Advertisement
ಇಲ್ಲಿ ಸುಮಾರು 100ಕ್ಕೂ ಅಧಿಕ ಜಾತಿಯ 1,200ರಷ್ಟು ಪ್ರಾಣಿ-ಪಕ್ಷಿಗಳಿವೆ. ಇದರಲ್ಲಿ 13 ಹುಲಿ, 4 ಸಿಂಹ, 12 ಚಿರತೆ, 2 ಕರಡಿ, ಕಾಡುಬೆಕ್ಕು, ಚಿರತೆ ಬೆಕ್ಕು ಸಹಿತ ಹಲವು ಮಾಂಸಾಹಾರಿ ಪ್ರಾಣಿಗಳಿವೆ. ನಿತ್ಯ ಇವುಗಳಿಗೆ ಸುಮಾರು 150 ಕೆಜಿಗಿಂತಲೂ ಅಧಿಕ ವಿವಿಧ ರೀತಿಯ ಮಾಂಸ, ಸುಮಾರು 50 ಕೆಜಿ ಕೋಳಿ ಮಾಂಸ ಅಗತ್ಯವಿದೆ. ಪ್ರತೀ ಹುಲಿಗೆ ದಿನಕ್ಕೆ 8ರಿಂದ 10 ಕಿಲೋ ಮಾಂಸ ಅಗತ್ಯವಿದೆ. ಇದನ್ನು ಪ್ರತೀದಿನ ಪಿಲಿಕುಳ ಆಡಳಿತ ಮಂಡಳಿಯು ಟೆಂಡರ್ ಪಡೆದವರಿಂದ ತರಿಸುತ್ತದೆ. ಆದರೆ ಲಾಕ್‌ಡೌನ್ ಆದ ಬಳಿಕ ಮಾಂಸದ ಕೊರತೆ ಎದುರಾಗಿದೆ. ಹೀಗಾಗಿ ಪ್ರಾಣಿಗಳ ನಿರ್ವಹಣೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕಳೆದೆರಡು ವಾರಗಳಿಂದ ಕೋಳಿ ಮಾಂಸ ತರಿಸಲಾಗುತ್ತಿದೆ. ಹೊರಜಿಲ್ಲೆಗಳ ಕೋಳಿಗಳಲ್ಲಿ ಹಕ್ಕಿಜ್ವರ ಇತ್ತು ಎಂಬ ಕಾರಣದಿಂದ ಅದನ್ನು ನಿಲ್ಲಿಸಿ, ಸದ್ಯ ಸ್ಥಳೀಯವಾಗಿ ಅಧಿಕ ಕೆಜಿ ಕೋಳಿ ಮಾಂಸವನ್ನೇ ಪ್ರಾಣಿಗಳಿಗೆ ಹಾಕಲಾಗುತ್ತಿದೆ. ಹುಲಿ, ಸಿಂಹ, ಚಿರತೆಗಳಿಗೆ ಕೋಳಿ ಮಾಂಸವನ್ನೇ ಹಲವು ದಿನ ನೀಡುವುದು ಅವುಗಳ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ ಎಂದು ಕೂಡ ಹೇಳಲಾಗುತ್ತಿದೆ.
5 ಎಕರೆ ಜಾಗದಲ್ಲಿ ಹುಲ್ಲು ಬೆಳೆದಿರುವ ಕಾರಣ, ಸಸ್ಯಾಹಾರಿ ಪ್ರಾಣಿಗಳು ತಿನ್ನುವ ಆಹಾರ ಲಭ್ಯತೆ ಇರುವುದರಿಂದ ಸದ್ಯಕ್ಕೇನು ಸಮಸ್ಯೆ ಇಲ್ಲ. ಆದರೆ ಕೆಲವು ಪಕ್ಷಿಗಳಿಗೆ ಮೀನು ಬೇಕಾಗಿದ್ದು ಅದು ಬೇಕಾದಷ್ಟು ಸಿಗುತ್ತಿಲ್ಲ.