ಮುಂಬಯಿ: ಬಿಲ್ಲವರ ಅಸೋಸಿ ಯೇಶನ್ ಮುಂಬಯಿ ಗೋರೆಗಾಂವ್ ಸಮಿತಿ ಯಿಂದ ಜು. 11ರಂದು ಲಲಿತ್ ಹೊಟೇಲಿನ ಕ್ರಿಸ್ಟಲ್ ಹಾಲ್‌ನಲ್ಲಿ ಸಂಕಷ್ಟದಲ್ಲಿರುವ ಪರಿಸರದ ಸಮಾಜ ಬಾಂಧವರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮವು ನಡೆಯಿತು.
ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸಚ್ಚೀಂದ್ರ ಕೋಟ್ಯಾನ್ ಮಾತನಾಡಿ, ವಿಶ್ವದ ಎÇÉೆಡೆ ವ್ಯಾಪಿಸಿದ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಟ್ಟುತ್ತಿದ್ದು, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಭಯಭೀತರಾಗದೆ ಧೈರ್ಯದಿಂದ ಮುನ್ನಡೆಯಬೇಕಾಗಿದೆ. ಈ ಪರಿಸ್ಥಿಯಿಂದ ನಾವು ಪಾಠ ಕಲಿಯುವುದರೊಂದಿಗೆ ಹಂಚಿ ತಿನ್ನೋಣ ಎಂದರು.
ವಿದ್ಯಾ ಉಪಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ ತೋನ್ಸೆ ಮಾತನಾಡಿ, ನಮ್ಮ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳು ನಮ್ಮ ಸಂಸ್ಥೆಯ ವಿದ್ಯಾನಿಧಿಯಿಂದ ಕೊಡಮಾಡುವ ಸಹಾಯ ವನ್ನು ಸ್ವೀಕರಿಸಬೇಕು. ಪ್ರತಿಭೆ ಹಾಗೂ ಆರ್ಥಿಕ ಅನುಕೂಲತೆ ಇದ್ದಲ್ಲಿ ಸ್ಪರ್ಧಾತ್ಮಕ ಜಗತ್ತಿನಿಂದ ಮೇಲಕ್ಕೇರಬಹುದು ಎಂದು ತಿಳಿಸಿದರು.
ಉಪಾಧ್ಯಕ್ಷ ಶಂಕರ ಡಿ. ಪೂಜಾರಿ ಮಾತನಾಡಿ, ಹಿರಿಯರು ಕಟ್ಟಿದ ಈ ಸಂಘಟನೆಯನ್ನು ಎಲ್ಲರೂ ಉಳಿಸಿ-ಬೆಳೆಸುವುದರೊಂದಿಗೆ ಮುಂದಿನ ಪೀಳಿಗೆಗೆ ಅದರ ಪ್ರಯೋಜನವಾಗುವಂತಾಗ ಬೇಕು ಎಂದರು.
ಪರಿಸರದ ಅರ್ಹ ಕುಟುಂಬಗಳಿಗೆ ಅಸೋಸಿ ಯೇಶನ್‌ನ ಕೇಂದ್ರ ಕಚೇರಿಯಿಂದ ನೀಡಲಾಗಿದ್ದ ಕಿಟ್ ಅನ್ನು ವಿತರಿಸಲಾಯಿತು. ಗೌರವ ಅತಿಥಿಯಾಗಿದ್ದ ಉದ್ಯಮಿಗಳಾದ ಯಶವಂತ ಪೂಜಾರಿ ಮತ್ತು ಚಂದ್ರಶೇಖರ ಪೂಜಾರಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಗೌರವ ಅಧ್ಯಕ್ಷ ಹಾಗೂ ಲಲಿತ್ ಹೊಟೇಲಿನ ಮಾಲಕ ಜಗನ್ನಾಥ ಕೋಟ್ಯಾನ್ ಕಾರ್ಯಕ್ರಮಕ್ಕೆ ಸ್ಥಳಾವಾಕಾಶ ನೀಡಿದರು. ಬಬಿತಾ ಕೋಟ್ಯಾನ್ ಸಹಕರಿಸಿದರು. ಉಪಾಧ್ಯಕ್ಷರಾದ ರಮೇಶ್ ಸುವರ್ಣ, ಉಪ ಕೋಶಾಧಿಕಾರಿ ದಿನೇಶ್ ಪೂಜಾರಿ, ಸುರೇಶ್ ಅಂಚನ್, ಜನಾರ್ದನ ಕೋಟ್ಯಾನ್, ವಿಜಯ, ಪುಷ್ಪಾ ಅಮೀನ್, ಪುಷ್ಪಾ ಸುವರ್ಣ, ನವೀನ್ ಪೂಜಾರಿ, ವಿಟuಲ್ ಪೂಜಾರಿ, ಸತೀಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.