Advertisement
ಜಿಲ್ಲೆಯಲ್ಲಿ ಒಟ್ಟು 157 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಣೆ: ಅಂಗನವಾಡಿಗಳ ದಾಖಲಾತಿಗೂ ಪರಿಣಾಮ ಬೀರುತ್ತಿದೆ. ಅಂಗನವಾಡಿಗಳನ್ನು ಬಲ ಪಡಿಸಲು ಸರ್ಕಾರಗಳು ಹೆಚ್ಚು ಮುಂದಾಗಬೇಕು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 157 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. 988 ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡಗಳಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಸ್ತುತ ಅಂಗನವಾಡಿಗಳಲ್ಲಿ 29,000 ಗಡಿ ದಾಟಿದೆ. ಈ ಮಕ್ಕಳಿಗೆ ಮೂಲಭೂತ ಸೌಲಭ್ಯ ಒದಗಿಸುವುದು ಒಂದು ರೀತಿ ಸವಾಲು ಎದುರಿಸುವಂತಾಗಿದೆ.
Related Articles
Advertisement
ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಳ: ಬೆಂಗಳೂರು ಅಂತ ಜಿಲ್ಲೆಯಲ್ಲಿ ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅನ್ಯ ಜಿಲ್ಲೆಗಳಿಂದ ರಾಜ್ಯಗಳ ಕಾರ್ಮಿಕರು ಇಲ್ಲಿಗೆ ವಲಸೆ ಬಂದು ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಈ ವೇಳೆ ಅವರ ಮಕ್ಕಳು ಅಂಗನವಾಡಿಗಳಿಗೆ ಹೆಚ್ಚಾಗಿ ಸೇರುತ್ತಿದ್ದಾರೆ. ಇದರಿಂದ ಅಂಗನವಾ ಡಿಗಳ ದಾಖಲಾತಿ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿದೆ. 2024- 25 ನೇ ಸಾಲಿನಲ್ಲಿ ಹುಟ್ಟು 59 ಸಾವಿರಕ್ಕೂ ಹೆಚ್ಚು ಮಕ್ಕಳು ಅಂಗನವಾಡಿಗಳಿಗೆ ದಾಖಲಾಗಿದ್ದು. ಮತ್ತ ಷ್ಟು ಅಭಿವೃದ್ಧಿಪಡಿಸಿದರೆ ಮಕ್ಕಳ ದಾಖಲಾತಿ ಎಚ್ಚರವಾಗುವ ಸಾಧ್ಯತೆ ಇದೆ. ಸಿಎಸ್‌ಆರ್ ಅನುದಾನದಲ್ಲಿ ನಿರ್ಮಾಣಗೊಂಡಿರುವ ಅಂಗನವಾ ಡಿಗಳಿಗೆ ಹೆಚ್ಚು ಬೇಡಿಕೆ ಇದ್ದು. ಅಭಿವೃದ್ಧಿಗಳಿಗೆ ಹೆಚ್ಚಿನ ಒತ್ತು ನೀಡುವ ಕೆಲಸವಾಗಬೇಕು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1277 ಅಂಗನವಾಡಿ ಕೇಂದ್ರಗಳಿವೆ.
988 ಮಾತ್ರ ಸ್ವಂತ ಕಟ್ಟಡದಲ್ಲಿ ಕೆಲಸ ಮಾಡುತ್ತಿದೆ. ಇನ್ನುಳಿದ 134 ಬಾಡಿಗೆ ಕಟ್ಟಡಗಳಲ್ಲಿ ಹಲವು ವರ್ಷ ಗಳಿಂದಲೂ ಉಳಿಸಿಕೊಂಡಿದೆ. ಪಂಚಾಯತಿ ಕಟ್ಟಡಗಳಲ್ಲಿ ನಾಲ್ಕು, ಸಮುದಾಯ ಭವನಗಳಲ್ಲಿ 53, ಹಾಗೂ ಶಾಲೆಗಳಲ್ಲಿ 94, ಹಾಗೂ ಪರ್ಯಾಯ ವ್ಯವಸ್ಥೆಗಳಲ್ಲಿ ನಾಲ್ಕು ಕಡೆಗಳಲ್ಲಿ ಅಂಗನ ವಾಡಿಗಳು ನಡೆಯುತ್ತಿದೆ. ಇದರಲ್ಲೂ ಕೂಡ ಶೌಚಾಲಯ ಸ್ಥಳಾವಕಾಶ ಕೊರತೆ ಮಕ್ಕಳ ಆಟೋಟಕ್ಕೆ ಜಾಗವಿಲ್ಲದಂತಾಗಿದೆ.
75 ಹುದ್ದೆಗಳು ಖಾಲಿ ಇದೆ: ಬೆಂಗಳೂರು ಗ್ರಾಮಂತರ ಜಿಲ್ಲೆಯಲ್ಲಿ ಮಂಜೂರಾಗರುವ ಒಟ್ಟು 1212 ಕಾರ್ಯಕರ್ತೆಯರ ಹುದ್ದೆಗಳಲ್ಲಿ 1137 ಭರ್ತಿಯಾಗಿದ್ದು. 75 ಹುದ್ದೆಗಳು ಖಾಲಿ ಇದೆ. ಮಿನಿ ಅಂಗನವಾಡಿ ಕಾರ್ಯಕ ರ್ತೆಯರ 65 ಹುದ್ದೆಗಳಲ್ಲಿ ಹತ್ತು ಹುದ್ದೆಗಳು ಖಾಲಿ ಇದೆ. ಪ್ರಮುಖವಾಗಿ ಮಕ್ಕಳಿಗೆ ಅಡುಗೆ ಮಾಡಿ ಬಡಿಸಿ ಮಕ್ಕಳಿಗೆ ಪಾಲನೆ ಮಾಡುವ ಸಹಾಯಕಿಯರ ಒಟ್ಟು ಸಾವಿರದ1210 ಮಂಜೂರು ಹುದ್ದೆಗಳಲ್ಲಿ 963 ಮಾತ್ರ ಭರ್ತಿಯಾಗಿದೆ . 247 ಹುದ್ದೆಗಳು ಖಾಲಿ ಇದೆ. ಚುನಾವಣಾ ಪ್ರಕ್ರಿಯೆ ಗಳಿಂದ ಹುದ್ದೆಗಳ ಭರ್ತಿ ಕಾರ್ಯ ತಡವಾಗಿದೆ. ಎಂದು ಮಹಿಳಾ ಮತ್ತು ಮಕ್ಕಳ ಅಭಿ ವೃ ದ್ಧಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಸ್ವಂತ ಕಟ್ಟಡಕ್ಕಾಗಿಪಟ್ಟಿ ಸಲ್ಲಿಕೆ ಮಾಡಲಾಗಿದೆ. ಖಾಲಿ ಇರುವ ಹುದ್ದೆಗಳ ಭರ್ತಿಗೂ ಸಹ ಕ್ರಮ ವಹಿಸಲಾಗುತ್ತದೆ. ಬಾಡಿಗೆ ಕಟ್ಟಡದಲ್ಲಿ 134 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದೆ. -ಮುದ್ದಣ್ಣ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
-ಎಸ್.ಮಹೇಶ್