Advertisement

ರಾಜ್ಯದ 5 ಕಡೆಗಳಲ್ಲಿ ಉರ್ದು ಮನೆ: ಮಲಿಕ್

01:10 PM Jul 01, 2021 | Team Udayavani |

ಮುಂಬಯಿ: ರಾಜ್ಯದಲ್ಲಿ ಉರ್ದು ಭಾಷೆಯ ಪ್ರಗತಿಗೆ, ಮರಾಠಿ ಮತ್ತು ಉರ್ದು ಭಾಷೆಯ ಬರಹಗಾರರು, ಕವಿಗಳು, ಚಿಂತಕರು ಮೊದಲಾದವರಲ್ಲಿ ಸೃಜನಶೀಲ ವಿಚಾರಗಳ ವಿನಿಮಯಕ್ಕಾಗಿ ರಾಜ್ಯದ 5 ಸ್ಥಳಗಳಲ್ಲಿ ಉರ್ದು ಮನೆಗಳ ನಿರ್ಮಾಣ ಕಾರ್ಯ ಅಲ್ಪಸಂಖ್ಯಾಕ ಅಭಿವೃದ್ಧಿ ಇಲಾಖೆಯು ಕೈಗೆತ್ತಿಕೊಂಡಿದೆ. ಈ ಉರ್ದು ಮನೆಗಳ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣ ಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದ್ದು, ಅವುಗಳ ನಿರ್ವಹಣೆಗೆ ನೀತಿ ನಿರ್ಧರಿ ಸಲಾಗಿದೆ ಎಂದು ಇಲಾಖೆಯ ಸಚಿವ ನವಾಬ್‌ ಮಲಿಕ್‌ ಹೇಳಿದ್ದಾರೆ.

Advertisement

ನಾಂದೇಡ್‌ ಉರ್ದು ಮನೆಗಾಗಿ 8.16 ಕೋಟಿ ರೂ.ಗಳ ನಿಧಿಯನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ  ಸೊಲ್ಲಾಪುರದಲ್ಲಿ  ಉರ್ದು ಮನೆಯ ನಿರ್ಮಾಣ ಅಂತಿಮ ಹಂತದಲ್ಲಿದೆ. ಮಾಲೆಗಾಂವ್‌ ಉರ್ದು ಮನೆಯ ಕಾಮಗಾರಿ ಪೂರ್ಣಗೊಂಡಿದ್ದು, ಅದರ ಕಾರ್ಯಾರಂಭ ನಡೆಯುತ್ತಿದೆ. ಮುಂಬಯಿ ವಿಶ್ವವಿದ್ಯಾನಿಲಯದ ಕಲಿನಾ ಪ್ರದೇಶದಲ್ಲಿ ಉರ್ದು ಮನೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ನಿಟ್ಟಿನಲ್ಲಿ ಮುಂಬಯಿ ವಿಶ್ವವಿ ದ್ಯಾನಿಲಯವು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ನಾಗಪುರದಲ್ಲಿ ಇಸ್ಲಾಮಿಕ್‌

ಸಾಂಸ್ಕೃತಿಕ ಕೇಂದ್ರದ ಕಟ್ಟಡವನ್ನು ಉರ್ದು ಮನೆಯಾಗಿ ಅಭಿವೃದ್ಧಿಪಡಿ ಸಲಾಗುತ್ತಿದೆ. ಇದಕ್ಕಾಗಿ 50 ಲಕ್ಷ ರೂ.ಗಳ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಸಚಿವ ಮಲಿಕ್‌ ಹೇಳಿದ್ದಾರೆ.

ಇಲಾಖೆಯು ಕಾಮಗಾರಿ ಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಉರ್ದು ಮನೆಗಳನ್ನು ತೆರೆಯುವ ಸಿದ್ಧತೆಯಲ್ಲಿದೆ. ಈ ಮನೆಗಳ ಬಳಕೆ, ನಿರ್ವಹಣೆ, ದುರಸ್ತಿ ಮತ್ತು ನಿರ್ವಹಣೆಗೆ ಮೂಲ ನೀತಿಯನ್ನು ಸರಕಾರದ ನಿರ್ಣಯದಿಂದ ಸೂಚಿಸ ಲಾಗಿದೆ. ಈ ಉರ್ದು ಮನೆಗಳಲ್ಲಿ ಆಯೋಜಿಸಬೇಕಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯೋಜಿಸಲು ಜಿÇÉಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಸಮಿತಿಯನ್ನು ರಚಿಸಲಾಗಿದೆ ಎಂದು ಸಚಿವ ಮಲಿಕ್‌ ಹೇಳಿದ್ದಾರೆ.

ಉರ್ದು ಮನೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಭಾಷೆಗಳಲ್ಲಿ ಪುಸ್ತಕಗಳ ಪ್ರಕಟನೆ ಇತ್ಯಾದಿ ನಡೆಯಲಿದೆ. ಉರ್ದು ಮನೆ ಗ್ರಂಥಾಲಯ, ಉರ್ದು, ಮರಾಠಿ ಮತ್ತು ಹಿಂದಿ ಭಾಷೆಯ ಪತ್ರಿಕೆಗಳು, ಉರ್ದು ಭಾಷಾ ನಿಯತಕಾ ಲಿಕೆಗಳು, ಪುಸ್ತಕಗಳು ಗ್ರಂಥಾಲ

Advertisement

ಯದಲ್ಲಿ ಲಭ್ಯವಿರುತ್ತವೆ. ಹೊಸದಿಲ್ಲಿ ಯಲ್ಲಿ  ಉರ್ದು ಭಾಷೆಯ ಪ್ರಚಾರಕ್ಕಾಗಿ ರಾಷ್ಟ್ರೀಯ ಮಂಡಳಿಯು ನಡೆಸುತ್ತಿರುವ ವಿವಿಧ ತರಬೇತಿ ಕಾರ್ಯಕ್ರಮಗಳ ಮಾದರಿಯಲ್ಲಿ ಉರ್ದು ಮನೆಗಳಲ್ಲಿ ತರಬೇತಿ ನೀಡ ಲಾಗುವುದು. ಇದಕ್ಕಾಗಿ ಪರಿಷತ್‌ನಿಂದ ಅನುದಾನ ಮತ್ತು ಮಾರ್ಗದರ್ಶನ ಪಡೆಯಲಾಗುವುದು. ಕೌನ್ಸಿಲ್‌ ನಡೆಸುವ ಕಾರ್ಯಕ್ರಮದ ಪ್ರಕಾರ ಉರ್ದು ಭಾಷೆ ಮಾತನಾಡಲು ಸಮು ದಾಯಕ್ಕೆ ಕಲಿಸಲು ಉರ್ದು ಮನೆಗಳಲ್ಲಿ ತರಗತಿಗಳನ್ನು ನಡೆಸಲಾಗು ವುದು ಎಂದು ಸಚಿವ ನವಾಬ್‌ಮಲಿಕ್‌ ಹೇಳಿದ್ದಾರೆ.

ಉರ್ದು ಭಾಷೆಯ ಬೆಳವ ಣಿಗೆಯನ್ನು ಉತ್ತೇಜಿಸುವುದರ ಜತೆಗೆ ಮರಾಠಿ ಮತ್ತು ಉರ್ದು ಭಾಷೆಗಳ ನಡುವಿನ ವಿನಿಮಯ ಹೆಚ್ಚಿಸುವ ಮೂಲಕ ರಾಜ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹೆಚ್ಚಿಸುವಲ್ಲಿ ಉರ್ದು ಮನೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಚಿವ ಮಲಿಕ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next