Advertisement
ಸಾಕು ಪ್ರಾಣಿಗಳನ್ನು ಅಂಗಡಿಯಿಂದ ಹಣ ಕೊಟ್ಟು ತೆಗೆದುಕೊಳ್ಳುವ ಬದಲು, ನಮ್ಮ ದೇಶೀಯ ನಾಯಿ ಮತ್ತು ಬೆಕ್ಕಿನ ಮರಿಗಳನ್ನು ದತ್ತು ತೆಗೆದುಕೊಳ್ಳಬೇಕು ಎಂಬುದು ಅನಿಮಲ್ ಕೇರ್ ಟ್ರಸ್ಟ್ ನ ಧ್ಯೇಯವಾಗಿದೆ. ಈ ಉದ್ದೇಶದಿಂದಾಗಿ ದತ್ತು ಶಿಬಿರಗಳನ್ನು ನಡೆಸಿ, ಅನಾಥವಾಗಿರುವ ಭಾರತೀಯ ತಳಿಯ ನಾಯಿ ಮತ್ತು ಬೆಕ್ಕುಗಳಿಗೆ ಪ್ರೀತಿಭರಿತ, ಶಾಶ್ವತವಾದ ಮನೆಗಳನ್ನು ಸೇರಿಸುವ ಕಾರ್ಯವನ್ನು ಮಾಡುತ್ತಿದೆ.
ನಾಯಿ ಮತ್ತು ಬೆಕ್ಕಿನ ಮರಿಗಳನ್ನು ದತ್ತು ತೆಗೆದುಕೊಳ್ಳಲು 200 ರೂಪಾಯಿಗಳ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಇದರಲ್ಲಿ ರಾಬೀಸ್ ತಡೆಯುವ ಲಸಿಕೆಯ ಶುಲ್ಕ ಸೇರಿದೆ. ದತ್ತು ತೆಗೆದುಕೊಳ್ಳುವವರು ತಮ್ಮ ವಾಸ್ತವ್ಯ ವಿಳಾಸದ ನಕಲು ಪ್ರತಿಯನ್ನು ನೀಡಬೆಕಾಗಿರುತ್ತದೆ. ನೀವು ಈ ಶಿಬಿರದಲ್ಲಿ ದತ್ತು ತೆಗೆದುಕೊಂಡ ಪ್ರ್ರಾಣಿಯ ಯೋಗಕ್ಷೇಮದ ಬಗ್ಗೆ ಹಾಗೂ ಅದರ ಸಂತಾನ ಹರಣ ಚಿಕಿತ್ಸೆಯ ಕುರಿತಾದಂತೆ ಅನಿಮಲ್ ಕೇರ್ ಟ್ರಸ್ಟ್ ನವರು ಬಳಿಕ ನಿಮ್ಮ ಸಂಪರ್ಕದಲ್ಲಿರುತ್ತಾರೆ.
Related Articles
ಅನಾಥವಾಗಿರುವ, ಕಾಯಿಲೆಗೆ ಒಳಗಾದ ಮತ್ತು ತೊರೆದ ಪ್ರಾಣಿಗಳಿಗೆ ರಕ್ಷಣೆ ಮತ್ತು ಆಶ್ರಯ ಒದಗಿಸಲು, 2000 ಇಸವಿಯಲ್ಲಿ ಅನಿಮಲ್ ಕೇರ್ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿತು. ದೇಶೀಯ ತಳಿಗಳನ್ನು ನಿರ್ಲಕ್ಷಿಸುವುದು ಮತ್ತು ದಾರಿಯಲ್ಲಿ ಬಿಟ್ಟುಬಿಡುವುದು ಹೆಚ್ಚಾಗಿರುವಾಗ, ಅನಿಮಲ್ ಕೇರ್ ಟ್ರಸ್ಟ್ ನವರು, ಈ ಪ್ರಾಣಿಗಳಿಗೆ ಪ್ರೀತಿಯಿಂದ ನೋಡಿಕೊಳ್ಳುವ ಮನೆಗಳನ್ನು ಹುಡುಕುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅನಿಮಲ್ ಕೇರ್ ಟ್ರಸ್ಟ್, ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾದಿಂದ ಗುರುತಿಸಲ್ಪಟ್ಟ ನೋಂದಾಯಿತ ಚಾರಿಟಬಲ್ ಟ್ರಸ್ಟ್ ಆಗಿದೆ. ಮಂಗಳೂರು ಸಿಟಿ ಕಾರ್ಪೊರೇಶನ್ಗಾಗಿ ಎಬಿಸಿ / ಎಆರ್ವಿ ನಡೆಸುತ್ತದೆ ಮತ್ತು ಮಂಗಳೂರು ಸಿಟಿ ಕಾರ್ಪೊರೇಷನ್ ಅದರ ಚಟುವಟಿಕೆಗಳನ್ನು ಅಂಗೀಕರಿಸಲಾಗಿದೆ ಮತ್ತು ಗುರುತಿಸಿದೆ.
Advertisement