Advertisement
ಕಾರವಾರ ಹಾಗೂ ಅಂಕೋಲಾ ಪಟ್ಟಣದಲ್ಲಿ ಸೂರಜ್ ಎನ್ನುವ ವ್ಯಕ್ತಿ ಮಂಗಳಮುಖೀ ವೇಷ ಧರಿಸಿ ಭಿಕ್ಷೆ ಬೇಡುತ್ತಾ ಹಣ ವಸೂಲಿ ಮಾಡುತ್ತಿದ್ದ. ಈ ವಿಷಯವನ್ನು ಅಸಲಿ ಮಂಗಳಮುಖಿಯರ ಅಂತರಂಗ ಸಂಘಟನೆ ಸದಸ್ಯೆ ಆಯಿಷಾ ಹೊನ್ನಾವರ ಅವರ ಗಮನಕ್ಕೆ ಸಾರ್ವಜನಿಕರು ತಂದಿದ್ದರು.
ಚೂಡಿದಾರ ಧರಿಸಿ ಹೆಣ್ಣಿನಂತೆ ವಯ್ಯಾರ ಪ್ರದರ್ಶಿಸುತ್ತ ನಾಗರಿಕರಿಂದ ಹಣ ಕೇಳುತ್ತಿದ್ದ ಈತನ ಚೂಡಿದಾರ ಬಿಚ್ಚಿಸಿ ಮಂಗಳಾರತಿ ಮಾಡಿದ್ದಾರೆ. ನಿಜವಾದ ಮಂಗಳಮುಖಿಯರು ನಿಷ್ಠಾವಂತರಿದ್ದಾರೆ. ಆದರೆ ಇಂಥ ನಕಲಿ ಮಂಗಳಮುಖಿ ವೇಷಧಾರಿಗಳಿಂದ ನಿಜವಾದ ಮಂಗಳಮುಖೀಯರು ತಲೆ ತಗ್ಗಿಸುವಂತಾಗಿದೆ. ಈ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ನಾಗರಿಕರು ಆಗ್ರಹಿದ್ದಾರೆ. ಸದ್ಯ ನವರಾತ್ರಿ ಹಾಗೂ ದೀಪಾವಳಿ ಹಬ್ಬ ಬರುತ್ತಿದ್ದು ಹೊರ ಜಿಲ್ಲೆಯಿಂದ ಕಾರವಾರ ಹಾಗೂ ಅಂಕೋಲಾಕ್ಕೆ ಮಂಗಳಮುಖಿಯರು ಬಂದು ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಇಂಥ ಮಂಗಳಮುಖಿಯರಿಗೆ ಅಂಜದೆ, ನಿರ್ಭೀತವಾಗಿ ಪೊಲೀಸ್ ಅಥವಾ ಅಂತರಂಗ ಸಂಘಟನೆ ಗಮನಕ್ಕೆ ತನ್ನಿ ಎಂದು ಆಯಿಷಾ ಹೊನ್ನಾವರ ತಿಳಿಸಿದ್ದಾರೆ.
Related Articles
-ಆಯಿಷಾ ಹೊನ್ನಾವರ, ಉಪಾಧ್ಯಕ್ಷೆ ಅಂತರಂಗ ಸಂಘಟನೆ
Advertisement