Advertisement

ಅಂಜನಾದ್ರಿಯಲ್ಲಿ ಹೋಮ, ಹವನ ಶ್ರೀರಾಮಹನುಮ ಭಕ್ತರ ಸಂಭ್ರಮ

03:30 PM Aug 05, 2020 | sudhir |

ಗಂಗಾವತಿ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆದಿದ್ದು ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶ್ರೀ ಆಂಜನೇಯ ದೇವರಿಗೆ ಜಲಾಭಿಷೇಕ ಪಂಚಾಮೃತಾಭಿಷೇಕ ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಪವಮಾನಹೋಮ ಮಂತ್ರಪಠಣ ಹಾಗೂ ಶ್ರೀರಾಮಹನುಮ‌ಭಜನೆ ನಡೆಸಲಾಯಿತು.

Advertisement

ಶಾಸಕ ಪರಣ್ಣ ಮುನವಳ್ಳಿ ಯುವ ಬ್ರಿಗೇಡ್ ರಾಜ್ಯ ಸಂಚಾಲಕ ಚಕ್ರವರ್ತಿ ಸೂಲಿಬೆಲೆ, ಪತಂಜಲಿ ಯೋಗ ಸಮತಿ ರಾಜ್ಯ ಉಸ್ತುವಾರಿ ಭವರಲಾಲ್ ಆರ್ಯ, ಆನೆಗೊಂದಿ ರಾಜಮನೆತನದ ಶ್ರೀಕೃಷ್ಣದೇವರಾಯ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ,ಸಂತೋಷ ಕೆಲೋಜಿ,ಗ್ರಾಮೀಣ ಪಿಎಸ್ ಐ ಜೆ.ದೊಡ್ಡಪ್ಪ ಸೇರಿ ದೇಗುಲ ಸಮಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿದ್ದರು.

ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಆಗಮಿಸಿದವರು ಸೂಚನೆ ನೀಡಲಾಗುತ್ತಿತ್ತು. ದೇಗುಲದಲ್ಲಿ ತೀರ್ಥಪ್ರಸಾದದ ವ್ಯವಸ್ಥೆ ಇರಲಿಲ್ಲ. ನಂತರ ಯುವಬ್ರೀಗೇಡ್ ವತಿಯಿಂದ ಗಾಳಿಪಟ ಸ್ಪರ್ಧೆ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next