Advertisement

ಅಂಗನವಾಡಿ, ಆಶಾ ಕಾರ್ಯಕರ್ತೆಯರ ಆಕ್ರೋಶ

09:02 AM Jan 09, 2019 | Team Udayavani |

ಮೈಸೂರು: ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಜಮಾಯಿಸಿದ ಜಿಲ್ಲೆಯ ನೂರಾರು ಆಶಾ ಕಾರ್ಯಕರ್ತರು ನಾನಾ ಭಿತ್ತಿಫ‌ಲಕ ಹಿಡಿದು ಧಿಕ್ಕಾರದ ಘೋಷಣೆ ಮೊಳಗಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Advertisement

ಬಳಿಕ ಪುರಭವನದ ತನಕ ಮೆರವಣಿಗೆ ಮೂಲಕ ಸಾಗಿ ಸಾರ್ವಜನಿಕ ಸಭೆ ನಡೆಸಲಾಯಿತು. ಕಾರ್ಮಿಕ ಕಾನೂನುಗಳಿಗೆ ಕಾರ್ಪೊರೇಟ್‌ ವಲಯದ ಪರ ತಿದ್ದುಪಡಿ ಕೈ ಬಿಡಬೇಕು. ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರನ್ನು ಸರಕಾರಿ ನೌಕರರೆಂದು ಘೋಷಿಸಬೇಕು.

ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಪಡಿಸಿ ಕಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕಾರ್ಮಿಕ ವಿರೋಧಿ ಹೊಸ ಸಾರಿಗೆ ನೀತಿ ಕೈಬಿಡಬೇಕು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು. ಎಐಯುಟಿಯುಸಿ ಜಿಲ್ಲಾ ಸಂಚಾಲಕ ಚಂದ್ರಶೇಖರ ಮೇಟಿ ಹಾಗೂ ಮುದ್ದುಕೃಷ್ಣ ನೇತೃತ್ವದಲ್ಲಿ ಮುಷ್ಕರ ನಡೆಯಿತು.

ಮುಷ್ಕರಕ್ಕೆ ಆಶಾ ಕಾರ್ಯಕರ್ತೆಯರ ಒಕ್ಕೂಟ, ಬಿಸಿಯೂಟ ಕಾರ್ಯಕರ್ತೆಯರ ನೌಕರರ ಸಂಘ, ಟ್ರೆçಟನ್‌ವಾಚ್‌ ಎಂಪ್ಲಾಯ್ಸ ಯೂನಿಯನ್‌, ಮೈಪಾಲ್‌ ಎಂಪ್ಲಾಯ್ಸ ಯೂನಿಯನ್‌, ಜೆ.ಕೆ.ಟೈರ್ ಎಂಪ್ಲಾಯ್ಸ ಯೂನಿಯನ್‌, ಗಾರ್ಮೆಂಟ್‌ ನೌಕರರ ಸಂಘ ಬೆಂಬಲ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next