Advertisement

ಅಂಕ್ಲೇಶ್ವರದಲ್ಲಿ ಶತೋತ್ತರ ಪ್ರಥಮ ಶಾಖೆ ಸೇವಾರಂಭಿಸಿದ ಭಾರತ್‌ ಬ್ಯಾಂಕ

04:11 PM May 18, 2017 | |

ಅಂಕ್ಲೇಶ್ವರ್‌: ಭಾರತ್‌ ಬ್ಯಾಂಕ್‌ ನನ್ನ ಮನೆಮಂದಿ, ಪರಿವಾರ ಇದ್ದಂತೆ. ನಾನು ಮುಂಬಯಿ ವಿಲೇಪಾರ್ಲೆ ಪೂರ್ವದ ಶಾಖೆಯಲ್ಲಿ ಕಳೆದ ಎರಡೂವರೆ ದಶಕಗಳಿಂದ ವ್ಯವಹರಿಸುತ್ತಿದ್ದು ಆರ್ಥಿಕವಾಗಿ ಸಮೃದ್ಧಿಯುತನಾಗಿದ್ದೇನೆ. ನನ್ನ ಬದುಕಿಗೆ ಆಧಾರಸ್ತಂಭದಂತಿರುವ ಈ ಬ್ಯಾಂಕಿನ ಸೇವೆಯಿಂದ ತೃಪ್ತನಾಗಿದ್ದು, ಇದರ ವಾಣಿಜ್ಯ ಸೇವೆಯ ಪರಿಯೇ ವಿಶಿಷ್ಟವಾಗಿದೆ. ಗುಣಮಟ್ಟದ ಸೇವೆಯಿಂದಾಗಿ ಈ ಬ್ಯಾಂಕ್‌  ಇಷ್ಟೊಂದು ಎತ್ತರಕ್ಕೆ ಬೆಳೆದಿದೆ. ಇದೀಗ ನನ್ನ ತವರೂರಲ್ಲೇ ಶಾಖೆ ತೆರೆದ ಈ ಬ್ಯಾಂಕ್‌ ಜನಪರವಾಗಿ ಶ್ರಮಿಸಿ ಭಾರತದಾದ್ಯಂತ ಪಸರಿಸಲಿ ಎಂದು ಸ್ಥಾನೀಯ  ಉದ್ಯಮಿ, ಕೆಸಿ ಲ್ಯಾಬೊರೆಟರೀಸ್‌ ಸಂಸ್ಥೆಯ ಕಾರ್ಯಾಧ್ಯಕ್ಷ ಕೆ. ಬಿ. ಪಾಟೀಲ್‌ ತಿಳಿಸಿದರು.

Advertisement

ಭಾರತ್‌ ಕೋ ಆಪರೇಟಿವ್‌ ಬ್ಯಾಂಕ್‌ ನಿಯಮಿತ ಸಂಸ್ಥೆಯು ಗುಜರಾತ್‌ ರಾಜ್ಯದಲ್ಲಿನ‌ 5 ನೇ ಶಾಖೆಯನ್ನಾಗಿಸಿ ಬ್ಯಾಂಕ್‌ನ 101ನೇ ಶಾಖೆಯನ್ನು  ಮೇ 17ರಂದು   ಪಿರಮನ್‌ ಇಲ್ಲಿನ ಅಂಕ್ಲೇಶ್ವರ್‌ ನಗರದ ಓಂಕಾರ್‌ ದ್ವಿತೀಯ ಕಟ್ಟಡದಲ್ಲಿ ಸೇವಾರಂಭಿಸಿದ್ದು, ಸಮಾರಂಭದಲ್ಲಿ ಉಪಸ್ಥಿತ ಕೆ. ಬಿ. ಪಾಟೇಲ್‌ ದೀಪ ಪ್ರಜ್ವಲಿಸಿ ವಿಧ್ಯುಕ್ತ‌ವಾಗಿ ಶಾಖೆಯನ್ನು ಸೇವಾರ್ಪಣೆಗೊಳಿಸಿ ಮಾತನಾಡಿದರು.

ಬ್ಯಾಂಕ್‌ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ರಿಬ್ಬನ್‌ ಬಿಡಿಸಿ ನೂತನ ಶಾಖೆಗೆ ಚಾಲನೆ ನೀಡಿದರು. ಬ್ಯಾಂಕಿನ ಉಪ ಕಾರ್ಯಾಧ್ಯಕ್ಷೆ  ನ್ಯಾಯವಾದಿ  ರೋಹಿಣಿ ಜೆ. ಸಾಲ್ಯಾನ್‌ ಎಟಿಎಂ ಸೇವೆ,  ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಆರ್‌. ಮೂಲ್ಕಿ ಲಾಕರ್‌ ಸೇವೆಗೆ ಹಾಗೂ ಬ್ಯಾಂಕ್‌ನ ಉಪ ಪ್ರಧಾನ ವ್ಯವಸ್ಥಾಪಕ ಸುರೇಶ್‌ ಎಸ್‌. ಸಾಲ್ಯಾನ್‌ ಕಂಪ್ಯೂಟರೀಕೃತ ಸೇವೆಗಳಿಗೆ ಚಾಲನೆಯನ್ನಿತ್ತು ಶಾಖೆಯ ಶ್ರೇಯೋಭಿವೃದ್ಧಿಗೆ ಶುಭ ಕೋರಿದರು.

