Advertisement
ಹಂಪೆಯು ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಎಂಬುದು ಪಂಪಾ ಕ್ಷೇತ್ರವೆಂದು ಈ ಸ್ಥಳದ ಹಿಂದಿನ ಹೆಸರು. ರಾಮಾಯಣದ ಕಾಲದಿಂದಲೇ ಪ್ರಸಿದ್ಧಿ ಹೊಂದಿದ ಇದು ರಾಮ ಮತ್ತು ಹನುಮಂತರ ಪ್ರಥಮ ಸಮಾಗಮ ಕ್ಷೇತ್ರವೆಂದು, ರಾಮಾಯಣದ ಕಿಷ್ಕಿಂದೆ ಎಂದು ಗುರುತಿಸಿಕೊಂಡಿದೆ. ಐತಿಹಾಸಿಕ, ಆಧ್ಯಾತ್ಮಿಕ ಮತ್ತು ಅಪಾರ ಶಿಲ್ಪ ಕಲೆಗಳಿಂದ ಸಮ್ಮಿಲನ ಗೊಂಡ ಅಪರೂಪದ ಸ್ಥಳ ಈ ಹಂಪೆ. ಇಂತಹ ಪಾವನ ಕ್ಷೇತ್ರದಲ್ಲಿ ನೆಲೆನಿಂತವನೇ ಚಕ್ರತೀರ್ಥದಬಳಿ ಯಂತ್ರದಿಂದ ಬಂಧಿಸಿದ ಆಂಜನೇಯ ಸ್ವಾಮಿ.ಚಕ್ರತೀರ್ಥದ ಯಂತ್ರೋಧಾರಕ ಆಂಜನೇಯ. ವ್ಯಾಸರಾಜರು ತಮ್ಮ ಕಾಲದಲ್ಲಿ ನಾಡಿನುದ್ದಕ್ಕೂ ಸಂಚರಿಸಿ ಬರಿ ಒಂದೇ ಸಂವತ್ಸರದಲ್ಲಿ ಒಟ್ಟು 732 ಪ್ರಾಣದೇವರನ್ನು ಪ್ರತಿಷ್ಠಾಪನೆ ಮಾಡಿದರು. ಅವುಗಳಲ್ಲಿ ಹಂಪೆಯ ಈ ಆಂಜನೇಯನಿಗೆ ಐತಿಹಾಸಿಕ ಹಿನ್ನಲೆಯಿದೆ.
Related Articles
ಒಮ್ಮೆ ವ್ಯಾಸರಾಜರು ಚಕ್ರತೀರ್ಥದ ಬಳಿಯ ಬೆಟ್ಟವೊಂದರಲ್ಲಿ ತಮ್ಮ ಆಹಿ°ಕ, ಜಪ ತಪಗಳನ್ನು ಆಚರಿಸುತ್ತಿರುವಾಗ ಬೆಟ್ಟದ ದೊಡ್ಡ ಬಂಡೆಮೇಲೆ ಅಂಗಾರ (ಇಜ್ಜಲು ) ದಿಂದ ಆಂಜನೇಯನ ಚಿತ್ರ ಬಿಡಿಸಿದರಂತೆ. ಅದರ ಫಲವಾಗಿ ಸುಂದರ ಆಂಜನೇಯನ ಮೂರುತಿ ಆ ಬಂಡೆಯಲ್ಲಿ ರೂಪುಗೊಂಡಿತು. ಆದರೆ ಕ್ಷಣಾರ್ಧದಲ್ಲಿ ಕಪಿ ರೂಪ ಧರಿಸಿ ಅಲ್ಲಿಂದ ಜಿಗಿದು ಕಣ್ಮರೆಯಾಯಿತು.
ಆಶ್ಚರ್ಯಗೊಂಡು ವ್ಯಾಸರಾಜರು ಮತ್ತಮ್ಮೆ ಚಿತ್ರಬಿಡಿಸಿದಾಗ ಕೂಡ ಇದೇ ಘಟನೆ ಮರುಕಳಿಸಿತು. ಈ ರೀತಿ 12 ಬಾರಿ ಪುನರಾವರ್ತನೆಯಾದಾಗ ವ್ಯಾಸರಾಜರು ಆ ಬಂಡೆಮೇಲೆ ಷಟ್ಕೊàನ ಚಕ್ರ ಬರೆದು ಮಧ್ಯದಲ್ಲಿ ಪುನಃ ಆಂಜನೇಯನ ಚಿತ್ರ ಬರೆದು, ಸುತ್ತಲೂ ಯಂತ್ರ ಬೀಜಾಕ್ಷರ ಬರೆದು, ಪ್ರಾಣದೇವರನ್ನು ದಿಗ½ಂಧಿಸಿದರು. ಅದಾದ ನಂತರ ಸ್ವಯಂ ಒಡಮೂಡಿದ ಆಂಜನೇಯನ ಮೂರುತಿ ಶಾಶ್ವತವ್ವಾಗಿ ಆ ಕಲ್ಲು ಬಂಡೆಯಲ್ಲಿ ಪ್ರತಿಷ್ಠಾಪನೆ ಗೊಂಡಿತು. ಯಂತ್ರಗಳ ಮಧ್ಯ ಉದ್ಭವಿಸಿದ ಮೂರ್ತಿ ಎನ್ನುವ ಹಿನ್ನಲೆ ಇರುವುದರಿಂದ ಇದು ಯಂತ್ರೋಧಾರಕ ಪ್ರಾಣದೇವರೆಂದೇ ಪ್ರಸಿದ್ಧವಾಯಿತು. ಮುಂದೆ ಪುರಂದರದಾಸರು, ವಿಜಯದಾಸರು ಮುಂತಾದವರು ಈ ಕ್ಷೇತ್ರಕ್ಕೆ ಬಂದು, ಯಂತ್ರೋದ್ಧಾರಕನ ಕುರಿತು ಅನೇಕ ಸ್ತೋತ್ರ ರಚಿಸಿ ಹಾಡಿ ಹೊಗಳಿದರು. ವ್ಯಾಸರಾಜರು ಸಕಲ ಅಭೀಷ್ಟವನ್ನು ಕೊಡುವ ಯಂತ್ರೋದ್ಧಾರಕ ಪ್ರಾಣದೇವರ ಕುರಿತು ಸ್ತೋತ್ರ ರಚಿಸಿ ಜಿಜ್ಞಾಸುಗಳಿಗೆ ಕೊಡುಗೆಯಾಗಿ ನೀಡಿದ್ದು ಇದೆ ಸ್ಥಳದಲ್ಲಿ. ವ್ಯಾಸರಾಜರಿಂದ ಇದೊಂದು ನಾಡಿನ ಜಾಗ್ರತ ಹನುಮಂತ ಕ್ಷೇತ್ರವೆಂದು ಪ್ರಸಿದ್ದಿ ಹೊಂದಿತು.
Advertisement
ಮನೋಹರ ಜೋಶಿ