ಕುಂದಾಪುರ: ಬಿಹಾರದಿಂದ ಜೆಡಿಯು ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ ಕುಂದಾಪುರದ ಅನಿಲ್ ಪ್ರಸಾದ್ ಹೆಗ್ಡೆ ಸೋಮವಾರ ಆಯ್ಕೆಯಾದರು.ಡಾ| ಮಹೇಂದ್ರ ಪ್ರಸಾದ್ ಅವರಿಂದ ತೆರವಾದ ಸ್ಥಾನಕ್ಕೆ ಹೆಗ್ಡೆ ನಾಮಪತ್ರ ಸಲ್ಲಿಸಿದ್ದರು.
Advertisement
ಅನಿಲ್ ಅವರು ಕರ್ನಾಟಕದಲ್ಲಿ ಜನತಾದಳದ ಮೂಲಕ ರಾಜಕೀಯ ಪ್ರವೇಶಿಸಿ ಜಾರ್ಜ್ ಫೆರ್ನಾಂ ಡಿಸ್ ಜತೆಗೆ ಹೋರಾಟಗಳಲ್ಲಿ ತೊಡಗಿಕೊಂಡು ನಿತೀಶ್ ಕುಮಾರ್ ಅವರ ಆಪ್ತ ವರ್ಗದಲ್ಲಿದ್ದಾರೆ.
ಕೃಷಿಯಲ್ಲಿ ಆಸಕ್ತರಾಗಿರುವ ಅವರು 130 ಬಗೆಯ ಭತ್ತದ ತಳಿಗಳನ್ನು ಸಂಗ್ರಹಿಸಿದ್ದಾರೆ. ಸರಳ ಜೀವನಕ್ಕೆ ಉದಾಹರಣೆಯಾಗಿದ್ದಾರೆ.