Advertisement
ಸುಪ್ರೀಂಕೋರ್ಟ್ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಗಟ್ಟಲು ಪ್ರತಿವಿಭಾಗಕ್ಕೆ ಒಬ್ಬ ಪೊಲೀಸ್ ಅಧಿಕಾರಿಯನ್ನೇ ನೋಡಲ್ ಅಧಿಕಾರಿ ನೇಮಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಿಶೇಷ ಅಧಿಕಾರಿ ಗಳನ್ನು ನೇಮಿಸಲಾಗಿದೆ.
Related Articles
Advertisement
ಇತ್ತೀಚಿಗೆ ಬೆಂಗಳೂರು ನಗರದಲ್ಲಿ ಕಾರಿನ ಚಾಲಕ ನಾಯಿ ಮೇಲೆ ಕಾರು ಚಲಾಯಿಸಿದ್ದು, ಮಹಿಳೆಯೊ ಬ್ಬರು 8 ನಾಯಿ ಮರಿಗಳನ್ನು ಚರಂಡಿಗೆಸದು ಕೊಲೆಗೈ ದಿರುವ, ಬೀದಿ ನಾಯಿಗಳಿಗೆ ವಿಷವುಣಿಸಿದ ಪ್ರಕರಣ, ಬೈಕಿಗೆ ನಾಯಿಯನ್ನು ಕಟ್ಟಿಕೊಂಡು ಎಳೆದುಕೊಂಡಿರುವ ಪ್ರಕರಣಗಳು ಗಮನ ಸೆಳೆದಿತ್ತು.
ಶಿಕ್ಷೆಗಳೇನು?: ಪ್ರಾಣಿಗಳ ಮೇಲೆ ದೌಜನ್ಯ ಎಸೆಗಿದ್ದರೆ ಅಂತಹವರ ಮೇಲೆ ಪ್ರಕರಣ ದಾಖಲಾಗುತ್ತದೆ. ವ್ಯಕ್ತಿಯು ವೈಯಕ್ತಿವಾಗಿ ದೌರ್ಜನ್ಯ ಎಸಗಿದ್ದರೆ ಅಂತಹವರು 3 ಲಕ್ಷ ರೂ. ಹಾಗೂ ವಾಹನಗಳ ಮೂಲಕ ದೌರ್ಜನ್ಯ ಎಸಗಿದ್ದರೆ 10 ಲಕ್ಷ ರೂ. ಶರತ್ತುಬದ್ಧ ಬಾಂಡ್ ಮೂಲಕ ಹೊರಬರಬೇಕಾಗುತ್ತದೆ. ಒಂದು ವೇಳೆ 10 ತಿಂಗಳೊಳಗೆ ವ್ಯಕ್ತಿಯು ಮತ್ತೆ ಇಂತಹ ಪ್ರಕರಣಗಳಿಗೆ ಮರುಕಳಿಸಿದರೆ ಬಾಂಡ್ ರದ್ದುಗೊಳ್ಳಲಿದ್ದು ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಸೊಸೈಟಿ ಫಾರ್ ದಿ ಪ್ರಿವೆನ್ಶನ್ ಆಫ್ ಕ್ರೌಲ್ಟಿ ತು ಅನಿಮಲ್ಸ್ ( ಎಸ್‌ಪಿಸಿಎ) ಸದಸ್ಯ ಅರುಣ್ ಪ್ರಸಾದ್ ತಿಳಿಸುತ್ತಾರೆ.
ಸುಪ್ರೀಂ ಕೋರ್ಟ್ ಆದೇಶ ಅನ್ವಯ ಪ್ರಾಣಿಗಳ ರಕ್ಷಣೆಗಾಗಿಯೇ ಪೊಲೀಸ್ ಅಧಿಕಾರಿಯನ್ನೇ ನೋಡಲ್ ಅಧಿಕಾರಿ ನೇಮಿಸಿರುವುದರಿಂದ ಪ್ರಾಣಿಗಳ ಮೇಲಿನ ದೌರ್ಜನ್ಯ ಕಡಿವಾಣ ಹಾಕಲು ಸಾಧ್ಯವಿದೆ. ದೂರುಗಳಿಗೂ ಸೂಕ್ತವಾದ ನ್ಯಾಯ ಸಿಗಲಿದೆ. -ಅರುಣ್ ಪ್ರಸಾದ್, ಎಸ್‌ಪಿಸಿಎ ಸದಸ್ಯ
-ತೃಪ್ತಿ ಕುಮ್ರಗೋಡು