Advertisement

ಅಂಕೋಲಾ : ಹಿಂಸಾತ್ಮಕ ರೀತಿಯಲ್ಲಿ ಎತ್ತುಗಳ ಸಾಗಾಟ, ಮೂವರ ಬಂಧನ

08:44 PM Dec 20, 2022 | Team Udayavani |

ಅಂಕೋಲಾ : ಬೊಲೋರೊ ವಾಹನದಲ್ಲಿ ‌‌ಹಿಂಸಾತ್ಮಕವಾಗಿ 6 ಎತ್ತುಗಳನ್ನು ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅಂಕೋಲಾ ಪೊಲೀಸರು ಅಲಗೇರಿ ಕ್ರಾಸ ಬಳಿ ದಾಳಿ ನಡೆಸಿ ಬಂಧಿಸಿದ ಘಟನೆ ನಡೆದಿದೆ.

Advertisement

ಕಲಘಟಗಿಯ ಕಲ್ಲಪ್ಪ ಮಹದೇವಪ್ಪ ರಾಮನಕೋಪ್ಪ (32), ಅಲಗೇರಿ ಗ್ರಾಮದ ಸುರೇಶ ಗಣು ನಾಯ್ಕ(55), ಸುಬಾಶ ನಾಗೇಶ ನಾಯ್ಕ (35) ಎಂಬುವವರೇ ಬಂಧಿತರು. ಸುಮಾರು 60 ಸಾವಿರ ಮೌಲ್ಯದ 6 ಎತ್ತುಗಳನ್ನು ಅಕ್ರಮವಾಗಿ ಯಾವುದೆ ಪರವಾನಿಗೆ ಇಲ್ಲದೆ ಸಾಗಾಟ ನಡೆಸುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಅಂಕೋಲಾ ಪಿಎಸ್ಐ ಪ್ರವೀಣಕುಮಾರ ತಂಡ ದಾಳಿ ನಡೆಸಿ 6 ಎತ್ತುಗಳನ್ನು ರಕ್ಷಣೆ ಮಾಡಿ ಮೂವರನ್ನು ಬಂಧಿಸಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ದಾವಣಗೆರೆ: ಲಿಂಗದಳ್ಳಿ ಗ್ರಾಮದಲ್ಲಿ ರಾತ್ರಿ ಹೊತ್ತು ಚಿರತೆ ಸಂಚಾರ… ಜನರಲ್ಲಿ ಆತಂಕ

Advertisement

Udayavani is now on Telegram. Click here to join our channel and stay updated with the latest news.

Next