ನವಿಮುಂಬಯಿ: ನವಿ ಮುಂಬಯಿ ಮಹಾನಗರ ಪಾಲಿಕೆ ಆಡಳಿತವು ಪ್ರತೀದಿನ 15 ಸಾವಿರ ಜನರಿಗೆ ಲಸಿಕೆ ನೀಡಲು ಯೋಜಿಸಿದ್ದು, ಆದರೆ ಲಸಿಕೆ ಲಭ್ಯವಿಲ್ಲದ ಕಾರಣ ಕಳೆದ ಐದು ದಿನಗಳಲ್ಲಿ 8,863 ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಅದು ಎರಡನೇ ಡೋಸ್ ಆಗಿದ್ದು, ಆದ್ದರಿಂದ ನವಿಮುಂಬಯಿಗರು ದಿನಕ್ಕೆ ಸರಾಸರಿ ಒಂದು ಸಾವಿರ ಪ್ರಮಾಣವನ್ನು ಮಾತ್ರ ಪಡೆಯುತ್ತಿದ್ದಾರೆ.
ಸ್ಪುಟ್ನಿಕ್ ಲಸಿಕೆ ಖರೀದಿಸುವ ಮಹಾ ನಗರ ಪಾಲಿಕೆಯ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಆದ್ದರಿಂದ ನಾಗರಿಕರು ಲಸಿಕೆಯನ್ನು ಪಡೆಯಲು ವ್ಯಾಕ್ಸಿನೇಶನ್ ಕೇಂದ್ರಗಳಿಂದ ಕೇಂದ್ರಗಳಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನವಿಮುಂಬಯಿಯ ಒಟ್ಟು ಜನಸಂಖ್ಯೆ ಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ 11 ಲಕ್ಷ ಅರ್ಹ ಫಲಾನುಭವಿಗಳಿದ್ದಾರೆ. ಮೊದಲ ಡೋಸ್ ಅನ್ನು 6,15,296 ಮಂದಿಗೆ ಮತ್ತು
2ನೇ ಡೋಸ್ ಅನ್ನು 1,61,273 ಮಂದಿಗೆ ನೀಡಲಾಗಿದ್ದು, ಒಟ್ಟು 7,76,569 ಮಂದಿಗೆ ಡೋಸ್ ನೀಡಲಾಗಿದೆ ಮುಚ್ಚಿರುವ ಲಸಿಕೆ ಕೇಂದ್ರಗಳು ಅರ್ಹ ಫಲಾನುಭವಿಗಳಲ್ಲಿ ಶೇ. 60ರಷ್ಟಿ ದ್ದರೆ, ನವಿಮುಂಬಯಿ ಮಹಾನಗರ ಪಾಲಿಕೆ ಸರಕಾರದಿಂದ 4,61,160ರಷ್ಟು ಲಸಿಕೆ ಪ್ರಮಾಣವನ್ನು ಪಡೆದಿದೆ. ಸರಕಾರ ದಿಂದ ಲಸಿಕೆಗಳು ಲಭ್ಯವಿಲ್ಲದ ಕಾರಣ ಲಸಿಕೆ ಕೇಂದ್ರಗಳನ್ನು ಮುಚ್ಚಬೇಕಾಗಿದೆ. ಲಸಿಕೆಗಳ ಕಡಿಮೆ ಪೂರೈಕೆಯಿಂ ದಾಗಿ ಮನಪಾ ಆಡಳಿತವು ಯೋಜಿಸಬೇ ಕಾಗಿದೆ. ಈಗಾಗಲೇ 2ನೇ ಪ್ರಮಾಣವನ್ನು ಪಡೆಯದ ನಾಗರಿಕರು ಇನ್ನೂ ಹಲವು ದಿನಗಳವರೆಗೆ ಕಾಯಬೇಕಾಗುತ್ತದೆ.
15 ದಿನಗಳಲ್ಲಿ 34,690 ಪ್ರಮಾಣ ಸಂಗ್ರಹ ಮನಪಾ ಆಡಳಿತವು ಗರಿಷ್ಠ ಸಂಖ್ಯೆಯ ನಾಗರಿಕರಿಗೆ ಲಸಿಕೆ ನೀಡಲು ಜಂಬೋ ಲಸಿಕೆ ಕೇಂದ್ರಗಳ ಜತೆಗೆ 100ಕ್ಕೂ ಹೆಚ್ಚು ಕೇಂದ್ರಗಳನ್ನು ಸ್ಥಾಪಿಸಿದೆ. ಆದರೂ ಇದನ್ನು ಕಳೆದ ಹಲವಾರು ದಿನ ಗಳಿಂದ ಮುಚ್ಚಲಾಗಿದೆ. ಲಸಿಕೆ ಹಾಕು ವುದು ಮಾತ್ರವಲ್ಲ, ಲಸಿಕೆ ಪಡೆಯುವುದು ಹೇಗೆ ಎಂಬುದು ಆಡಳಿತದ ಮುಂದಿ ರುವ ಪ್ರಶ್ನೆಯಾಗಿದೆ. ಜು. 1ರಿಂದ ನವಿಮುಂಬಯಿ ಮನಪಾ ಸರಕಾರದಿಂದ 34,690 ಪ್ರಮಾಣವನ್ನು ಮಾತ್ರ ಪಡೆದಿದೆ.