Advertisement
ಒಂದೂವರೆ ವರ್ಷದಿಂದ ಮನೆಯಲ್ಲಿದ್ದ ಚಿಣ್ಣರು ನಗುಮುಖದಿಂದಲೇ ತರಗತಿಗೆ ಹಾಜರಾಗಿದ್ದು, ಮೂರೂ ಕೇಂದ್ರದಲ್ಲಿ ಮೊದಲ ದಿನ ಶೇ. 60ರಷ್ಟು ಹಾಜರಾತಿ ದಾಖಲಾಗಿದೆ. ದ.ಕ. ಜಿಲ್ಲೆಯ 2,108 ಅಂಗನವಾಡಿಗಳ ಪೈಕಿ ಬೆರಳೆಣಿಕೆಯ ಕೆಲವು ಅಂಗನವಾಡಿ ಹೊರತುಪಡಿಸಿ ಬಹುತೇಕ ಕೇಂದ್ರಗಳು ಆರಂಭವಾಗಿದ್ದರೆ, ಎಲ್‌ಕೆಜಿ, ಯುಕೆಜಿ ತರಗತಿಗಳು ಜಿಲ್ಲೆಯ ಬಹುತೇಕ ಎಲ್ಲ ಕಡೆ ಆರಂಭವಾಗಿದೆ.
ಅಂಗನವಾಡಿಗಳಲ್ಲಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕೇಂದ್ರಗಳನ್ನು ವಿಶೇಷವಾಗಿ ಸಿಂಗರಿಸಿದ್ದರು. ಬಲೂನ್, ಹೂವು, ತೋರಣಗಳ ಅಲಂಕಾರ ಮಾಡಲಾ ಗಿತ್ತು. ಚಿಣ್ಣರಿಗೆ ಆರತಿ ಬೆಳಗಿ, ಹೂವು, ಸಿಹಿ-ತಿಂಡಿ ನೀಡಿ ಬರಮಾಡಿಕೊಂಡರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದ.ಕ. ಉಪನಿರ್ದೇಶಕ ಪಾಪಾ ಬೋವಿ ಅವರು ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರ ತೆರೆಯಲಾಗಿದ್ದು, ಪುಟಾಣಿಗಳು ಹೆತ್ತವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಮಕ್ಕಳು ಕೇಂದ್ರಗಳಿಗೆ ಆಗಮಿಸಿದ್ದಾರೆ. ಕೇಂದ್ರದಲ್ಲಿ ಗರಿಷ್ಠ ಮುಂಜಾಗ್ರತೆ ವಹಿಸಲಾಗಿದೆ ಎಂದರು.
Related Articles
ಉಡುಪಿ: ಜಿಲ್ಲೆಯಾದ್ಯಂತ ಸೋಮವಾರದಿಂದ ಪೂರ್ವಪ್ರಾಥಮಿಕ ಮತ್ತು ಅಂಗನ ವಾಡಿ ಕೇಂದ್ರಗಳು ಆರಂಭಗೊಂಡಿದ್ದು ಬಲೂನು, ತಳಿರು-ತೋರಣಗಳಿಂದ ಸಿದ್ಧಪಡಿಸಿದ್ದ ಕಡಿಯಾಳಿ ಅಂಗನವಾಡಿ ಕೇಂದ್ರದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಭಾಗವಹಿಸಿದರು. ಮಕ್ಕಳಿಗೆ ಚಾಕೊಲೆಟ್, ಬಲೂನ್, ಗುಲಾಬಿ ಹೂ ನೀಡಿ ಸ್ವಾಗತಿಸಲಾಯಿತು.
Advertisement
ಜಿಲ್ಲೆಯ ಎಲ್ಲ 1191 ಅಂಗನವಾಡಿಗಳು ಆರಂಭಗೊಂಡವು. ಎಲ್ಲ ಕೇಂದ್ರಗಳಲ್ಲಿ ಮಕ್ಕಳ ಸುರಕ್ಷತೆಗೆ ಗರಿಷ್ಠ ಸುರûಾ ಕ್ರಮಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದಕೈಗೊಳ್ಳಲಾಗಿತ್ತು.
ಮಂಗಳೂರು ವಿ.ವಿ.: ಕಾಲೇಜು ಆರಂಭಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಒಳಪಡುವ ಪದವಿ ಕಾಲೇಜುಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಸೋಮವಾರದಿಂದ 2021-22ನೇ ಸಾಲಿನ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದೆ. ಹೊಸ ಶಿಕ್ಷಣ ನೀತಿಯ ಕುರಿತಂತೆಯೂ ವಿದ್ಯಾರ್ಥಿಗಳಿಗೆ ಶಿಕ್ಷಕರು, ಆಯಾ ಕಾಲೇಜಿನ ಪ್ರಮುಖರು, ತಜ್ಞರು ಮಾಹಿತಿ ನೀಡಿದರು. ಮೊದಲ ದಿನ ಶೇ. 80ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳಿಗೂ ಭೌತಿಕ ತರಗತಿಗಳು ಆರಂಭವಾಗಿವೆ.