ಮುಂಬಯಿ: ರಾಜಕೀಯವು ಸಮಾಜದಲ್ಲಿ ವಿಭಜನೆಯನ್ನು ಉಂಟುಮಾ ಡಿದರೆ, ಸಂಸ್ಕೃತ ಮತ್ತು ಸಂಸ್ಕೃತಿ ಸಮಾಜವನ್ನು ಒಂದುಗೂಡಿಸುತ್ತದೆ ಎಂದು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ತಿಳಿಸಿದರು.
ಹೈ ರೇಂಜ್ ಬುಕ್ ಆಫ್ ವಲ್ಡ…ì ರೆಕಾರ್ಡ್ಸ್ ಸಾಧಕಿ ಡಾ| ಮಂಜುಷ ಕುಲಕರ್ಣಿ ಅವರನ್ನು ರಾಜಭವನದಲ್ಲಿ ಜು. 23ರಂದು ರಾಜ್ಯಪಾಲರು ಅಭಿನಂದಿಸಿ ಶುಭ ಹಾರೈಸಿ, ರೈತರು, ಸೈನಿಕರು, ಸಾಹಿತ್ಯ ಮತ್ತು ತಾತ್ವಿಕ ಸಂತರು ಭಾರತದ ಏಕತೆಯನ್ನು ಕಾಪಾಡಿಕೊಂಡು ದೇಶವನ್ನು ಒಂದುಗೂಡಿಸಿದರು. ಆದ್ಯ ಶಂಕರಾ ಚಾರ್ಯರು ತಮ್ಮ 32 ವರ್ಷಗಳ ಜೀವನದಲ್ಲಿ ಅನೇಕ ವ್ಯಾಖ್ಯಾನಗಳು ಮತ್ತು ಕವನಗಳನ್ನು ಬರೆದಿದ್ದಾರೆ. ಅವರು ಭಾರತದಾ ದ್ಯಂತ ಪ್ರವಾಸ ಮಾಡಿ ರಾಮೇಶ್ವರಂ, ಬದ್ರಿನಾಥ್, ಜಗನ್ನಾಥಪುರಿ ಮತ್ತು ದ್ವಾರಕದಲ್ಲಿ ಧರ್ಮ ಪೀಠಗಳನ್ನು ಸ್ಥಾಪಿಸಿದರು. ತಿರುವಳ್ಳುವರ್ ಮತ್ತು ಇತರ ಸಂತರು ಇದನ್ನೇ ಮಾಡಿದ್ದಾರೆ.
ಮಹಾರಾಷ್ಟ್ರಕ್ಕೆ ಬಂದು ಇಲ್ಲಿನ ಸಾಹಿತ್ಯವನ್ನು ಓದಿದ ಬಳಿಕ ಮರಾಠಿ ಸಾಹಿತ್ಯ ಎಷ್ಟು ಶ್ರೇಷ್ಠವಾಗಿದೆ ಎಂದು ನನಗೆ ಮನವರಿಕೆಯಾಯಿತು. ಎಲ್ಲರೂ ಇಂಗ್ಲಿಷ್ ಕಲಿಯಬೇಕು. ಆದರೆ ಮಾತೃಭಾಷೆಯನ್ನು ಮರೆಯಬಾರದು ಮತ್ತು ಎಲ್ಲ ಮಾತೃಭಾಷೆಗಳ ತಾಯಿಯಾದ ಸಂಸ್ಕೃತ ವನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿ, ಮಂಜುಷಾ ಕುಲಕರ್ಣಿಯವರು ಮುಂದಿನ ಪೀಳಿಗೆಗೆ ಹೊಸ ಆಯಾಮವನ್ನು ನೀಡಲಿದ್ದಾರೆ ಎಂದರು.
ಕಡಿಮೆ ಅವಧಿಯಲ್ಲಿ ಹೆಚ್ಚು ಹೆಚ್ಚು ಕವನಗಳನ್ನು ರಚಿಸಿದ್ದಕ್ಕಾಗಿ ಪ್ರಸಿದ್ಧ ಲೇಖಕಿ, ಕವಿ ಡಾ| ಮಂಜುಷ ಕುಲಕರ್ಣಿ ಅವರನ್ನು ಹೈ ರೇಂಜ್ ಬುಕ್ ಆಫ್ ವಲ್ಡ…ì ರೆಕಾರ್ಡ್ಸ್‌ಗೆ ನಾಮಾಂಕಿತಗೊಳಿಸಿರುವುದಕ್ಕೆ ರಾಜ್ಯಪಾಲರು ಅಭಿನಂದಿಸಿದರು.
ಡಾ| ಮಂಜುಷ ಕುಲಕರ್ಣಿ ವಿವಿಧ ರೀತಿಯ ಕವನಗಳನ್ನು ಪ್ರಸ್ತುತಪಡಿಸಿದರು. ಪಂ| ಅತುಲ್ ಶಾಸ್ತ್ರಿ ಭಗರೆ ಗುರೂಜಿ ಮತ್ತು ಮುಖ್ಯ ಮಾಹಿತಿ ಆಯುಕ್ತ ಸುಮಿತ್ ಮಲಿಕ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ನಟ ಮತ್ತು ನಾಟಕಕಾರ ಪ್ರಶಾಂತ್ ದಾಮ್ಲೆ, ಸಂಗೀತಗಾರ ಕೌಶಲ್ ಇನಾಮಾªರ್ ಮೊದಲಾದವರು ಉಪಸ್ಥಿತರಿದ್ದರು. ಸಮೀರಾ ಗುಜಾರ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.