Advertisement

ಪುತ್ತೂರು, ಸುಳ್ಯಕ್ಕೆ ಅಂಗಾರ ಭೇಟಿ

11:32 PM Jan 15, 2021 | Team Udayavani |

ಪುತ್ತೂರು: ಸಚಿವ ಎಸ್‌.ಅಂಗಾರ ಪುತ್ತೂರು ಶ್ರೀ ಮಹೋತೋಭಾರ ಮಹಾ ಲಿಂಗೇಶ್ವರ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ಸಹಾಯಕ ಆಯುಕ್ತ ಡಾ|ಯತೀಶ್‌ ಉಳ್ಳಾಲ್‌, ತಹಶೀಲ್ದಾರ್‌ ರಮೇಶ್‌ಬಾಬು, ಪೌರಯುಕ್ತೆ ರೂಪಾ ಶೆಟ್ಟಿ, ಬಿಜೆಪಿ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ದಿನೇಶ್‌ ಮೆದು, ಸಾಜ ರಾಧಾಕೃಷ್ಣ ಆಳ್ವ, ಕೃಷ್ಣ ಶೆಟ್ಟಿ ಕಡಬ, ಜೀವಂಧರ್‌ ಜೈನ್‌, ಬೂಡಿಯಾರ್‌ ರಾಧಾಕೃಷ್ಣ ರೈ, ರಾಕೇಶ್‌ ರೈ ಕೆಡೆಂಜಿ, ಆರ್‌.ಸಿ.ನಾರಾಯಣ, ಸುಭೋದ್‌ ಶೆಟ್ಟಿ ಮೇನಾಲ, ನವೀನ್‌ ರೈ ಮೇನಾಲ, ವಿದ್ಯಾಗೌರಿ ಮೊದಲಾದವರು ಉಪಸ್ಥಿತರಿದ್ದರು.

ದೇವಾಲಯದ ಮುಂಭಾಗದಲ್ಲಿ ಚೆಂಡೆ ವಾದನದ ಮೂಲಕ ಸಚಿವರಿಗೆ ಸ್ವಾಗತ ನೀಡಲಾಯಿತು.

ರಾಮ ಭಟ್‌ ಮನೆಗೆ ಭೇಟಿ :

ಮಾಜಿ ಶಾಸಕ ಉರಿಮಜಲು ಕೆ. ರಾಮ ಭಟ್‌ ಅವರ ಪುತ್ತೂರು ಕೊಂಬೆಟ್ಟಿನ ನಿವಾಸಕ್ಕೆ ಸಚಿವ ಎಸ್‌. ಅಂಗಾರ ಭೇಟಿ ಮಾಡಿ ಆಶೀರ್ವಾದ ಪಡೆದರು.

Advertisement

1984ರಲ್ಲಿ ಉರಿಮಜಲು ರಾಮ ಭಟ್‌ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸಂದರ್ಭ ಅವರ ಜತೆ ಕೊಡಗು ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ ಸಂದರ್ಭವನ್ನು ಅಂಗಾರ ನೆನಪಿಸಿದರು. ಕಟ್‌ ಕನ್ವರ್ಷನ್‌ ಸಹಿತ ದ.ಕ. ಜಿಲ್ಲೆಯಲ್ಲಿ ಎದುರಾಗಿರುವ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರಕಾರದ ಗಮನ ಸೆಳೆದು ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಸುಳ್ಯ ಮೀಸಲು ಕ್ಷೇತ್ರಕ್ಕೆ ಸಚಿವ ಹುದ್ದೆಯನ್ನು ನೀಡಿದ ಬಿಜೆಪಿಯ ವರಿಷ್ಠರನ್ನು, ಸಂಘ ಪರಿವಾರದ ವರಿಷ್ಠರನ್ನು ಸದಾ ಸ್ಮರಿಸುತ್ತೇನೆ. ಒಳ್ಳೆಯ ಕೆಲಸ ಮಾಡಲು ನನಗೆ ಹಿರಿಯರಿಂದ ಪ್ರೇರಣೆ ಸಿಕ್ಕಿದೆ ಎಂದು ಹೇಳಿದರು.   ಪುತ್ತೂರು ನಗರ ಮಂಡಲ ಬಿಜೆಪಿ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್‌ ರಾವ್‌, ಬಿಜೆಪಿ ದ.ಕ. ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಗುರುದತ್ತ ನಾಯಕ್‌, ನವೀನ್‌ ಪಡಿವಾಳ್‌, ಗಣೇಶ್‌ ಬಾಳಿಗ, ಅರ್ಪಣಾ ಶಿವಾನಂದ್‌, ಸುಳ್ಯ ನಗರ ಪಂ.ಅಧ್ಯಕ್ಷ ವಿನಯ್‌ ಕುಮಾರ್‌ ಕಂದಡ್ಕ ಉಪಸ್ಥಿತರಿದ್ದರು.

ಕಿವಿಮಾತು :

ಅಂಗಾರ ಅವರಿಗೆ ಹರಸಿದ ಕೆ. ರಾಮ ಭಟ್‌ ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಸಚಿವ ಕರ್ತವ್ಯ ನಿರ್ವಹಿಸುವ ಮೂಲಕ ಜಿಲ್ಲೆಗೆ, ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next