Advertisement

ಅನಿವಾಸಿ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಕೆ ಆಸಕ್ತಿ

05:41 PM Jul 04, 2021 | Team Udayavani |

ಬೆಂಗಳೂರು: ದೂರದ ಲಂಡನ್‌ನಲ್ಲಿರುವಅನಿವಾಸಿ ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ ಭಾಷೆಕಲಿಸುವ ನಿಟ್ಟಿನಲ್ಲಿ ಆಸಕ್ತಿ ತೋರಿದ್ದು, ಆನ್‌ಲೈನ್‌ನಲ್ಲಿಕನ್ನಡಕಲಿಕೆಯ ತರಗತಿಗೆ ಹೆಚ್ಚಿನ ಸಂಖ್ಯೆಯಲ್ಲಿಸೇರಿಸುತ್ತಿದ್ದಾರೆ.

Advertisement

ಕನ್ನಡ ನಾಡಿನ ಸಾಂಸ್ಕೃತಿಕ ಸೊಗಡಿನ ಅರಿವಿನಜತೆಗೆ ತವರಿನಲ್ಲಿರುವ ಅಜ್ಜ-ಅಜ್ಜಿಯರೊಂದಿಗೆತಮ್ಮ ಮಕ್ಕಳು ಕನ್ನಡದಲ್ಲಿಯೇ ಸಂವಹನ ನಡೆಸಲಿಎಂಬ ಸದುದ್ದೇಶದಿಂದ ಕನ್ನಡಕಲಿಕೆಯ ಆನ್‌ಲೈನ್‌ತರಗತಿಗೆ ಸೇರ್ಪಡೆಗೊಳಿಸುತ್ತಿದ್ದು ಈ ಕಾರ್ಯಕ್ಕೆಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೂಡ ಏಣಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕನ್ನಡ ಕಲಿಕೆ ಕುರಿತ ಆನ್‌ಲೈನ್‌ತರಗತಿಗಳನ್ನು ಹಮ್ಮಿಕೊಳ್ಳುತ್ತಿದ್ದು ಈ ತರಗತಿಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಈ ಹಿಂದೆಏರ್ಪಡಿಸುತ್ತಿದ್ದ ಆನ್‌ಲೈನ್‌ ತರಗತಿಗಳಲ್ಲಿ10 ರಿಂದ15 ಅನಿವಾಸಿ ಕನ್ನಡದ ವಿದ್ಯಾರ್ಥಿಗಳು ಮಾತ್ರ ಭಾಗವಹಿಸುತ್ತಿದ್ದರು. ಆದರೆ ಕೋವಿಡ್‌ಲಾಕ್‌ಡೌನ್‌ ವೇಳೆ ಈ ಸಂಖ್ಯೆ54ಕ್ಕೆ ಏರಿಕೆಯಾಗಿದೆ.

ಈ ಹಿಂದೆ ಇಂಗ್ಲೆಂಡ್‌ನ‌ಮ್ಯಾಂಚೆಸ್ಟರ್‌ ಪ್ರಾಂತ್ಯದ ಅನಿವಾಸಿ ಕನ್ನಡಿಗರಮಕ್ಕಳು ಮಾತ್ರ ಆನ್‌ಲೈನ್‌ ತರಗತಿಗಳಲ್ಲಿಭಾಗವಹಿಸುತ್ತಿದ್ದರು. ಆದರೆ ಈಗ ಈ ಪ್ರಾಂತ್ಯದಮಕ್ಕಳಷ್ಟೇ ಅಲ್ಲ, ಲಂಡನ್‌ನ ಬೇರೆ ಪ್ರಾಂತ್ಯದಲ್ಲಿನೆಲೆಸಿರುವ ಕನ್ನಡಿಗರ ಮಕ್ಕಳು ಕೂಡ ಅನ್‌ಲೈನ್‌ತರಗತಿಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದುಪ್ರಾಧಿಕಾರದ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಕನ್ನಡ ಕಲಿ ಪಠ್ಯ ಬಳಕೆ: ಅನಿವಾಸಿ ಕನ್ನಡಿಗರಮಕ್ಕಳಿಗೆ ಆನ್‌ಲೈನ್‌ನಲ್ಲಿ ಪಠ್ಯ ಮಾಡುವಾಗ ಕನ್ನಡಕಲಿ ಪಠ್ಯವನ್ನು ಬಳಕೆ ಮಾಡಲಾಗುತ್ತದೆ. ಸರ್ಕಾರದಪಠ್ಯಗಳನ್ನೇ ಶೇ.50 ಬಳಕೆ ಮಾಡಿಕೊಳ್ಳಲಾಗುತ್ತದೆ.ಇದರ ಜತೆಗೆ ಅಲ್ಲಿನ ಪರಿಸರಕ್ಕೆ ಪೂರಕ ಪಠ್ಯಗಳನ್ನೂರೂಪಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣತಿಳಿಸುತ್ತಾರೆ.

ಏಳು ಜನ ಶಿಕ್ಷಕರು ಮಕ್ಕಳಿಗೆ ಕನ್ನಡದ ಬಗ್ಗೆ ಪಠ್ಯ ಹೇಳಿಕೊಡುತ್ತಿದ್ದಾರೆ. ಮೊದಲು ಕನ್ನಡ ಕೇಳಿಸಿಕೊಳ್ಳುವುದಕ್ಕೆ ಆದ್ಯತೆ ನೀಡಿ ಆ ನಂತರ ಪಠ್ಯ ಕಲಿಕೆಗೆಮನ್ನಣೆ ನೀಡಲಾಗುತ್ತಿದೆ. ಶನಿವಾರ ಮತ್ತು ಭಾನುವಾರ 4ಗಂಟೆ ಮಕ್ಕಳಿಗೆ ಆನ್‌ಲೈನ್‌ ತರಗತಿಗಳುನಡೆಯಲಿವೆ ಎಂದು ಹೇಳುತ್ತಾರೆ.

Advertisement

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next