Advertisement

ಧಾರ್ಮಿಕ ದತ್ತಿ ಪಟ್ಟಿಗೆ ಅಂಜನಾದ್ರಿ ಬೆಟ್ಟ ಸೇರ್ಪಡೆ

06:05 AM Sep 27, 2018 | Team Udayavani |

ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟವನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಕಾಯ್ದೆ (1997) ಅನ್ವಯ ಅಧಿಕಾರ ಬಳಸಿ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಾಲಯ ಸಂಸ್ಥೆಗಳ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಈ ಕುರಿತಂತೆ ಕಂದಾಯ ಇಲಾಖೆ (ಮುಜರಾಯಿ) ಅಧೀನ ಕಾರ್ಯದರ್ಶಿ ಬಿ.ಎಸ್‌.ನಾಗರತ್ನಮ್ಮ ಆದೇಶ ಹೊರಡಿಸಿದ್ದಾರೆ.

Advertisement

ಕಳೆದ ಹಲವು ದಶಕಗಳಿಂದ ದೇವಾಲಯ ಕಾರ್ಯಕ್ರಮಗಳನ್ನು ಆನೆ ಗೊಂದಿ ರಾಜ ವಂಶಸ್ಥರನ್ನೊಳಗೊಂಡ ಟ್ರಸ್ಟ್‌ ನಡೆಸುತ್ತಿತ್ತು. ಟ್ರಸ್ಟ್‌ನಿಂದ ನೇಮಕಗೊಂಡ ಉತ್ತರ ಭಾರತದ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಟ್ರಸ್ಟ್‌ ಆದೇಶ ಧಿಕ್ಕರಿಸಿ ಸ್ವಂತ ಟ್ರಸ್ಟ್‌ ಮಾಡಿದ್ದರಿಂದ ಅವರನ್ನು ಅರ್ಚಕ ಸ್ಥಾನದಿಂದ ಟ್ರಸ್ಟ್‌ ಕಮಿಟಿ ಪದಚ್ಯುತಿಗೊಳಿಸಿತ್ತು. ಟ್ರಸ್ಟ್‌ ಮತ್ತು ಬಾಬಾ ಬೆಂಬಲಿಗರ ನಡುವೆ ಪರಸ್ಪರ ಸಂಘರ್ಷ ಜರುಗಿ ಪೊಲೀಸ್‌ ವರದಿಯನ್ವಯ ಜಿಲ್ಲಾಡಳಿತ ಸರಕಾರದ ವಶಕ್ಕೆ ಪಡೆದಿತ್ತು.

ಇದೀಗ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳ ಪಟ್ಟಿಗೆ ಅಂಜನಾದ್ರಿ ಬೆಟ್ಟ ಸೇರ್ಪಡೆಯಾಗಿದ್ದು ಎಲ್ಲಾ ಕಾರ್ಯವನ್ನು ಧಾರ್ಮಿಕ ಇಲಾಖೆಯಿಂದ ನೇಮಕಗೊಳ್ಳುವ ಕಮಿಟಿ ನೋಡಿಕೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next