Advertisement
ಹೊಳಲ್ಕೆರೆ ವೃತ್ತ ನಿರೀಕ್ಷ ರವೀಶ್ ಹಾಗೂ ಮುಖ್ಯಾಧಿಕಾರಿ ಎ.ವಾಸಿಂ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸರ್ಪಗಾವಲಿನಲ್ಲಿ ಪುರಸಭೆ ಸಿಬ್ಬಂದಿ ಸಹಯೋಗದಲ್ಲಿ ಕಟ್ಟಡ ಕಾರ್ಮಿಕರಿಂದ ಹೊಳಲ್ಕೆರೆ ಬಸ್ ನಿಲ್ದಾಣದಲ್ಲಿ ನೆಲೆ ನಿಂತಿದ್ದ ನೂರಾರು ವರ್ಷಗಳ ಐತಿಹಾಸಿಕ ಹಿನ್ನೆಲೆಯ ಆಂಜನೇಯ ಸ್ವಾಮಿ ದೇವಸ್ಥಾನವನ್ನು ತೆರವುಗೊಳಿಸಲಾಗಿದೆ.
Related Articles
Advertisement
ಪಟ್ಟಣದ ಹೃದಯ ಭಾಗದಲ್ಲಿದ್ದ ಅರಣ್ಯ ಇಲಾಖೆ ಕಚೇರಿಯನ್ನು ಪಟ್ಟಣದ ಹೊರವಲಯದ ಹನುಮಂತರ ದೇವರ ಕಣಿವೆಗೆ ವರ್ಗಾಯಿಸಿ ಅಲ್ಲಿಗೆ ಸರಕಾರಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. ಆದರೆ ಅರಣ್ಯ ಇಲಾಖೆಯಿಂದ ರಸ್ತೆ ಸಾರಿಗೆ ಇಲಾಖೆಗೆ ವರ್ಗಾವಣೆ ಮಾಡುವ ಕಾಲದಲ್ಲಿ ಆಗಿನ ಪಟ್ಟಣ ಪಂಚಾಯ್ತಿ ಆಂಜನೇಯ ದೇವಸ್ಥಾನ ಜಾಗವನ್ನು ಹೊರತುಪಡಿಸಿ ವರ್ಗವಣೆ ಮಾಡಿದ್ದಲ್ಲದೆ ದೇವಸ್ಥಾನ ಜಾಗವನ್ನು ಇಲ್ಲಿನ ಸಮಿತಿಗೆ ಇ-ಖಾತೆ ಮಾಡಿ ಕೊಡಲಾಗಿತ್ತು. ಹಾಗಾಗಿ ಬಸ್ ನಿಲ್ದಾಣ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಬಸ್ ನಿಲ್ದಾಣದಲ್ಲಿ ಇದ್ದ ದೇವಸ್ಥಾನ ಕಟ್ಟಡ ಸರಾಗವಾಗಿ ಬಸ್ ಸಂಚಾರಕ್ಕೆ ತೊಂದರೆ ಹಿನ್ನೆಲೆಯಲ್ಲಿ ದೇವಸ್ಥಾನ ತೆರವು ಲೆಕ್ಕಾಚಾರದಲ್ಲಿದ್ದ ಸಾರಿಗೆ ಇಲಾಖೆಯ ವಿರುದ್ಧ ದೇವಸ್ಥಾನ ಸಮಿತಿ ಸದಸ್ಯರು ಸ್ಥಳೀಯ ನ್ಯಾಯಾಲಯದಿಂದ ತೆರವು ನಿಲ್ಲಿಸಲು ತಡೆಯಾಜ್ಞೆ ತರಲಾಗಿತ್ತು.
ತಡೆಯಾಜ್ಞೆ ತೆರವು
ಹೈಕೋರ್ಟ್ ತೆರವುಗೊಳಿಸಲು ನೀಡಿದ ಆದೇಶದ ಹಿನ್ನೆಲೆಯಲ್ಲಿ ಭಾನುವಾರ ಭಕ್ತರ ಅಸಮಾಧಾನದ ನಡುವೆ ದೇವಸ್ಥಾನವನ್ನು ಪುರಸಭೆ ಸಿಬ್ಬಂದಿ ತೆರವುಗೊಳಿಸಿದರು.
ಬಸ್ ನಿಲ್ದಾಣ ಉದ್ಘಾಟನೆಗೆ ಸಹಕಾರಿ
ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ನಿರ್ಮಾಣ ಮಾಡಿ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬಸ್ ನಿಲ್ದಾಣದ ಉದ್ಘಾಟನೆ ಎನ್ನಲಾಗಿದೆ. ಒಂದಿಷ್ಟು ರಸ್ತೆ ಕಾಮಗಾರಿ ಬಾಕಿ ಇದ್ದು, ಕೈಗೊಳ್ಳಲು ದೇವಸ್ಥಾನ ಅಡ್ಡಿಯಾಗಿದ್ದು ಭಾನುವಾರ ತೆರವಿನಿಂದ ಕಾಮಗಾರಿ ಪೂರ್ಣಗೊಳಿಸಿ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಕ್ಕೆ ಉದ್ಘಾಟನೆಗೆ ಸಹಕಾರಿಯಾಗಿದೆ.
ದೇವಸ್ಥಾನ ತೆರವು ಕಾರ್ಯಾಚರಣೆಯಲ್ಲಿ ಪುರಸಭೆ ಅಧ್ಯಕ್ಷ ಆರ್.ಎ. ಆಶೋಕ್, ಉಪಾಧ್ಯಕ್ಷ ಕೆ.ಸಿ. ರಮೇಶ್, ಬಿಜೆಪಿ ನಗರಾಧ್ಯಕ್ಷ ಪ್ರವೀಣ್ ಸೇರಿದಂತೆ ಹಲವಾರು ಪಟ್ಟಣದ ಮುಖಂಡರು ಪಾಲ್ಗೊಂಡಿದ್ದರು.