Advertisement

ಜೂಟಾಟದಲ್ಲಿ ಅನಿತಾ ಭಟ್‌

01:58 PM Jul 17, 2020 | mahesh |

ನಟಿ ಅನಿತಾ ಭಟ್‌ ಸದ್ದಿಲ್ಲದೇ ಹೊಸ ಸಿನಿಮಾವೊಂದನ್ನು ಮಾಡಿ ಮುಗಿಸಿದ್ದಾರೆ. ಆ ಸಿನಿಮಾದ ಹೆಸರು ಜೂಟಾಟ. ಈಗಾಗಲೇ ಕನ್ನಡದಲ್ಲಿ ಜೂಟಾಟ ಎಂಬ ಸಿನಿಮಾವೊಂದು ಬಂದಿರುವ ವಿಚಾರ ನಿಮಗೆ ಗೊತ್ತೇ ಇದೆ. ಹಾಗಂತ ಆ ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ. ಈ ಚಿತ್ರದಲ್ಲಿ ಅನಿತಾ ಭಟ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ನಿರತವಾಗಿದೆ.

Advertisement

ಇದೊಂದು ಕಾಮಿಡಿ ಹಿನ್ನೆಲೆಯಲ್ಲಿ ಸಾಗುವ ಚಿತ್ರವಾಗಿದ್ದು, ಒಂದಷ್ಟು ಹಾರರ್‌ ಅಂಶಗಳು ಕೂಡಾ ಈ ಚಿತ್ರದಲ್ಲಿ ಸೇರಿಕೊಂಡಿವೆಯಂತೆ. ಅನಿತಾ ಭಟ್‌ ಅವರಿಗೆ ಈ ಹಿಂದೆ ಮಾಡಿರದಂತಹ ಪಾತ್ರ ಈ ಚಿತ್ರದಲ್ಲಿ ಸಿಕ್ಕಿದೆಯಂತೆ. ಅಂದಹಾಗೆ, ಮಾರ್ಚ್‌ನಲ್ಲಿ ಲಾಕ್‌ಡೌನ್‌ ಆರಂಭವಾಗುವ ಮುನ್ನವೇ ಈ ಚಿತ್ರ ಆರಂಭವಾಗಿದ್ದು, ಲಾಕ್‌ಡೌನ್‌ನಿಂದಾಗಿ ನಿಂತಿತ್ತಂತೆ. ಆ ನಂತರ ಚಿತ್ರೀಕರಣಕ್ಕೆ ಅನುಮತಿ ಕೊಟ್ಟ ಬಳಿಕ ಚಿತ್ರೀಕರಣ ಆರಂಭಿಸಿದೆ. ಕೇವಲ ಸೆಟ್‌ನಲ್ಲಿ 20
ಜನರನ್ನಷ್ಟೇ ಇಟ್ಟುಕೊಂಡು ಚಿತ್ರೀಕರಣ ಪೂರ್ಣಗೊಳಿಸಿದೆ ಚಿತ್ರತಂಡ.

ಗಣೇಶ್‌ ಕಾರ್ತಿ ಈ ಚಿತ್ರದ ನಿರ್ದೇಶಕರು. ಹಲವು ವರ್ಷಗಳಿಂದ ಚಿತ್ರರಂಗದಲ್ಲಿದಲ್ಲಿದ್ದು, ಅನೇಕ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿದೆ. ಇದು ಅವರ ಚೊಚ್ಚಲ ಚಿತ್ರ. ಮಹೇಶ್‌ ಚೈತನ್ಯ ಅವರ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಚಿತ್ರಕ್ಕಿದೆ. ಚಿತ್ರದಲ್ಲಿ ಅನಿತಾ ಭಟ್‌, ಮೋಹನ್‌ ಜುನೇಜಾ , ಗಿರೀಶ್‌ ಶಿವಣ್ಣ, ಅಶೋಕ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಸುನೀತ್‌ ಹಲಗೇರಿ ಛಾಯಾಗ್ರಹಣ, ಪ್ರದ್ಯೊತ್ತಮ್‌ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next