Advertisement

ಅಂಜನಿಪುತ್ರ ಆಡಿಯೋ ಬಂತು

10:31 AM Nov 29, 2017 | |

ಪುನೀತ್‌ ರಾಜಕುಮಾರ್‌ ನಟನೆಯ “ಅಂಜನಿಪುತ್ರ’ ಚಿತ್ರದ ಆಡಿಯೋ ಬಿಡುಗಡೆಗೆ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಯಿತು. ಹಿರಿಯ ನಿರ್ದೇಶಕ ಭಗವಾನ್‌, ಹಿರಿಯ ಸಂಗೀತ ನಿರ್ದೇಶಕ ರಾಜನ್‌, ನಟರಾದ ಶಿವರಾಜಕುಮಾರ್‌ ಹಾಗೂ ಚಿತ್ರತಂಡ ಜೊತೆಯಾಗಿ ಆಡಿಯೋ ಬಿಡುಗಡೆ ಮಾಡಿತು.

Advertisement

ಡ್ರೋನ್‌ ಕ್ಯಾಮರಾಗೆ ಜೋಡಿಸಿದ್ದ ಆಂಜನೇಯನ ಪ್ರತಿಮೆಯಲ್ಲಿ ಆಡಿಯೋವನ್ನು ವೇದಿಕೆಗೆ ತಂದಿದ್ದು ಎಲ್ಲರ ಗಮನ ಸೆಳೆಯಿತು. ಅಂದಿನ ಕಾರ್ಯಕ್ರಮದ ವಿಶೇಷವೆಂದರೆ ಪಿಆರ್‌ಕೆ ಆಡಿಯೋ. ಪುನೀತ್‌ ರಾಜಕುಮಾರ್‌ ಪಿಆರ್‌ಕೆ ಆಡಿಯೋ ಎಂಬ ಸಂಸ್ಥೆ ಮೂಲಕ “ಅಂಜನಿಪುತ್ರ’ದ ಹಾಡುಗಳನ್ನು ಹೊರತಂದಿದ್ದಾರೆ.

ಈ ಮೂಲಕ ನಿರ್ಮಾಣದ ಜೊತೆಗೆ ಸಂಗೀತ ಕ್ಷೇತ್ರಕ್ಕೂ ಪುನೀತ್‌ ಕಾಲಿಟ್ಟಿದ್ದಾರೆ ಪುನೀತ್‌. ಈ ಚಿತ್ರವನ್ನು ಎಂ.ಎನ್‌.ಕುಮಾರ್‌ ನಿರ್ಮಿಸಿದ್ದು, ಹರ್ಷ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದೆ. ಚಿತ್ರ ಡಿಸೆಂಬರ್‌ 22 ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next