Advertisement

ಅಂಕೋಲಾ : ಮೂರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ, ದೂರು ದಾಖಲು

08:59 PM Oct 29, 2022 | Team Udayavani |

ಅಂಕೋಲಾ : ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ಮಹಿಳೆಯೋರ್ವಳು ಮನೆಯಿಂದ ಹೊದವಳು ಮನೆಗೆ ಮರಳಿ ಬಾರದೆ ನಾಪತ್ತೆಯಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ತಾಲೂಕಿನ ರಾಮನಗುಳಿಯ ನಿವಾಸಿ ಮೂಸಾ ಜಿಕ್ರಿಯಾ ಶೇಖ ಈ ಕುರಿತು ಅಂಕೋಲಾ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದು ಇವರ ಪತ್ನಿ ರುಕ್ಸಾನಾ ಬೇಗಂ ಮುಸಾ ಶೇಖ (29) ಇವಳು ಅಕ್ಟೋಬರ 28 ರ ಮಧ್ಯರಾತ್ರಿಯ ನಂತರ ರಾಮನಗುಳಿ ಗ್ರಾಮದಲ್ಲಿರುವ ತಮ್ಮ ಮನೆಯಿಂದ ತನ್ನ ಮೂವರು ಮಕ್ಕಳಾದ ಮಹ್ಮದ ಸಿರಾಜ್ ಮುಸಾ ಶೇಖ್ (9), ಮಹ್ಮದ ಸರ್ತಾಜ್ ಮುಸಾ ಶೇಖ್ (8), ಹಾಗೂ ಆಯೀಶಾ ರೀಪಾ ಮುಸಾ ಶೇಖ್ (01) ಇವರನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಎಲ್ಲಿಗೋ ಹೋದವಳು, ಇದುವರೆಗೂ ವಾಪಸ್ಸ ಮನೆಗೆ ಬಾರದೇ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದಾರೆ.

ಕಾಣೆಯಾಗಿರುವ ಇವರನ್ನು ಯಾರಾದರೂ ಕಂಡಲ್ಲಿ ಅಂಕೋಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಮಲ್ಪೆ: ಹವ್ಯಾಸಿ ಯಕ್ಷಗಾನ ಕಲಾವಿದ, ಉದ್ಯಮಿ ಮೋಹನ್‌ ತೋನ್ಸೆ ನಿಧನ

Advertisement

Udayavani is now on Telegram. Click here to join our channel and stay updated with the latest news.

Next