ಗಂಗಾವತಿ: ತಾಲೂಕಿನ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದಲ್ಲಿ ಆಗಷ್ಟ್ ಮೊದಲ ವಾರದಲ್ಲಿ ಆಯೋಜಿಸಲಾಗಿರುವ ಸಂತ ಸಮ್ಮೇಳನಕ್ಕೆ ಮಾಜಿ ಮುಖ್ಯಮಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸೇರಿ ಇತರೆ ಕಾಂಗ್ರೆಸ್ ರಾಜ್ಯ ಮುಖಂಡರನ್ನು ಅಂಜನಾದ್ರಿ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ನೇತೃತ್ವದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಬಸವರಾಜಸ್ವಾಮಿ ಮಳಿಮಠ ಹಾಗೂ ರಾಜು ನಾಯಕ ಬೆಂಗಳೂರಿಗೆ ತೆರಳಿ ಸನ್ಮಾನಿಸಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಬಸವರಾಜಸ್ವಾಮಿ ಮಳಿಮಠ ಸುದ್ದಿಗಾರರೊಂದಿಗೆ ಮಾತನಾಡಿ, ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಪ್ರದೇಶ ಗಂಗಾವತಿ ಭಾಗದಲ್ಲಿರುವುದು ನಮ್ಮೆಲ್ಲರ ಪುಣ್ಯ ಅರ್ಚಕ ಮಹಾಂತ ವಿದ್ಯಾದಾಸ ನೇತೃತ್ವದಲ್ಲಿ ಆಗಷ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಅಂಜನಾದ್ರಿಯಲ್ಲಿ ವಿಶ್ವ ಸಂತ ಸಮ್ಮೇಳನ ಆಯೋಜನೆ ಮಾಡಲಾಗಿದ್ದು ಈ ಕಾರ್ಯಕ್ರಮ ಪಕ್ಷಾತೀತವಾಗಿ ಎಲ್ಲರೂ ಜತೆಗೂಡಿ ಆಯೋಜನೆ ಮಾಡಲಾಗುತ್ತಿದೆ. ರಾಜ್ಯದ ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಬಿ.ಕೆ.ಹರಿಪ್ರಸಾದ, ಸತೀಶ ಜಾರಕಿ ಹೊಳಿ, ಈಶ್ವರಖಂಡ್ರೆ, ಅಲ್ಲಂ ವೀರಭದ್ರಪ್ಪ, ಸಲೀಂ ಅಹಮದ್, ಧ್ರುವನಾರಾಯಣ ಸೇರಿ ಅನೇಕರನ್ನು ಆಹ್ವಾಸಲಾಗಿದ್ದು ಪವಿತ್ರ ಭೂಮಿಯಲ್ಲಿ ಸಂತರ ಸಮ್ಮೇಳನಕ್ಕೆ ಕಾಂಗ್ರೆಸ್ ಪಕ್ಷ ಸರ್ವ ಸಹಕಾರ ನೀಡಲಿದೆ ಎಂದು ಎಲ್ಲಾ ಮುಖಂಡರು ಭರವಸೆ ನೀಡಿದ್ದಾರೆಂದು ಮಳಿಮಠ ಉದಯವಾಣಿ ಗೆ ತಿಳಿಸಿದ್ದಾರೆ.