Advertisement
ಪ್ರಾಣಿಗಳ ಪ್ರತಿಕೃತಿಯನ್ನು ಮನೆಯಲ್ಲಿರಿಸುವ ಪ್ರವೃತ್ತಿ ಬಹಳ ಹಿಂದಿನಿಂದಲೂ ಇತ್ತು. ಆಗಿನ ರಾಜ, ಮಹಾರಾಜರು, ಬೇಟೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದವರು ಹುಲಿ ಚಿರತೆ ಮುಂತಾದ ಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಚರ್ಮ ತಂದು ಮನೆಯಲ್ಲಿ ನೇತು ಹಾಕುತ್ತಿದ್ದರು. ಇನ್ನು ಕೆಲವರು ಉತ್ತಮವಾದ ಮರದಿಂದ ಪ್ರಾಣಿಗಳ ಪ್ರತಿಕೃತಿ ಮಾಡಿಸಿ ಮನೆಯಲ್ಲಿ ಇಡುತ್ತಿ ದ್ದರು. ಇವುಗಳು ಆಗ ಅಂದದ ಜತೆ ಶ್ರೀಮಂತಿ ಕೆಯ ಸಂಕೇತಗಳೂ ಆಗಿದ್ದವು.
ಮನೆಯಲ್ಲಿ ನಿಮಗಿಷ್ಟವಾದ ಪ್ರಾಣಿಗಳ ಪ್ರತಿಕೃತಿಗಳನ್ನು ಇರಿಸುವುದು ಕಲೆಯ ಬಗ್ಗೆ ನಮ್ಮಲ್ಲಿರುವ ಪ್ರೀತಿ, ಕಾಳಜಿಯನ್ನು ತೋರಿಸುತ್ತದೆ. ವಿವಿಧ ರೀತಿಯ ಪ್ರಾಣಿ, ಪಕ್ಷಿಗಳ ಪ್ರತಿಕೃತಿ ನಿಮ್ಮ ಮನೆಯಲ್ಲಿದ್ದರೆ ಅದು ನಿಮ್ಮ ಯೋಚನೆ ಮತ್ತು ಮನಸ್ಸಿನ ಮೇಲೆ ಧನಾತ್ಮಕ ಪರಿಣಾಮ ಉಂಟುಮಾಡುತ್ತದೆ. ನೀವು ದಿನನಿತ್ಯ ಕಚೇರಿಯ ಕೆಲಸದ ಒತ್ತಡದಿಂದ ಮನೆಗೆ ಹೊದಾಗ ಎದುರಿಗೆ ಕಾಣುವ ಒಂದಷ್ಟು ಸುಂದರವಾದ ಪ್ರತಿಕೃತಿಗಳು ನಿಮ್ಮ ಮನಸ್ಸನ್ನು ಹಗುರ ಮಾಡುತ್ತವೆ. ಮನೆಯಲ್ಲಿ ಇರುವ ಪುಟ್ಟ ಮಕ್ಕಳಿಗೆ ಆಟವಾಡಲು ಮತ್ತು ಚಿಕ್ಕಂದಿನಿಂದಲೇ ಅವರಲ್ಲಿ ಪ್ರಾಣಿ ಪ್ರೀತಿ ಬೆಳೆಸುವಲ್ಲಿ ಇದು ಉಪಯುಕ್ತವಾಗಿದೆ.
Related Articles
ಪ್ರತಿಕೃತಿಗಳನ್ನು ಮನೆಗೆ ತರುವಾಗ ನಿಮ್ಮ ಮನೆಯ ಸ್ಥಳಾವಕಾಶ ನೊಡಿಕೊಂಡು ಅದಕ್ಕೆ ಹೊಂದಿಕೆಯಾಗುವಂತ ಗಾತ್ರಗಳನ್ನು ಆಯ್ಕೆ ಮಾಡಬೇಕು. ಹೆಚ್ಚು ಕಾಲ ಬಾಳಿಕೆ ಬರುವಂಥ ಉತ್ತಮ ಗುಣಮಟ್ಟ ಹೊದಿರುವುದನ್ನು ಕೊಂಡುಕೊಳ್ಳಿ. ಹೆಚ್ಚು ಭಾರವಾದಂತಹ ಪ್ರತಿಕೃತಿಗಳನ್ನು ಆದಷ್ಟು ಮಟ್ಟಿಗೆ ಕಡಿಮೆ ಮಾಡಿ. ಇವುಗಳನ್ನು ಕೊಳ್ಳುವುದರಿಂದ ನಿಮಗೆ ಆರ್ಥಿಕವಾಗಿ ಹೊರೆಯಾಗದಿರಲಿ.
Advertisement
ತರುವಂತ ಪ್ರತಿಕೃತಿಗಳು ತುಂಬಾ ಸರಳವಾಗಿರಬೇಕು. ಯಾರಾದರು ಮನೆಗೆ ಬಂದರೆ ನೋಡಿ ಭಯಪಡುವಂತಿರಬಾರದು. ಅಂದರೆ ಭಯಾನಕವಾಗಿ ನಿಂತಿರುವ ಸಿಂಹ, ಹುಲಿ, ಹಾವುಗಳ ಬದಲಾಗಿ ಸೌಮ್ಯವಾಗಿ ನಿಂತಿರುವ ಹುಲಿ, ಚಿರತೆ, ಸಿಂಹ ನಾಯಿ, ಆನೆ, ಕುದುರೆ, ಜಿಂಕೆ, ಮೊಲ ಇತ್ಯಾದಿ ಪ್ರಾಣಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚು ಸೂಕ್ತ.
ಉತ್ತಮ ನಿರ್ವಹಣೆ ಅಗತ್ಯಮನೆಗೆ ಪ್ರತಿಕೃತಿಗಳನ್ನು ತಂದ ಅನಂತರ ಅವುಗಳ ನಿರ್ವಹಣೆಯೂ ಅಷ್ಟೇ ಮುಖ್ಯ ವಾಗಿದೆ. ಮರದ ಪೃತಿಕೃತಿಗಳಾದರೆ ಅವುಗಳಿಗೆ ನೀರು ತಾಗದಂತೆ ಮತ್ತು ಹುಳು ಹಿಡಿಯದಂತೆ ಎಚ್ಚರಿಕೆ ವಹಿಸಬೇಕು. ಕಲ್ಲಿನ ಮತ್ತು ಇತರ ಯಾವುದೇ ವಸ್ತುವಿನಿಂದ ಮಾಡಿದ ಪ್ರತಿಕೃತಿಗಳನ್ನು ತುಂಬಾ ಎತ್ತರದ ಸ್ಥಳದಲ್ಲಿ ಇರಿಸುವುದ ಸೂಕ್ತವಲ್ಲ. ಏಕೆಂದರೆ ಮೇಲಿನಿಂದ ಬಿದ್ದು ಒಡೆದು ಹೋಗಬಹುದು. ಪ್ರತಿಕೃತಿಗಳು ಮನೆಯ ಅಂದವನ್ನು ಹೆಚ್ಚುವಲ್ಲಿ ಸಹಕಾರಿ. ಇವುಗಳನ್ನು ಜೋಪಾನದಿಂದ ಜತನ ಮಾಡಿದರೆ ಹಲವು ವರ್ಷಗಳ ಕಾಲ ನಮ್ಮ ಜತೆ ಇರಿಸಿಕೊಳ್ಳಬಹುದು. - ಶಿವಾನಂದ ಎಚ್.