ಗಂಗಾವತಿ : ಗಂಗಾವತಿ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಬುಧವಾರ ನಡೆಸಲಾಯಿತು .22 ದಿನಗಳಲ್ಲಿ ಹುಂಡಿಯ ಹಣ ಸಂಗ್ರಹ 21.24 ಲಕ್ಷ ರೂ. ಆಗಿದ್ದು ನೇಪಾಳದ 1 ಕರೆನ್ಸಿ ನೋಟು ಹುಂಡಿಯಲ್ಲಿ ಪತ್ತೆಯಾಗಿದೆ .ಕಳೆದ ಮೇ ತಿಂಗಳಿನಲ್ಲಿ 11.99 ಲಕ್ಷ ಸಂಗ್ರಹವಾಗಿತ್ತು.
ಅಂಜನಾದ್ರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಹಸೀಲ್ದಾರ್ ಯು. ನಾಗರಾಜ ನೇತೃತ್ವದಲ್ಲಿ ಹುಂಡಿ ಎಣಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ ವಿರೂಪಾಕ್ಷಪ್ಪ ಆರ್ ಹೊರಪೇಟೆ , ಶಿರಸ್ತೆದಾರರಾದ ಅನಂತ ಜೋಶಿ, ರವಿಕುಮಾರ್ ನಾಯಕವಾಡಿ, ಕೃಷ್ಣವೇಣಿ ಕಂದಾಯ ನಿರೀಕ್ಷಕರಾದ ಹನುಮಂತಪ್ಪ, ಮಂಜುನಾಥ ಹಿರೇಮಠ, ಮರಳಿ ಮಹೇಶ್ ದಲಾಲ, ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿಗಳಾದ ಜೆ.ಎನ್.ಶ್ರೀಕಂಠ, ಕವಿತಾ ಕೆ, ಶ್ವೇತಾ, ಅನಿತಾ, ಅನ್ನಪೂರ್ಣ, ಸೌಭಾಗ್ಯ, ಕವಿತಾ, ಗಾಯತ್ರಿ, ಸೈಯ್ಯದ್, ಮಹ್ಮದ್ ರಫಿ ಎಸ್.ಕವಿತಾ ದ್ವಿ.ದ.ಸ ಪೂಜಾ, ಶಿವಮೂರ್ತಿ, ಮಹಾಲಕ್ಷ್ಮಿ, ಪ್ರತಿಭಾ ಹಾಗೂ ಪಿ ಸಾಣಾಪುರದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ರಾಜಶೇಖರ ಸುನಿಲ್ ಪೋಲಿಸ್ ಸಿಬ್ಬಂದಿ ವೆಂಕಟೇಶ್ ಹಾಗೂ ಪ್ರವಾಸಿ ಮಿತ್ರ ಸಿಬ್ಬಂದಿ ವೆಂಕಟೇಶ ವ್ಯವಸ್ಥಾಪಕ ಹಾಗೂ ದೇವಸ್ಥಾನದ ಸಿಬ್ಬಂದಿವರ್ಗ ಗೂ ಭಕ್ತಾದಿಗಳಿದ್ದರು.ಹುಂಡಿ ಎಣಿಕೆ ಕಾರ್ಯವು ಸಂಪೂರ್ಣವಾಗಿ ಪೊಲೀಸ್ ಬಂದೊಬಸ್ಥ ಹಾಗೂ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಸಲಾಯಿತು.
ಇದನ್ನೂ ಓದಿ : ದುಬೈ: ಯೋಗಾದಲ್ಲಿ ಗಿನ್ನೆಸ್ ರೆಕಾರ್ಡ್ ಬರೆದ ಭಾರತೀಯ ಯೋಗ ಟೀಚರ್