Advertisement
ಅನಿತಾ ಅವರ ವಾರ್ಷಿಕ ಆದಾಯ ಬರೋಬ್ಬರಿ 76 ಲಕ್ಷ 35 ಸಾವಿರ 950 ರೂ. ಇವರ ಪತಿ ಸಿಎಂ ಕುಮಾರಸ್ವಾಮಿ ಅವರ ವಾರ್ಷಿಕ ಆದಾಯ 12 ಲಕ್ಷ 46 ಸಾವಿರದ 600 ರೂ. ಪತಿಗಿಂತ ಪತ್ನಿಯ ಆದಾಯವೇ ಹೆಚ್ಚು. ಸೋಮವಾರ ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ ವೇಳೆ ತಮ್ಮ ಆದಾಯ ಘೋಷಿಸಿಕೊಂಡಿದ್ದಾರೆ. 2017-18ರಲ್ಲಿ ಅನಿತಾ ತಮ್ಮ ವಾರ್ಷಿಕ ಆದಾಯ 76 ಲಕ್ಷ 35 ಸಾವಿರ 950 ರೂ ಎಂದು ಘೋಷಿಸಿಕೊಂಡಿದ್ದಾರೆ.
Related Articles
ಎಲ್.ಆರ್.ಶಿವರಾಮೇಗೌಡ ಅವರಿಗಿಂತ ಪತ್ನಿ ಸುಧಾ ಶಿವರಾಮೇಗೌಡ ಸಿರಿವಂತೆ. ಪತ್ನಿ 35 ಲಕ್ಷ ರೂ. ಮೌಲ್ಯದ 11.22 ಕೆಜಿ ಚಿನ್ನ ಹಾಗೂ 3 ಕಾರುಗಳ ಒಡತಿಯಾಗಿದ್ದಾರೆ. ಒಟ್ಟು 82.76 ಲಕ್ಷ ಚರ ಮತ್ತು ಸ್ಥಿರಾಸ್ತಿ ಹೊಂದಿದ್ದಾರೆ. ಶಿವರಾಮೇಗೌಡರ ಬಳಿ 1.12 ಕೆಜಿ ಚಿನ್ನವಿದೆ. ಇದರ ಮೌಲ್ಯ 3.50 ಲಕ್ಷ ರೂ. ಉಳಿದಂತೆ 7,54,665 ರೂ.ನ ಮಾರುತಿ ಸ್ವಿಫ್ಟ್, 18.50 ಲಕ್ಷ ರೂ. ಮೌಲ್ಯದ ಇನ್ನೋವಾ ಹಾಗೂ 11.47 ಲಕ್ಷ ರೂ. ಮೌಲ್ಯದ ಸ್ಕಾರ್ಪಿಯೋ ಕಾರುಗಳಿಗೆ ಒಡೆಯರಾಗಿದ್ದು, 44,37,473 ರೂ. ಚರ ಹಾಗೂ ಸ್ಥಿರಾಸ್ತಿ ಹೊಂದಿದ್ದಾರೆ.
Advertisement
ಶಿವಮೊಗ್ಗ ಲೋಕಸಭೆ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು 63 ಕೋಟಿ ರೂ. ಆಸ್ತಿ ಘೋಷಿಸಿ ಕೊಂಡಿದ್ದಾರೆ. 2017-18ನೇ ಸಾಲಿಗೆ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಲಾದ ಮಾಹಿತಿ ಅನ್ವಯ ಇವರು 32. 09 ಕೋಟಿ ರೂ. ಚರ ಹಾಗೂ 30.91 ಕೋಟಿ ರೂ. ಸ್ಥಿರ ಆಸ್ತಿ ಹೊಂದಿದ್ದಾರೆ.