Advertisement

9 ಟನ್‌ ಜಾನುವಾರು ಚರ್ಮ ಜಪ್ತಿ

11:01 AM Oct 19, 2021 | Team Udayavani |

ಕಲಬುರಗಿ: ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ ಸುಮಾರು 9 ಟನ್‌ ಜಾನುವಾರು ಚರ್ಮಗಳನ್ನು ಸೋಮವಾರ ಆಳಂದ ತಾಲೂಕಿನ ನರೋಣ ಪೊಲೀಸರು ಜಪ್ತಿ ಮಾಡಿದ್ದಾರೆ.

Advertisement

ಕಡಗಂಚಿ ಕ್ರಾಸ್‌ ಸಮೀಪ ನಿಂತಿದ್ದ ಲಾರಿಯಿಂದ ದುರ್ವಾಸನೆ ಬರುತ್ತಿತ್ತು. ಈ ವಿಷಯ ತಿಳಿದ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಹುಣಚಿರಾಯ (ಕೇಶವ) ಮೋಟಗಿ ಸ್ಥಳಕ್ಕೆ ಭೇಟಿ ನೀಡಿ ಲಾರಿ ಚಾಲಕನನ್ನು ವಿಚಾರಿಸಿದಾಗ ಗೋವು, ಎಮ್ಮೆ, ಚರ್ಬಿ, ಕುರಿಗಳ ಚರ್ಮ ಇರುವುದಾಗಿ ತಿಳಿಸಿದ್ದಾನೆ. ಈ ಬಗ್ಗೆ ನರೋಣ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದಾಗ ಪಿಎಸ್‌ಐ ವಾತ್ಸಲ್ಯ ನೇತೃತ್ವದಲ್ಲಿ ಪೊಲೀಸರು ತೆರಳಿ ಲಾರಿ ಸಮೇತ ಚರ್ಮವನ್ನು ವಶಕ್ಕೆ ಪಡೆದಿದ್ದಾರೆ. ಅಂದಾಜು 1,800 ಚರ್ಮಗಳನ್ನು ಲಾರಿಯಲ್ಲಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಲಾರಿ ಮಾಲೀಕ, ಚಾಲಕ ಸೇರಿ ಮೂವರ ವಿರುದ್ಧ ಗೋಹತ್ಯೆ ತಡೆ ಕಾಯ್ದೆ ಸೇರಿ ವಿವಿಧ ಕಲಂಗಳಡಿ ಪ್ರಕರಣ ದಾಖಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಕಳೆದ ವಾರವಷ್ಟೇ ಚಿತ್ತಾಪುರ ಪಟ್ಟಣದ ಸಮೀಪ ಅಂದಾಜು ಮೂರು ಸಾವಿರ ಜಾನುವಾರುಗಳ ಚರ್ಮಗಳನ್ನು ಜಪ್ತಿ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next