Advertisement

ಪ್ರಾಣಿಗಳ ಸೇಡು: 250 ನಾಯಿಮರಿಗಳನ್ನು ಕೊಂದ ಕೋತಿಗಳು!

04:12 PM Dec 18, 2021 | Team Udayavani |

ಬೀಡ್ : ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಕೋತಿಗಳ ಸೇಡಿನ ದಾಳಿಯಲ್ಲಿ ಸುಮಾರು 250 ನಾಯಿಮರಿಗಳು ಸಾವನ್ನಪ್ಪಿವೆ.ಗ್ರಾಮಸ್ಥರ ಪ್ರಕಾರ, ನಾಯಿಗಳ ಗುಂಪು ಮಂಗನ ಮರಿಯನ್ನು ಕೊಂದ ನಂತರ ಒಂದು ತಿಂಗಳಿನಿಂದ ಮಂಗಗಳು ಹಗೆಯಿಟ್ಟು ಅಟ್ಟಹಾಸ ಮೆರೆದಿವೆ.

Advertisement

ಶಿಶುವಿನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು, ಕೋತಿಗಳು ನಾಯಿಮರಿಗಳನ್ನು ಹಿಡಿದು ಕಟ್ಟಡಗಳು ಮತ್ತು ಮರಗಳ ಮೇಲಕ್ಕೆ ಎಳೆದುಕೊಂಡು ನಂತರ ಅವುಗಳನ್ನು ಬೀಳಿಸುತ್ತವೆ. ಸೀತಾರಾಮ್ ನೈಬಾಲ್ ಎಂಬ ವ್ಯಕ್ತಿ ತನ್ನ ಮುದ್ದಿನ ಸಾಕು ನಾಯಿ ಮರಿಯನ್ನು ಮಂಗಗಳಿಂದ ರಕ್ಷಿಸುವಾಗ ಅವರ ಕಾಲು ಮುರಿದಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಮಂಗಗಳನ್ನು ಹಿಡಿಯುವಂತೆ ಒತ್ತಾಯಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರೂ ಒಂದೇ ಒಂದು ಕೋತಿಯನ್ನು ಹಿಡಿಯಲು ವಿಫಲವಾಗಿದ್ದಾರೆ.

ಇದೀಗ ಮಂಗಗಳು ಶಾಲೆಗೆ ಹೋಗುವ ಮಕ್ಕಳನ್ನು ಗುರಿಯಾಗಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next