Advertisement

ಸೆಮಿಫೈನಲ್ ಪ್ರವೇಶಿಸಿದ ಅಂಕಿತಾ

03:02 AM May 11, 2019 | Team Udayavani |

ಲುವಾನ್‌ (ಚೀನ): ಭಾರತದ ಭರವಸೆಯ ಆಟಗಾರ್ತಿ ಅಂಕಿತಾ ರೈನಾ ‘ಲುವಾನ್‌ ಟೆನಿಸ್‌ ಟೂರ್ನಿ’ಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರದ ಕ್ವಾ. ಫೈನಲ್ ಕಾಳಗದಲ್ಲಿ ಅವರು ತನಗಿಂತ ಬಹಳಷ್ಟು ಕೆಳ ರ್‍ಯಾಂಕಿಂಗಿನ ಹಾಂಕಾಂಗ್‌ನ ಯುಡಿಸ್‌ ಚಾಂಗ್‌ ಅವರನ್ನು ಭಾರೀ ಹೋರಾಟದ ಬಳಿಕ 2-6, 6-4, 7-5 ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾದರು.

Advertisement

‘ಈ ಮುಖಾಮುಖೀ ತೀವ್ರ ಪೈಪೋಟಿಯಿಂದ ಸಾಗಿತು. 2ನೇ ಹಾಗೂ 3ನೇ ಸೆಟ್‌ನಲ್ಲಿ ನಿಯಂತ್ರಣ ಸಾಧಿಸಿದ್ದರಿಂದ ಮೇಲುಗೈ ಸಾಧ್ಯವಾಯಿತು’ ಎಂದು ಅಂಕಿತಾ ಹೇಳಿದ್ದಾರೆ. ಸೆಮಿಫೈನಲ್ನಲ್ಲಿ ಅಂಕಿತಾ ರೈನಾ ಆತಿಥೇಯ ನಾಡಿನ 7ನೇ ಶ್ರೇಯಾಂಕದ ಶುಯು ಮಾ ವಿರುದ್ಧ ಸೆಣಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next