ಮುಖ್ಯ ಅತಿಥಿಯಾಗಿ ವಿಶಾಲ್‌ ಪ್ಲಾಸ್ಟ್‌ ಸಂಸ್ಥೆಯ ಆಡಳಿತ ನಿರ್ದೇಶಕ  ವಿ. ಕೆ. 
ಶೆಟ್ಟಿ, ಗೌರವ್ವಾನಿತ ಅತಿಥಿಗಳಾಗಿ ಸೂರತ್‌ ಬಿಲ್ಲವ ಸಂಘದ ಧುರೀಣರಾದ ಕೃಷ್ಣ ಎಸ್‌. ಅಂಚನ್‌, ಪ್ರಭಾಕರ್‌ ಪೂಜಾರಿ, ಕರ್ನಾಟಕ ಸಮಾಜ ಸೂರತ್‌ ಅಧ್ಯಕ್ಷ ಮನೋಜ್‌ ಸಿ. ಪೂಜಾರಿ, ಸ್ಥಳಿಯ ಉದ್ಯಮಿಗಳಾದ ದಿನೇಶ್‌ ಪೂಜಾರಿ ಮತ್ತು ವಿಠಲ ಟಿ. ಪೂಜಾರಿ (ಸರ ಸಾಗರ್‌), ಸಾಜೀದ್‌ ರಾವತ್‌, ಎಸ್‌. ನಜ್ರೆàತ್‌, ಜಗನ್ನಾಥ್‌ ಅಮೀನ್‌ ಉಪ್ಪಳ, ಮೋಹನ್‌ ರಾವ್‌ ಇಂದ್ರಾಳಿ, ಮನೀಷ್‌ ಪಾಟೇಲ್‌, ರವೀಂದ್ರ ಸುವರ್ಣ, ಜೈನ್‌ ಸಮಾಜ ಅಂಕ್ಲೇಶ್ವರ್‌ ಇದರ ಅಧ್ಯಕ್ಷ ರಾಜೇಂದ್ರ ಶಾØ,  ಬರೋಡಾ ಶಾಖೆಯ ಮುಖ್ಯಸ್ಥ ಮೋಹನ್‌ದಾಸ್‌  ಎಚ್‌. ಪೂಜಾರಿ, ಸೂರತ್‌ ಶಾಖೆಯ ಮುಖ್ಯಸ್ಥ  ಪ್ರಶಾಂತ್‌ ಪಿ. ಪೂಜಾರಿ, ಬ್ಯಾಂಕ್‌ನ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ವಿಜಯ್‌ ವಿ. ಪಾಲನ್‌, ಸುನೀಲ್‌ ಎ. ಗುಜರನ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದು  ಶುಭ ಕೋರಿದರು.

ಕಾರ್ಯಾಧ್ಯಕ್ಷ ಜಯ ಸುವರ್ಣ, ರೋಹಿಣಿ ಸಾಲ್ಯಾನ್‌, ಸಿ. ಆರ್‌. ಮೂಲ್ಕಿ ಹಾಗೂ ಮಾಜಿ ನಿರ್ದೇಶಕ ಎನ್‌. ಎಂ. ಸನೀಲ್‌ ಅವರು ಉಪಸ್ಥಿತ ಗಣ್ಯರಿಗೆ ಹಾಗೂ ಶಾಖೆಯ ಮುಖ್ಯಸ್ಥ ಜಯಪ್ರಸಾದ್‌ ಎನ್‌. ಬಂಗೇರ, ಸಹಾಯಕ ಪ್ರಬಂಧಕ ರಾಕೇಶ್‌ ಸಸಿಹಿತ್ಲು, ಸಹ ಅಧಿಕಾರಿಗ‌ಳಾದ  ಪ್ರಸಾದ್‌ ಬಂಗೇರ, ಪ್ರಹ್ಲಾದ್‌ ಪೂಜಾರಿ, ಜಯೇಶ್‌ ಫರ್ಮಾರ್‌, ಜಿಗ್ನೇಶ್‌ ಸರಳಾಯ, ಧನಂಜಯ ಜಿ. ಪಾಲನ್‌ ಅವರಿಗೆ ಪುಷ್ಪಗುತ್ಛವನ್ನಿತ್ತು ಶುಭ ಹಾರೈಸಿದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗಂಗಾಧರ್‌ ಕಲ್ಲಾಡಿ ಸಹಕರಿಸಿದರು.

