Advertisement

ಬೇಡಿಕೆ ಈಡೇರಿಕೆಗೆ ಅಂಗನವಾಡಿ ನೌಕರರ ಆಗ್ರಹ

02:50 PM Oct 02, 2019 | Team Udayavani |

ಲಿಂಗಸುಗೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಅಂಗನವಾಡಿ ನೌಕರರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದಲ್ಲಿ 2005ರಲ್ಲಿ ಬಾಲಭವನಕ್ಕಾಗಿ ಮತ್ತು 2010ರಲ್ಲಿ ಸ್ತ್ರೀ ಶಕ್ತಿ ಭವನಕ್ಕಾಗಿ ಹಣ ಮಂಜೂರಾಗಿದ್ದರೂ ಕಾಮಗಾರಿ ಪ್ರಾರಂಭಿಸಿಲ್ಲ. ತಕ್ಷಣವೇ ಕಾಮಗಾರಿ ಪ್ರಾರಂಭಿಸಬೇಕು. ಆಹಾರ ಪಡಿತರ ವಿತರಣೆ ಹಾಗೂ ಕಳಪೆ ಪಡಿತರ ನೀಡದಂತೆ ಕ್ರಮ ಜರುಗಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಕುಡಿಯುವ ನೀರು, ಕುರ್ಚಿ-ಟೇಬಲ್‌ ಹಾಗೂ ದಾಸ್ತಾನು ವಿತರಣೆ ರಿಜಿಸ್ಟರ್‌ ಪುಸಕ್ತಗಳನ್ನು ನೀಡಬೇಕು. 4 ವರ್ಷಗಳ ಹಿಂದೆ ಮರಣ ಹೊಂದಿದ ಹಾಗೂ ನಿವೃತ್ತಿ ಹೊಂದಿದ ಅಂಗನವಾಡಿ ನೌಕರರಿಗೆ ಇಲಾಖೆಯಿಂದ ಇಡುಗಂಟು ನೀಡಬೇಕು. 2 ವರ್ಷಗಳಿಂದ ಗೌರವಧನ ನೀಡುವಲ್ಲಿ ವಿಳಂಬ ಮಾಡುತ್ತಿದ್ದು, ಪ್ರತಿ ತಿಂಗಳು ತಪ್ಪದೇ ಗೌರವಧನ ನೀಡಬೇಕು. ಖಾಲಿ ಇರುವ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಅಂಗನವಾಡಿ ಕೇಂದ್ರಗಳಾಗಿ ಪರಿವರ್ತನೆ ಮಾಡಬೇಕೆಂದು ಆಗ್ರಹಿಸಿದರು.

ಸಿಡಿಪಿಒಗೆ ತಾಕೀತು: ಅಂಗನವಾಡಿ ನೌಕರರ ಮನವಿ ಆಲಿಸಿದ ಶಾಸಕ ಡಿ.ಎಸ್‌. ಹೂಲಗೇರಿ, ಸಮಸ್ಯೆಗಳನ್ನು ಪರಿಹರಿಸುವಂತೆ ಸಿಡಿಪಿಟ ಪ್ರೇಮಮೂರ್ತಿ ಅವರಿಗೆ ತಾಕೀತು ಮಾಡಿದರು. ಅಂಗನವಾಡಿ ನೌಕರರ ಸಂಘದ ಗೌರವಾಧ್ಯಕ್ಷೆ ಶೇಕ್ಷಾ ಖಾದ್ರಿ, ಅಧ್ಯಕ್ಷೆ ಲಕ್ಷ್ಮಿ ನಗನೂರು, ಮಹೇಶ್ವರಿ, ಈರಮ್ಮ, ಗೌರಮ್ಮ, ಲಕ್ಷ್ಮಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next