Advertisement

ಬಿಸಿಬಿಸಿ ಹಾಡಿನಲ್ಲಿ ಅನಿರುದ್ಧ್-ಸಂಜನಾ

11:41 AM May 30, 2017 | |

ಅನಿರುದ್ಧ್ ಅಭಿನಯದ “ರಾಜ ಸಿಂಹ’ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದೆ. ಇತ್ತೀಚೆಗೆ ಅನಿರುದ್ಧ್ ಮತ್ತು ಸಂಜನಾ ಅಭಿನಯದಲ್ಲಿ ಒಂದು ಬಿಸಿಬಿಸಿ ಹಾಡೊಂದನ್ನು ಚಿತ್ರೀಕರಿಸಿಕೊಳ್ಳಲಾಗಿದೆ. “ಬಾರೋ ಚೋರನೆ ಬಳಿಗೆ ಒಮ್ಮೆ ಸುಮ್ಮನೆ …’ ಎಂದು ಸಾಗುವ ಈ ಹಾಡನ್ನು ರಾಘವೇಂದ್ರ ಅವರು ಬರೆದರೆ, ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ.

Advertisement

ಈ ಹಾಡಿಗೆ ತ್ರಿಭುವನ್‌ ಸಂಗೀತ ಸಂಯೋಜಿಸಿದ್ದಾರೆ. ಅಂದಹಾಗೆ, “ರಾಜ ಸಿಂಹ’ ಚಿತ್ರವನ್ನು ಸಿ.ಡಿ. ಬಸಪ್ಪ ನಿರ್ಮಿಸುತ್ತಿದ್ದು, ರವಿರಾಮ್‌ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅನಿರುದ್ಧ್ ಎದುರು ನಿಖೀತಾ ನಾಯಕಿಯಾಗಿ ನಟಿಸಿದ್ದು, ಭಾರತಿ ವಿಷ್ಣುವರ್ಧನ್‌, ಅಂಬರೀಶ್‌, ಶರತ್‌ ಲೋಹಿತಾಶ್ವ ಮುಂತಾದವರು ನಟಿಸಿದ್ದಾರೆ.

ಈ ಚಿತ್ರವು “ಸಿಂಹಾದ್ರಿಯ ಸಿಂಹ’ ಚಿತ್ರದ ಮುಂದುವರೆದ ಭಾಗವಾಗಿದ್ದು, ಇದರಲ್ಲಿ ವಿಷ್ಣುವರ್ಧನ್‌ ಅವರ ಪಾತ್ರವೂ ಇರುತ್ತದಂತೆ. “ಸಿಂಹಾದ್ರಿಯ ಸಿಂಹ’ ಚಿತ್ರದಲ್ಲಿನ ವಿಷ್ಣುವರ್ಧನ್‌ ಅವರ ಸ್ಟಾಕ್‌ ಶಾಟ್‌ಗಳನ್ನು ಬಳಸಿಕೊಳ್ಳುವದರ ಜೊತೆಗೆ, ಗ್ರಾಫಿಕ್ಸ್‌ ಮೂಲಕ ಅವರನ್ನು ಮತ್ತೂಮ್ಮೆ ಸೃಷ್ಠಿಸಲಾಗುತ್ತಿರುವುದು ಈ ಚಿತ್ರದ ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next