Advertisement

ರವೀಂದ್ರ ಸಾಲ್ಯಾನ್‌, ರೇಖಾ ರವೀಂದ್ರ, ಸೌರಭ್‌ ಆರ್‌. ಸಾಲ್ಯಾನ್‌ ಪರಿವಾರ ಮತ್ತು ರಾಕೇಶ್‌ ಸಸಿಹಿತ್ಲು ಅವರು ಪೂಜಾದಿಗಳ ಯಜಮಾನತ್ವ ವಹಿಸಿದ್ದರು.  ಜಯಪ್ರಸಾದ್‌ ಎನ್‌.ಬಂಗೇರ ಸ್ವಾಗತಿಸಿದರು. ಬ್ಯಾಂಕ್‌ನ  ಉಪ ಪ್ರಧಾನ ಪ್ರಬಂಧ‌ಕ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‌ದಾಸ್‌ ಹೆಜ್ಮಾಡಿ ಬ್ಯಾಂಕ್‌ನ ಸೇವಾ ವೈಖರಿಯನ್ನು ಪ್ರಸ್ತಾಪಿಸಿ,  ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಸುನೀಲ್‌ ಎ. ಗುಜರನ್‌ ವಂದಿಸಿದರು. 

ನಾನು ಅನೇಕ ವರ್ಷಗಳಿಂದ ಟಾಟಾ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಶ್ರಮಿಸಿದವನು. ಅಲ್ಲಿಯೂ ಶಿಸ್ತು ಬದ್ಧತೆಯನ್ನು ಕಂಡವ. ಅದರಂತೆಯೇ ಭಾರತ್‌ ಬ್ಯಾಂಕ್‌ನಲ್ಲೂ ಶಿಸ್ತಿನ ಅರಿವು ಕಂಡಿದ್ದೇನೆ. ಶ್ರಮ ಮತ್ತು  ಶಿಸ್ತು  ಸಂಸ್ಥೆಯ ವ್ಯಕ್ತಿತ್ವಕ್ಕೆ ಮೌಲ್ಯವನ್ನು ಪ್ರಾಪ್ತಿಸುತ್ತದೆ. ಅದೇ ಒಂದು ಮೈಲಿಗಲ್ಲಾಗಿ ರೂಪುಗೊಂಡು ಎಲ್ಲವನ್ನೂ ಬೆಳೆಸುತ್ತದೆ. ಇದಕ್ಕೆ ಜಯ ಸುವರ್ಣರು ಮತ್ತು ಭಾರತ್‌ ಬ್ಯಾಂಕ್‌ ಉದಾಹರಣೆಯಾಗಿದೆ 
 – ಯಾಕೂಬ್‌ ರಾವತ್‌ (ಕಟ್ಟಡದ ಮಾಲಕರು).

ಸಾಮಾಜಿಕ ನ್ಯಾಯ ಸದಾ ನಮ್ಮನ್ನು ಅಭಿವೃದ್ಧಿಯ ಪಥದತ್ತ ಒಯ್ಯುವುದು. ಅಂಥದರಲ್ಲಿ ಭಾರತ್‌ ಬ್ಯಾಂಕ್‌ ಅಲ್ಪಾವಧಿಯಲ್ಲಿ ಮಹತ್ತರವಾದ ಸಾಧನೆ ಸಾಧಿಸಿರುವುದು ಭಾರತಿಯರಿಗೆಲ್ಲರಿಗೂ ಹೆಮ್ಮೆಯ ವಿಚಾರ. ವೈಜ್ಞಾನಿಕ ಮತ್ತು ಜಾಗತೀಕರಣದ ಕಾಲಘಟ್ಟದಲ್ಲೂ ಅದರಲ್ಲೂ ಹಣಕಾಸು ವ್ಯವಸ್ಥೆಯಲ್ಲಿ ಸಾರ್ವಜನಿಕವಾಗಿ ಸವಾಲಾಗಿಸಿ ವ್ಯವಹರಿಸಿ ಮುನ್ನಡೆ ಸಾಧಿಸುವುದೆಂದರೆ ಇದೊಂದು ಅಸಾಮಾನ್ಯ ಸಾಧನೆಯೆ ಸರಿ. ಭವಿಷ್ಯತ್ತಿನುದ್ದಕ್ಕೂ ಈ ಬ್ಯಾಂಕ್‌ ಶ್ರಮದಾಯಕ ಸೇವೆ ಮೂಲಕ ಶ್ರೀಮಂತರಿಂದ ಜನಸಾಮಾನ್ಯರವರೆಗೂ ಮನೆಮಾತಾಗಿ ಉಜ್ವಲ ಭವಿಷ್ಯ ಕಾಣಲಿ 
   – ವಿ. ಕೆ. ಶೆಟ್ಟಿ  (ಆಡಳಿತ ನಿರ್ದೇಶಕರು : ವಿಶಾಲ್‌ ಪ್ಲಾಸ್ಟ್‌ ಸಂಸ್ಥೆ).

Advertisement

Udayavani is now on Telegram. Click here to join our channel and stay updated with the latest news.

Next