ಗಂಗಾವತಿ: ಐತಿಹಾಸಿಕ ಪ್ರಸಿದ್ದವಾಗಿರುವ ತಾಲೂಕಿನ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ದೇಗುಲ ಪೂಜಾ ವಿವಾದ ಪುನಹ ಮುನ್ನೆಲೆಗೆ ಬಂದಿದೆ. ನಾಲ್ವರ ಶಿಷ್ಯರ ಸಮೇತ ದೇಗುಲದಲ್ಲಿ ತಂಗಲು ಮತ್ತು ಪೂಜೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ತಹಶೀಲ್ಧಾರರಿಗೆ ಮನವಿಯನ್ನು ಸಲ್ಲಿಸಿದರು.
ಬೆಂಗಳೂರಿನ ಹೈಕೋರ್ಟ್ ಪೂಜೆ ಮಾಡಲು ಮಹಾಂತ ವಿದ್ಯಾದಾಸ ಬಾಬಾ ಅವರಿಗೆ ಅವಕಾಶ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಆದ್ದರಿಂದ ನಾಲ್ವರು ಸಹಾಯಕ ಶಿಷ್ಯರೊಂದಿಗೆ ಅವಕಾಶ ನೀಡಬೇಕು. ಮಂಗಳಾರತಿ ಮತ್ತು ಎಲ್ಲಾ ಧಾರ್ಮಿಕ ಕಾರ್ಯ ಮಾಡಲು ಅನುವು ಮಾಡುವಂತೆ ದೇಗುಲದ ಕಾರ್ಯನಿರ್ವಹಕ ಅಧಿಕಾರಿ ಹಾಗೂ ತಹಸೀಲ್ದಾರ್ ಎಂ.ರೇಣುಕಾ ಅವರಿಗೆ ಸೋಮವಾರ ಸಂಜೆ ಮನವಿ ಮಾಡಿದ್ದಾರೆ.
ಕೋರ್ಟ್ ಸೂಚನೆಯಂತೆ ಪೂಜೆ ಮಾಡಲು ಮತ್ತು ದೇಗುಲದ ಹತ್ತಿರ ಇರುವ ಕೋಣೆಯಲ್ಲಿ ಈ ಮೊದಲು ಇದ್ದ ಅರ್ಚಕರೊಬ್ಬರಿಗೆ ಅವಕಾಶ ನೀಡಲಾಗುತ್ತದೆ. ಈ ವಿಷಯವನ್ನು ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರ ಗಮನಕ್ಕೆ ತರಲಾಗಿದ್ದು ಉಳಿದ ನಾಲ್ವರಿಗೆ ಪೂಜೆ ಮತ್ತು ಕೋಣೆಯಲ್ಲಿ ವಾಸ ಮಾಡಲು ಅವಕಾಶ ನೀಡಲು ಅವಕಾಶವಿಲ್ಲ ಎಂದು ತಹಸೀಲ್ದಾರ್ ಎಂ.ರೇಣುಕಾ ಅವರು ತಿಳಿಸಿದ್ದಾರೆ.
ಇದನ್ನೂ ಓದಿ :ಕಂಪೆನಿಯ ರಾಯಭಾರಿ ಮಾಡುವುದಾಗಿ ಹೇಳಿ ನಟಿ ಪ್ರಣೀತಾ ಹೆಸರಿನಲ್ಲಿ 13.5 ಲಕ್ಷ ರೂ. ವಂಚನೆ
ಕಳೆದ ಎರಡು ವರ್ಷಗಳಿಂದ ದೇಗುಲದ ಪೂಜೆ ಮತ್ತು ಹಣಕಾಸು ಮಾಲೀಕತ್ವದ ವಿಷಯದಲ್ಲಿ ಗೊಂದಲವುಂಟಾಗಿ ದೇಗುಲವನ್ನು ಸರಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ಲಿಂದ ದೇಗುಲಕ್ಕೆ ಭಕ್ತರಿಂದ ಎರಡು ಕೋಟಿ ರೂ.ಗೂ ಅಧಿಕ ದೇಣಿಗೆ ಸಂಗ್ರಹವಾಗಿದೆ. ಧಾರ್ಮಿಕ ಹಾಗು ಅಭಿವೃದ್ಧಿ ಕಾರ್ತಗಳು ಸರಕಾರದ ಸ್ವಾಧೀನಕ್ಕೆ ಬಂದ ನಂತರ ನಿರಂತರವಾಗಿ ನಡೆಯುತ್ತಿವೆ.