರೋಹಿದಾಸ ದೇವಾಡಿಗ, ಸಲೀಮ್ ಮೊಕಾಶಿ, ಸುರೇಶ ಬಳ್ಳೊಳ್ಳಿ ಹಾಗೂ ಶಿವಾನಂದ ನಾಗರದಿನ್ನಿ ಕಾರ್ಯಾಚರಣೆಯಲ್ಲಿದ್ದರು.
ಇದನ್ನೂ ಓದಿ: ಕ್ಷೇತ್ರದಲ್ಲಿ ಅಭಿವೃದ್ದಿ ಆಗಿಲ್ಲ ಎಂದವರಿಗೆ ನೇತ್ರ ಚಿಕಿತ್ಸೆ ಮಾಡಿಸಬೇಕು: ಕಾಗೇರಿ ಟಾಂಗ್