Advertisement

ಪಶು ಸಂಗೋಪನ ಕಚೇರಿ: ಅನುದಾನದ ಕೊರತೆ ಕಟ್ಟಡ ನಿರ್ಮಾಣ ಸ್ಥಗಿತ

12:09 PM Jun 27, 2018 | Team Udayavani |

ಉಪ್ಪಿನಂಗಡಿ : ನಿರ್ಮಾಣ ಹಂತದಲ್ಲಿರುವ ಪಶುಸಂಗೋಪನ ಇಲಾಖೆಯ ಕಟ್ಟಡ ಕಾಮಗಾರಿ ಅನುದಾನ ಬಿಡುಗಡೆಯಾಗದೆ ಸ್ಥಗಿತಗೊಂಡಿದೆ. ಇಲ್ಲಿನ ಕೆಂಪಿ ಮಜಲು ರಸ್ತೆಯಲ್ಲಿರುವ ಪಶು ವೈದ್ಯಾಧಿಕಾರಿ ಕಚೇರಿಯ ಕಟ್ಟಡ ತೀರಾ ಹಳೆಯದಾಗಿರುವುದನ್ನು ಮನಗಂಡ ಆಗಿನ ಶಾಸಕಿ ಶಕುಂತಳಾ ಶೆಟ್ಟಿ, ನಬಾರ್ಡ್‌ ಯೋಜನೆಯಲ್ಲಿ 28 ರೂ. ಮಂಜೂರು ಮಾಡಿಸಿ, ಕಟ್ಟಡ ನಿರ್ಮಾಣ ಆರಂಭಿಸುವುದಕ್ಕೆ ಅನುವು ಮಾಡಿಕೊಟ್ಟಿದ್ದರು.

Advertisement

ತಮ್ಮ ಕೊನೆಯ ಅವಧಿಯಲ್ಲಿ ಮುತುವರ್ಜಿ ವಹಿಸಿ, ಶಿಲಾನ್ಯಾಸವನ್ನೂ ನೆರವೇರಿಸಿದ್ದರು. ಆದರೆ, ನಾಲ್ಕು ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಆರ್ಥಿಕ ಮಂಜೂರಾತಿಗೆ ತಾಂತ್ರಿಕ ಅಡಚಣೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಹೇಳಲಾಗಿದೆ. ದುಸ್ಥಿತಿಯಲ್ಲಿರುವ ಕಟ್ಟಡದಲ್ಲೇ ಪಶುಸಂಗೋಪನ ನಿರ್ದೇಶಕರು ಹಾಗೂ ಸಿಬಂದಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೀಗ ಬಂದೊದಗಿದೆ.

Advertisement

Udayavani is now on Telegram. Click here to join our channel and stay updated with the latest news.

Next