Advertisement
ರಾಜ್ಯದಲ್ಲಿ 63,030 ಅಂಗನವಾಡಿ ಕೇಂದ್ರಗಳುರಾಜ್ಯದಲ್ಲಿ 63,030 ಅಂಗನವಾಡಿ ಕೇಂದ್ರಗಳಿವೆ. ಉಡುಪಿ ಜಿಲ್ಲೆಯಲ್ಲಿ 1,222, ಕುಂದಾಪುರದಲ್ಲಿ 432 ಅಂಗನ ವಾಡಿಗಳಿವೆ. ಬಹುತೇಕ ಅಂಗನವಾಡಿಗಳಲ್ಲಿ ಕಾರ್ಯಕರ್ತೆ ಯರು ಹಾಗೂ ಸಹಾಯಕಿಯರಿದ್ದಾರೆ.
ಕೊಡಲಾಗಿದೆ. –ಸುನಂದಾ,ರಾಜ್ಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಕಾರ್ಯಕರ್ತೆಯರು, ಸಹಾಯಕಿಯರು ಸರಕಾರ ದಿಂದ ಬರುವ ಗೌರವಧನವನ್ನೇ ನಂಬಿ ಕೊಂಡಿದ್ದಾರೆ. ಮನೆ ನಡೆಸಲು, ಬೇರೆ ಬೇರೆ ಕಾರಣಗಳಿಗೆ ಸಾಲಸೋಲ ಮಾಡಿದವರಿಗೆ ಪಾವತಿ ಕಷ್ಟವಾಗುತ್ತಿದೆ. ಪ್ರತೀ ತಿಂಗಳು ಸಕಾಲದಲ್ಲಿ ಗೌರವಧನ ಪಾವತಿಗೆ ಕ್ರಮ ಕೈಗೊಳ್ಳಬೇಕು.
-ಉಷಾ ಕೆ. ಕುಂದಾಪುರ ರಾಜ್ಯ ಕಾರ್ಯದರ್ಶಿ,ಅಂಗನವಾಡಿ ಕಾರ್ಯಕರ್ತೆಯರ ಸಂಘ
Related Articles
Advertisement
ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 11 ಸಾವಿರ ರೂ. ಹಾಗೂ ಸಹಾಯಕಿಯರಿಗೆ 6 ಸಾವಿರ ರೂ. ಗೌರವಧನ ಇದೆ. ಈ ವೇತನದ ಆಧಾರದಲ್ಲಿ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಕಂತು ಪಾವತಿಸುವ ಸಾಲ ಪಡೆದವರಿದ್ದಾರೆ. ಹೆಚ್ಚಿನವರಿಗೆ ಕುಟುಂಬ ನಿರ್ವಹಣೆಗಿರುವ ಆದಾಯ ಇದೇ ಆಗಿದೆ.
ಖಾಲಿ ಹುದ್ದೆ ತುಂಬಲು ಕ್ರಮಖಾಲಿ ಇರುವ ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ನಡೆಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ 57 ಕಾರ್ಯಕರ್ತೆಯರು, 136 ಸಹಾಯಕಿಯರು, ಕುಂದಾಪುರದಲ್ಲಿ 31 ಕಾರ್ಯಕರ್ತೆಯರು, 52 ಸಹಾಯಕಿಯರ ಹುದ್ದೆ ಖಾಲಿ ಇದ್ದು, ಇದನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಗೌರವಧನ ಪಾವತಿಗೆ ಅನುದಾನ ಮಂಜೂರು ಮಾಡುವಂತೆ ಇಲಾಖೆಗೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲೇ ಮಂಜೂರಾಗುವ ಭರವಸೆ ದೊರೆತಿದೆ.
-ಶ್ಯಾಮಲಾ, ಉಪ ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉಡುಪಿ