Advertisement

ಗ್ರಾಮದೇವತೆ ಜಾತ್ರೋತ್ಸವ; ಪ್ರಾಣಿ ಬಲಿ ನಿಷೇಧ

02:52 PM Mar 12, 2022 | Team Udayavani |

ಕಾನಾಹೊಸಹಳ್ಳಿ: ಮಾರ್ಚ್‌ 15ರಂದು ನಡೆಯುವ ಕಾನಾಹೊಸಹಳ್ಳಿ ಪಟ್ಟಣದ ಗ್ರಾಮ ದೇವತೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವದಲ್ಲಿ ಪ್ರಾಣಿ ಬಲಿಯನ್ನು ಕಡ್ಡಾಯವಾಗಿ ನಿಷೇಧಿಸಿದ್ದು, ಪ್ರಾಣಿ ಬಲಿ ಕೊಡುವುದು ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೊಟ್ಟೂರು ಸಿಪಿಐ ಸೋಮಶೇಖರ ಕೆಂಚರೆಡ್ಡಿ ಹೇಳಿದರು.

Advertisement

ಪಟ್ಟಣದ ಪೊಲೀಸ್‌ ಠಾಣಾ ಆವರಣದಲ್ಲಿ ಶ್ರೀ ಮಾರಿಕಾಂಬ ದೇವಿಯ ರಥೋತ್ಸವ ಹಾಗೂ ಜಾತ್ರೆಯ ಪ್ರಯುಕ್ತ ಶುಕ್ರವಾರ ಸಂಜೆ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾತ್ರೆ ನಡೆಯುವ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಸ್ವತ್ಛತೆ ಕಾಪಾಡಿಕೊಳ್ಳಬೇಕು ಎಂದು ಗ್ರಾಮ ಪಂಚಾಯ್ತಿ ಪಿಡಿಒ ನಿಂಗಪ್ಪ ಅವರಿಗೆ ಸೂಚಿಸಿದರು.

ಬೆಲೆ ಬಾಳುವ ವಸ್ತುಗಳು ಹಾಗೂ ಆಭರಣಗಳನ್ನು ಜನರು ಜನ ಸಂದಣಿ ಪ್ರದೇಶದಲ್ಲಿ ಧರಿಸಿಕೊಂಡು ಬರಬೇಡಿ. ಕೋವಿಡ್‌ ನಿಯಮ ಕಡ್ಡಾಯವಾಗಿ ಅನುಸರಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದರು. ನಂತರ ರಥೋತ್ಸವ ಹಾಗೂ ಚೌಕಿ ಸ್ಥಳವನ್ನು ಪರಿಶೀಲಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಪಿಎಸ್‌ಐ ತಿಮ್ಮಣ್ಣ ಚಾಮನೂರು, ನಾಗ ರತ್ನಮ್ಮ, ಪಿಡಿಒ ನಿಂಗಪ್ಪ ಹಾಗೂ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next